audio leak; ಯಡಿಯೂರಪ್ಪ, ಶೆಟ್ಟರ್, ಈಶ್ವರಪ್ಪ ಮುಗಿಸುತ್ತೇನೆ ಎಂದಿದ್ದ ಕಟೀಲ್ ಆಡಿಯೋ ಲೀಕ್ ರೇಣುಕಾಚಾರ್ಯ ಸ್ಪಷ್ಟನೆ
ದಾವಣಗೆರೆ : audio leak ಮಾಜಿ ಶಾಸಕ ರೇಣುಕಾಚಾರ್ಯ ದಿನೇದಿನೇ ಬಿಜೆಪಿ ನಾಯಕರ ವಿರುದ್ದ ಹರಿಹಾಯುವ ಚಾಳಿ ಮುಂದುವರಿದಿದ್ದು, ಈಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ದಾವಣಗೆರೆಯಲ್ಲಿ ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಯಡಿಯೂರಪ್ಪ, ಜಗದೀಶ ಶೆಟ್ಟರ್, ಈಶ್ವರಪ್ಪರನ್ನು ಮುಗಿಸುತ್ತೇವೆ ಎಂದು ನಳೀನ್ ಕುಮಾರ್ ಕಟೀಲ್ ಆಡಿಯೋ ಲೀಕ್ ಆಗಿತ್ತು. ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.
sand; ಅಧಿಕ ಮರಳು ಸಾಗಿಸುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ಅಧಿಕಾರಿಗಳು, ಖಡಕ್ ವಾರ್ನಿಂಗ್
ಬೆಳಗ್ಗೆ 8.30ಕ್ಕೆ ನಳೀನ್ ಕುಮಾರ್ ಕಟೀಲ್ ನನಗೆ ಪೋನ್ ಮಾಡಿದ್ದರು, ನಾನು ಹೇಳಿರುವ ಆಡಿಯೋ ಲೀಕ್ ಆಗಿದೆ. ಇದನ್ನು ಸಮರ್ಥನೆ ಮಾಡಿಕೊಳ್ಳಿ ಎಂದು ನನಗೆ ಹೇಳಿದ್ದರು. ಅಂತೆಯೇ ನಾನು ಸಮರ್ಥನೆ ಮಾಡಿಕೊಂಡಿದ್ದೇ.
ಅದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿದ್ದೆ ಆಡಿಯೋನೇ ಆಗಿತ್ತು. ಅಂದು ನನಗೆ ಬೆಳಗ್ಗೆ ಕಟೀಲ್ ಕರೆ ಮಾಡಿ, ಮಾತಿನ ಬಗ್ಗೆ ಏನಾದರೂ ಹೇಳಿ ಎಂದಿದ್ದರು. ರೇಣುಕಾಚಾರ್ಯ ಹಿಂಗಾಗಿದೆ ಆ ವೈಸ್ ನಂದಲ್ಲ. ನೀವೇ ಸಮರ್ಥನೆ ಮಾಡಿಕೊಳ್ಳಿ ಎಂದು ಕೇಳಿಕೊಂಡಿದ್ದರು. ಆದರೆ, ನಾನು ಅವರದ್ದಲ್ಲ ಎಂದು ಸಮರ್ಥನೆ ಮಾಡಿಕೊಂಡೆ. ಅದು ಅವರೆ ಮಾತನಾಡಿರುವ ಆಡಿಯೋ. ಆದರೆ ಅವರು ಹೇಳಿದಂತೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪರನ್ನ ಮುಗಿಸಿದರು. ಅಂದುಕೊಂಡಂತೆ ಎಲ್ಲವನ್ನು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಡಿಯೋ ಬಗ್ಗೆ ಬಿಜೆಪಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.