lokayukta raid; ಆದಾಯಕ್ಕಿಂತ 1.60 ಕೋಟಿ ರೂ. ಹೆಚ್ಚು ಆಸ್ತಿ ಮಾಡಿದ ಇಂಜಿನಿಯರ್ ದಂಪತಿ
ದಾವಣಗೆರೆ, ಆಗಸ್ಟ್ 18: ಇಂಜಿನಿಯರ್ ದಂಪತಿ ಮನೆಯ ಮೇಲೆ ಲೋಕಾಯುಕ್ತ ದಾಳಿ (Lokayukta raid) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾ ಅಧಿಕಾರಿಗಳ ತಂಡವು ಶುಕ್ರವಾರ ಇವರ ದಾವಣಗೆರೆಯ ಜಯನಗರದಲ್ಲಿರುವ ಮನೆಯಲ್ಲಿ ನಿರಂತರ 14 ಗಂಟೆಗಳ ಕಾಲ ನಡೆಸಿದ ಪರಿಶೀಲನೆ ಮುಕ್ತಾಯಗೊಂಡಿದೆ.
ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ (Small irrigation Department) ಇಂಜಿನಿಯರ್ ಕೆ.ಮಹೇಶ್ ಹಾಗೂ ಬಿಬಿಎಂಪಿ (bbmp) ಇಇ ಎಚ್.ಭಾರತಿ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಚಿನ್ನ, ಬೆಳ್ಳಿ, ನಗದು ಪತ್ತೆಯಾಗಿದೆ.
lokayukta; ಪತಿ-ಪತ್ನಿ ಇಬ್ಬರೂ ಇಂಜಿನಿಯರ್; ಲೋಕಾ ದಾಳಿಯಲ್ಲಿ ಲಕ್ಷಾಂತರ ನಗದು, ಚಿನ್ನಾಭರಣ ಪತ್ತೆ
ದಾಳಿ ವೇಳೆ 800 ಗ್ರಾಂ ಚಿನ್ನಾಭರಣ, ಅರ್ಧ ಕೆಜಿಗಿಂತ ಹೆಚ್ಚು ಬೆಳ್ಳಿ (silver) ಆಭರಣ, 15 ಲಕ್ಷ ರೂಪಾಯಿ ನಗದು ದೊರಕಿದ್ದು, ಇವುಗಳನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ.
ಇನ್ನು ಇದೇ ವೇಳೆ 4 ನಿವೇಶನಗಳು ಪತ್ತೆಯಾಗಿದ್ದು, ಭಾರತಿ ಹೆಸರಲ್ಲಿ 18 ಎಕರೆ ಜಮೀನು ಇರುವುದು ಕೂಡ ತಿಳಿದು ಬಂದಿದೆ. ದಂಪತಿ ಆದಾಯಕ್ಕಿಂತ 1.60 ಕೋಟಿ ರೂ. ಹೆಚ್ಚು ಆಸ್ತಿ ಇರುವುದು ಕೂಡ ಬಯಲಾಗಿದ್ದು, ಎಲ್ಲ ದಾಖಲೆಗಳನ್ನ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಾಳೆಯೇ (ಶನಿವಾರ) ದಾಖಲೆಗಳನ್ನ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಸಾಧ್ಯತೆ ಇದೆ.