valmiki swamyji; ರಾಜನಹಳ್ಳಿ ಸ್ವಾಮೀಜಿ ಬದಲಾವಣೆಗೆ ಉಗ್ರ ಹೋರಾಟ: ಸಭೆಯಲ್ಲಿ ಎಚ್ಚರಿಕೆ

ರಾಜನಹಳ್ಳಿ ಸ್ವಾಮೀಜಿ ಬದಲಾವಣೆಗೆ ಉಗ್ರ ಹೋರಾಟ: ಸಭೆಯಲ್ಲಿ ಎಚ್ಚರಿಕೆ

ಬೆಂಗಳೂರು: ಸೆ.11: valmiki swamyji ದಾವಣಗೆರೆ ರಾಜನಹಳ್ಳಿಯ ವಾಲ್ಮೀಕಿ ಗುರಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಪೀಠ ತ್ಯಾಗಕ್ಕೆ ವ್ಯಾಪಕ ಆಗ್ರಹ ಕೇಳಿಬರುತ್ತಿದೆ. ಈ ಕಾರಣಕ್ಕಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಸಂರಕ್ಷಣಾ ಹೋರಾಟ ಸಮಿತಿ ಇಂದು ಬಹಿರಂಗ ಸಭೆ ನಡೆಸಿತು.

ಸಭೆಯಲ್ಲಿ ವಾಲ್ಮೀಕಿ ಸಮಾಜದ ವಿವಿಧ ಮಠಾಧೀಶರು, ರಾಜ್ಯದ ವಿವಿಧ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿ ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಸನ್ನಾನಂದಪುರಿ ಸ್ವಾಮೀಜಿಗೆ ಸಂಸ್ಕೃತಿ, ಸಂಸ್ಕಾರ ಇಲ್ಲ. ಎಲ್ಲರ ಬಳಿಯೂ ಅವಾಚ್ಯ, ಅಶ್ಲೀಲ ಪದಗಳನ್ನು ಬಳಕೆ ಮಾಡುತ್ತಾರೆ. ಇವರು ಚಿತ್ರದುರ್ಗದ ಮುರುಘಾಮಠದ ಶಿಷ್ಯ. ಇವರಿಗೆ ವಿದ್ಯೆ ಇಲ್ಲ. ಹೀಗಾಗಿ ಈ ರೀತಿ ಪದ ಬಳಕೆ ಮಾಡುತ್ತಾರೆ. ಪ್ರಶ್ನಿಸಿದವರಿಗೆ ಬೆದರಿಕೆ ಹಾಕುತ್ತಾರೆ. ಹೀಗಾದರೆ ಹೇಗೆ ಸಮಾಜದ ಉದ್ಧಾರ ಸಾಧ್ಯ ಎಂದು ಪ್ರಶ್ನಿಸಿದರು.

audio leak; ಯಡಿಯೂರಪ್ಪ, ಶೆಟ್ಟರ್, ಈಶ್ವರಪ್ಪ ಮುಗಿಸುತ್ತೇನೆ ಎಂದಿದ್ದ ಕಟೀಲ್ ಆಡಿಯೋ ಲೀಕ್ ರೇಣುಕಾಚಾರ್ಯ ಸ್ಪಷ್ಟನೆ

ರಾಯಚೂರು ಜಿಲ್ಲೆ ಗೋಲಪಲ್ಲಿಯ ವರದಾನೇಶ್ವರ ಸ್ವಾಮೀಜಿ ಮಾತನಾಡಿ, ನಮ್ಮ ನಾಯಕ ಸಮಾಜಕ್ಕೆ ಹಿಂದಿನ ಗುರುಗಳಾದ ಶ್ರೀ ಪುಣ್ಯಾನಂದಪುರಿ ಸ್ವಾಮೀಗಳು ಬೆವರು ಸುರಿಸಿದ್ದಾರೆ. ಹಗಲು ರಾತ್ರಿ ದುಡಿದು ಮಠ ಕಟ್ಟಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಆದರೆ ಪ್ರಸನ್ನಾನಂದಪುರಿ ಸ್ವಾಮೀಜಿ ಬಂದ ನಂತರ ಇದ್ದ ಶಿಕ್ಷಣ ಸಂಸ್ಥೆಗಳೂ ಮಾಯವಾಗಿವೆ. ಇವರ ಕಾಟಕ್ಕೆ ನಾವು ಎಲ್ಲೂ ಓಡಾಡದ ಹಾಗಾಗಿದೆ. ಪ್ರಸನ್ನಾನಂದಪುರಿ ಮೊದಲು ರಮೇಶ್ ಗುಡಿ. ನಮ್ಮಲ್ಲಿ ಗುಡಿ ಸಂಸ್ಕತಿ ಇಲ್ಲ. ಇವರು ನಮ್ಮಲ್ಲಿ ಯಾವ ಸಂಸ್ಕೃತಿಯವರು ಎಂಬುದೇ ಗೊತ್ತಿಲ್ಲ. ಪಟ್ಟಾಭಿಷೇಕ ಆದ ಮೇಲೆ ಬರೀ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಲೇ ರಮೇಶ್ ಗುಡಿ ಬದುಕುತ್ತಿದ್ದಾರೆ. ಆದರೆ ಪುಣ್ಯಾನಂದಪುರಿ ಸ್ವಾಮೀಜಿ ಬಗ್ಗೆ ಅಸಹ್ಯವಾಗಿ, ಅವಾಚ್ಯವಾಗಿ ಮಾತನಾಡುತ್ತಾರೆ. ಇದನ್ಹು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

