fire; ಡಾಬಾ ಭಸ್ಮಗೊಳಿಸಿದ ದುಷ್ಕರ್ಮಿಗಳು, ಪರಿಕರಗಳು ಭಸ್ಮ

fire

ದಾವಣಗೆರೆ, ಆ.18: ಸಮೀಪದ ಲೋಕಿಕೆರೆ ಗ್ರಾಮದ ಶ್ಯಾಗಲೆ ರಸ್ತೆಯಲ್ಲಿರುವ ಬಾಬು ಡಾಬಾಕ್ಕೆ ದುಷ್ಕರ್ಮಿಗಳು ಬೆಂಕಿ (fire) ಹಚ್ಚಿ ಭಸ್ಮಗೊಳಿಸಿ ಪರಾರಿಯಾಗಿದ್ದಾರೆ.

ಗ್ರಾಮದ ಪಟ್ಲೆಲೇರ ಮಂಜಪ್ಪ ಎಂಬುವರಿಗೆ ಸೇರಿದ ಡಾಬಾ (Dhaba) ಇದಾಗಿದೆ. ಈ ಕೃತ್ಯದಿಂದ ಡಾಬಾದಲ್ಲಿರುವ ಪಡಿತರ ವಸ್ತುಗಳು, ಶೆಡ್, ಟೇಬಲ್, ಕುರ್ಚಿ ಇನ್ನಿತರೆ ಅಡುಗೆ ಪರಿಕರಗಳು ಸುಟ್ಟು ಕರಕಲಾಗಿವೆ.

accident; ಮಾನವೀಯತೆ ಮೆರೆದ ಮಾಜಿ ಶಾಸಕ ರೇಣುಕಾಚಾರ್ಯ

ರಾತ್ರಿ ಸಮಯದಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹದಡಿ ಪೋಲಿಸರಿಗೆ (police) ದೂರು ನೀಡಲಾಗಿದ್ದು ಶೀಘ್ರ ದುಷ್ಕೃತ್ಯ ಎಸಗಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!