ಉಪಸಭಾಪತಿ ಮೇಲೆ ತೋರಿರುವ ದುರ್ವರ್ತನೆ ಸರಿಯಲ್ಲ: ಪ್ರಕಾಶ್ ರಾಮಾನಾಯ್ಕ್
ಚಿತ್ರದುರ್ಗ : ಪ್ರತಿಭಟಿಸುವುದು ಪ್ರಜಾಪ್ರಭುತ್ವದ ಹಕ್ಕು. ಆದರೆ ಶಾಸನಸಭೆಯ ದೇಗುಲದಲ್ಲಿ ಮಿತಿಮೀರಿದ ದುರ್ವರ್ತನೆ ಸರಿಯಲ್ಲ. ವಿಧಾನ ಸಭೆಯ ಉಪ ಸಭಾಪತಿಯಾದ
ಸನ್ಮಾನ್ಯ ರುದ್ರಪ್ಪ ಲಮಾಣಿ ಯವರ ಮುಖದ ಮೇಲೆ ಪೇಪರ್ ಎಸೆದು ಬಿಜೆಪಿ ಶಾಸಕರು ತಮ್ಮ ನೀಚ ಮನಸ್ಥಿತಿಯನ್ನು ರಾಜ್ಯಕ್ಕೆ ತೋರ್ಪಡಿಸಿದ್ದಾರೆ.
ಆಡಳಿತ ಪಕ್ಷದಲ್ಲಿದಾಗ ಬಿಜೆಪಿ ಮಿತಿಮೀರಿದ ಭ್ರಷ್ಟಾಚಾರ,ಅಕ್ರಮ , ದೀನದಲಿತರ ವಿರೋಧಿ ನೀತಿಗಳಿಂದ ರಾಜ್ಯದಲ್ಲಿ ಹೀನಾಯವಾಗಿ ಸೋತಿದ್ದು, ಪರಿಶಿಷ್ಠರನ್ನು ಕಡೆಗಣಿಸಿದ್ದಲ್ಲದೆೇ ಅತ್ಯುನ್ನತ ಸ್ಥಾನದಲ್ಲಿ ಕುಳಿತ ಒಬ್ಬ ಬಂಜಾರ ಶಾಸಕರನ್ನು ಸಹಿಸದೇ ಈ ರೀತಿ ಅವಮಾನಿಸಿ ಬಿಜೆಪಿ ಶಾಸಕರ ಹೀನ ಮನಸ್ಥಿತಿಯ ದುರ್ವತನೆ ತೋರಿರುವುದು ಖಂಡನೀಯ.
ಸದನದಲ್ಲಿ ಒಂದು ಶಿಷ್ಟಾಚಾರ ಪಾಲನೆ ಮಾಡಲು ಗೊತ್ತಿಲ್ಲದ ಇಂಥವರನ್ನು ಕೇವಲ ಅಮಾನತ್ತಿನಲ್ಲಿಡದೇ ಉಚ್ಚಾಟಿಸಬೇಕು. ಪೇಪರ್ ಬಿಸಾಡಿದ ಆ ಗೂಂಡಾ ಶಾಸಕರು ಕ್ಷಮೆ ಕೇಳಿದ ಮೇಲೆಯೇ ಮುಂದಿನ ಸದನಕ್ಕೆ ಪ್ರವೇಶಿಸಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು. ಎಂದು ಪ್ರಕಾಶ ರಾಮಾನಾಯ್ಕ್ ಅಧ್ಯಕ್ಷರು, ಜಿಲ್ಲಾ ಬಂಜಾರ ವಿದ್ಯಾರ್ಥಿ ಸಂಘ ಮತ್ತು ಐಟಿ ವಿಭಾಗ , ಜಿಲ್ಲಾ ಕಾಂಗ್ರೆಸ್ ಸಮಿತಿ ಚಿತ್ರದುರ್ಗ ಇವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.