ಒಂದೇ ದಿನದಲ್ಲಿ 3 ಸಾವಿರಕ್ಕೂ ಹೆಚ್ಚು ಪಹಣಿ ತಿದ್ದುಪಡಿ; ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ

ದಾವಣಗೆರೆ; ರೈತರು ತಮ್ಮ ಭೂಮಿಯ ದಾಖಲೆಗಳನ್ನು ಸರಿಪಡಿಸಲು ತಾಲ್ಲೂಕು ಕಚೇರಿಗೆ ಹೋಗುವುದು ಸಾಮಾನ್ಯ ಆದರೆ ಜಿಲ್ಲಾ ಆಡಳಿತ ಒಂದೇ ದಿನದಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ಪಹಣಿ ತಿದ್ದುಪಡಿ ಪ್ರಕರಣಗಳನ್ನು ಇತ್ಯರ್ಥ ಮಾಡಿ ಸರಿಪಡಿಸಿದ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾ ಆಡಳಿತ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ತಿಳಿಸಿದ್ದಾರೆ.

ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಒಟ್ಟು 4600 ಕ್ಕಿಂತ ಹೆಚ್ಚು ಪಹಣಿ ತಿದ್ದುಪಡಿ ಪ್ರಕರಣಗಳು ಬಾಕಿ ಇದ್ದು ರೈತರು ಇದರಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದರು. ಇದನ್ನು ಜಿಲ್ಲಾ ಆಡಳಿತ ಮನಗಂಡು ಶೀಘ್ರದಲ್ಲಿ ತಿದ್ದುಪಡಿ ಮಾಡಿ ದಾಖಲೆಗಳನ್ನು ಸರಿಪಡಿಸಿಕೊಡಲು ಉದ್ದೇಶಿಸಿ ಆಗಸ್ಟ್ 23 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಮೂಲ ಕಡತಗಳೊಂದಿಗೆ ತಿದ್ದುಪಡಿ ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಲಾಯಿತು. ತಿದ್ದಪಡಿ ಪ್ರಕರಣಗಳಲ್ಲಿ ಹೆಸರು ತಪ್ಪಾಗಿರುವುದು, ವಿಸ್ತೀರ್ಣ ವ್ಯತ್ಯಾಸ, ಇಂಡೀಕರಣ ಆಗದೇ ಇರುವುದು, ಎರಡು ಭಾರಿ ಮ್ಯುಟೇಷನ್ ದಾಖಲು, ಕಾಲಂ 3 ಮತ್ತು 9 ರಲ್ಲಿ ತಪ್ಪಾಗಿ ನಮೂದು ಆಗಿರುವುದು ಸೇರಿದಂತೆ ವಿವಿಧ ಬಗೆಯ 9 ತರಹದ ತಿದ್ದುಪಡಿಗಳನ್ನು ಸರಿಪಡಿಸಲಾಯಿತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!