ನಿರುದ್ಯೋಗ ಯುವಕ, ಯುವತಿಯರಿಂದ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ
ದಾವಣಗೆರೆ: ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಿಂದ 18 ರಿಂದ 35 ವರ್ಷದೊಳಗಿನ, ಕನಿಷ್ಠ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿದ ನಿರುದ್ಯೋಗ ಯುವಕ, ಯುವತಿಯರಿಂದ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿರುತ್ತದೆ. ತರಬೇತಿ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತದೆ.
ಕೋರ್ಸುಗಳ ವಿವರ: ಆಟೋಮೇಷನ್ ಅಂಡ್ ಕಂಟ್ರೋಲ್, ರಿವರ್ಸ್ ಇಂಜಿನಿಯರಿಂಗ್, ಇಂಟರ್ನೆಟ್ ಆಫ್ ಥಿಂಗ್(ಐಒಟಿ), 3ಡಿ ಪ್ರಿಂಟಿಂಗ್(ಆರ್.ಪಿ.ಟಿ), ಸಿ.ಎನ್.ಸಿ. ಮ್ಯಾನುಫ್ಯಾಕ್ಚರಿಂಗ್ ಅಂಡ್ ಮಷಿನಿಂಗ್, ವ್ಯಾಲಿಡೇಷನ್ ಲ್ಯಾಬ್, ರಿಯಾಲಿಟಿ ಲ್ಯಾಬ್, ಸಿ.ಎನ್.ಸಿ ಆಪರೇಟ್ ಟರ್ನಿಂಗ್, ಪ್ರೊಡಕ್ಟ್ ಡಿಸೈನ್ ಅಂಡ್ ಡೆವಲಪ್‍ಮೆಂಟ್, ಸಿ.ಎನ್.ಸಿ. ಪ್ರೊಗ್ರಾಮರ್, ಸಿ.ಎನ್.ಸಿ. ಮಿಲ್ಲಿಂಗ್ ಮಷಿನ್ ಆಪರೇಟರ್, ಸಿ.ಎನ್.ಸಿ. ಪ್ರೊಗ್ರಾಮಿಂಗ್ ಮತ್ತು ಆಪರೇಷನ್, ಟರ್ನರ್ ಪ್ರೊಡಕ್ಷನ್ ಇಂಜಿನಿಯರ್(ಸಿಎಡಿ-ಸಿಎಎಮ್), ಡಿಸೈನರ್ ಮೆಕಾನಿಕಲ್, ಮಿಲ್ಲರ್, ಗ್ರೈಡರ್, ಟೂಲ್ ರೂಮ್ ಮಷಿನಿಸ್ಟ್ ತರಬೇತಿಯನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ 22 ಸಿ ಮತ್ತು ಡಿ. ಕೆ.ಐ.ಎ.ಡಿ.ಬಿ, ಕೈಗಾರಿಕಾ ಪ್ರದೇಶ ಹರ್ಲಾಪುರ, ಹರಿಹರ-577601 ಮೊ. ನಂ: 9845941245/8711913947 ಗೆ ಸಂಪರ್ಕಿಸಲು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ತಿಳಿಸಿದ್ದಾರೆ.