ಜಿಲ್ಲಾ, ತಾಲ್ಲೂಕು ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿ ನಿರ್ಣಯ: ಆಕ್ಷೇಪಣೆ ಸಲ್ಲಿಸಲು ಸೂಚನೆ
ದಾವಣಗೆರೆ: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದಿಂದ ೨೦೧೧ ರ ಜನಗಣತಿಯನ್ವಯ ಜನಸಂಖ್ಯೆಯನ್ನಾಧರಿಸಿ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ
ಪಂಚಾಯತ್ ಸದಸ್ಯರ ಸ್ಥಾನಗಳ ವ್ಯಾಪ್ತಿಯನ್ನು ಪುನರ್ ನಿಗಧಿ ಮಾಡಿದ್ದು ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಜುಲೈ ೨೪ ರೊಳಗಾಗಿ ಲಿಖಿತವಾಗಿ ಸಲ್ಲಿಸಲು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ೨೦೧೧ ರ ಜನಗಣತಿಯನ್ವಯ ದಾವಣಗೆರೆ ಜಿಲ್ಲೆಯ ಗ್ರಾಮೀಣ ಜನಸಂಖ್ಯೆ ೧೦೨೪೭೦೫ ಇದ್ದು ಜಿಲ್ಲೆಯಲ್ಲಿ ೯೮ ತಾಲ್ಲೂಕು ಪಂಚಾಯತ್ ಮತ್ತು ೨೯ ಜಿಲ್ಲಾ ಪಂಚಾಯತ್ ಸದಸ್ಯರ ಸಂಖ್ಯೆ ಇರುತ್ತದೆ. ತಾಲ್ಲೂಕುವಾರು ವಿವರದನ್ವಯ ನ್ಯಾಮತಿ ಗ್ರಾಮೀಣ ಜನಸಂಖ್ಯೆ ೭೫೮೪೬ ಇದ್ದು ೯ ತಾ.ಪಂ, ೨ ಜಿ.ಪಂ ಸದಸ್ಯರ ಸಂಖ್ಯೆ,ಹೊನ್ನಾಳಿ ೧೨೫೯೫೭ ಗ್ರಾಮೀಣ ಜನಸಂಖ್ಯೆ ಇದ್ದು ೧೩ ತಾ.ಪಂ, ೪ ಜಿ.ಪಂ ಸ್ಥಾನಗಳು, ಹರಿಹರ ೧೪೦೩೫೫ ಗ್ರಾಮೀಣ ಜನಸಂಖ್ಯೆ ಇದ್ದು ೧೫ ತಾ.ಪಂ ಮತ್ತು ೪ ಜಿ.ಪಂ, ಜಗಳೂರು ೧೫೪೫೬೫ ಗ್ರಾಮೀಣ ಜನಸಂಖ್ಯೆ ಇರುತ್ತದೆ.
ಇಲ್ಲಿ ೧೬ ತಾ.ಪಂ, ೪ ಜಿ.ಪಂ ಸ್ಥಾನಗಳು, ದಾವಣಗೆರೆ ೨೪೭೦೦೮ ಗ್ರಾಮೀಣ ಜನಸಂಖ್ಯೆ ಇದ್ದು ೨೧ ತಾ.ಪಂ ಮತ್ತು ೭ ಜಿ.ಪಂ ಸ್ಥಾನಗಳು, ಚನ್ನಗಿರಿ ತಾಲ್ಲೂಕಿನಲ್ಲಿ ೨೮೧೦೦೪ ಗ್ರಾಮೀಣ ಜನಸಂಖ್ಯೆ ಇದ್ದು ೨೪ ತಾ.ಪಂ ಮತ್ತು ೮ ಜಿಲ್ಲಾ ಪಂಚಾಯತ್ ಸ್ಥಾನಗಳನ್ನು ನಿಗಧಿ ಮಾಡಲಾಗಿದೆ.
ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯಿತಿ ಸೀಮಾ ನಿರ್ಣಯ ನಿರ್ಧರಿಸುವ ಕುರಿತು ಸಲಹೆ, ಸೂಚನೆ ಮತ್ತು ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದ ತಾಲ್ಲೂಕು ಪಂಚಾಯಿತಿ
ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ತಹಶೀಲ್ದಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಥವಾ ಜಿಲ್ಲಾಧಿಕಾರಿಗಳಿಗೆ ಜು.೨೪ರ ಸಂಜೆ ೫ ಗಂಟೆಯೊಳಗಾಗಿ ಸಲ್ಲಿಸಲು ತಿಳಿಸಲಾಗಿದೆ.