ಪರವಾನಗಿ ಪಡೆಯದೇ ಚೀಟಿ ನಡೆಸುವ ಸಂಸ್ಥೆಗಳ ವಿರುದ್ದ ಕಾನೂನು ಕ್ರಮ – ಹೆಚ್.ಅನ್ನಪೂರ್ಣ

ದಾವಣಗೆರೆ: ಜಿಲ್ಲೆಯಲ್ಲಿ ಅನಧಿಕೃತ ಚೀಟಿ ಗುಂಪು  ಪರವಾನಿಗೆ ಪಡೆಯದೆ ಚೀಟಿ ಗುಂಪು ನಡೆಸುವ ಚೀಟಿ ಸಂಸ್ಥೆಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು. ಅನಧಿಕೃತ ಚೀಟಿ ವ್ಯವಹಾರ ನಡೆಸುತ್ತಿರುವುದು ಹಾಗೂ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿರುವುದರಿಂದ ಅನಧಿಕೃತವಾಗಿ ಚೀಟಿ ವ್ಯವಹಾರ ನಡೆಸುವುದು ಕಾನೂನು ಬಾಹಿರವಾಗಿದ್ದು,

ಸಾರ್ವಜನಿಕರು ಅನಧಿಕೃತ ಚೀಟಿ ಸಂಸ್ಥೆಗಳು ಅಥವಾ ವ್ಯಕ್ತಿಗಳೊಂದಿಗೆ ವ್ಯವಹರಿಸಿ ಮೋಸ ಹೋಗಬಾರದು. ಅಧಿಕೃತ ಚೀಟಿ ಸಂಸ್ಥೆಗಳಲ್ಲಿ, ಸಂಸ್ಥೆಯು ನಡೆಸುತ್ತಿರುವ ಚೀಟಿ ಗುಂಪುಗಳಿಗೆ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ಬಗ್ಗೆ ಸಂಸ್ಥೆಯಿಂದ ಮಾಹಿತಿ ಪಡೆದು ಖಚಿತಪಡಿಸಿಕೊಂಡು ಅಧಿಕೃತವಾಗಿ ವ್ಯವಹರಿಸಬೇಕೆಂದು ಸಹಕಾರ ಸಂಘಗಳ ಉಪ ನಿಬಂಧಕರಾದ ಹೆಚ್.ಅನ್ನಪೂರ್ಣ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!