rajanahalli valmiki gurupeetha

ರಾಜನಹಳ್ಳಿ ವಾಲ್ಮೀಕಿ ಪೀಠದ ಟ್ರಸ್ಟಿಗಳಾದ ಶ್ರೀ ಡಾ. ರಂಗಯ್ಯ ಮಾತನಾಡಿ, ಮೊದಲು ಈ ರಾಜನಹಳ್ಳಿ ಟ್ರಸ್ಟ್ ನಲ್ಲಿ 13 ಜನ ಮಾತ್ರ ಇದ್ದೆವು. ಆದರೆ ಅಧ್ಯಕ್ಷರಾಗಿದ್ದ ಸತೀಶ್ ಜಾರಕಿಹೊಳಿ ಅವರೂ ಪ್ರಸನ್ನಾನಂದಪುರಿ ಸ್ವಾಮೀಜಿಗೇ ಅಧ್ಯಕ್ಷ ಸ್ಥಾನ ನೀಡಿದರು. ಈಗ ಸ್ವಾಮೀಜಿ ಯಾವ ಟ್ರಸ್ಟಿಗಳನ್ನೂ ಕರೆದು ಸಭೆ ಮಾಡೊಲ್ಲ. ಏಕಾಎಕಿ ನಿರ್ಧಾರ ಕೈಗೊಳ್ತಾರೆ. ಅವರದೇ ದರ್ಬಾರ್ ಆಗಿದೆ. ಕೆಲವು ಟ್ರಸ್ಟಿಗಳು ನಿಧನರಾಗಿದ್ದಾರೆ. ಅವರ ಜಾಗಕ್ಕೆ ಯಾರನ್ನೂ ಕೇಳದೆ ತಮಗೆ ಬೇಕಾದವರನ್ನು ಸೇರಿಸಿಕೊಂಡು ಸರ್ವಾಧಿಕಾರ ನಡೆಸುತ್ತಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತಲೇಬೇಕು. ಇದರಿಂದ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದರು.

ಪ್ರಸನ್ನಾನಂದಪುರಿ ಸ್ವಾಮೀಜಿಯವರನ್ನು ಕಿತ್ತುಹಾಕಬೇಕು. ಆದರೆ ಅದು ಸುಲಭವಲ್ಲ. ಅದಕ್ಕೆ ಸಚಿವರ ಜೊತೆಗೂಡಿ ಸರಿಯಾದ ಚರ್ಚೆ ನಡೆಸಬೇಕು. ನಂತರ ನಿರ್ಧಾರ ಮಾಡಬೇಕು ಎಂದ ಅವರು, ಪುಣ್ಯಾನಂದಪುರಿ ಸ್ವಾಮೀಜಿಗಳು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದರು. ಹಗಲು ರಾತ್ರಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಶ್ರಮಿಸಿದರು. ಆದರೆ ಈ ಪ್ರಸನ್ನಾನಂದಪುರಿ ಸ್ವಾಮೀಜಿಗೆ ಸಮಾಜದ ಪರ, ಸಮಾಜದ ಮಕ್ಕಳ ಶಿಕ್ಷಣದ ಪರವಾದ ಕಾಳಜಿಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ, ಪ್ರಸನ್ನಾನಂದಪುರಿ ಸ್ವಾಮೀಜಿ ಸಂಸಾರ ಮಾಡಿಕೊಂಡಿರುವುದಾದರೆ ಇರಲಿ. ಸಮಾಜದ ಹಣದಲ್ಲಿ ಒಡೆದಾಳುವ ಕೆಲಸ ಮಾಡುವುದು ಬೇಡ. ಇವತ್ತು ಅವರಿಂದಾಗಿಯೇ ಮದಕರಿ ನಾಯಕರ ಪ್ರತಿಮೆ ಚೆಳ್ಳಕೆರೆಯಲ್ಲಿ ಸೀಜ್ ಆಗಿ ಬಿದ್ದಿದೆ ಎಂದು ಆರೋಪಿಸಿದರು. ಜೊತೆಗೆ ನಾಯಕ ಸಮುದಾಯದ ಇತಿಹಾಸಕಾರರ ಚರಿತ್ರೆ ಬಿಚ್ಚಿಟ್ಟರು.

Valmiki Reservation: “ನಾಟಕ ಬಿಟ್ಟು ಮೀಸಲಾತಿ ಕೊಡಿ” ಅಭಿಯಾನ.! ಶೇ.7.5 ಮೀಸಲಾತಿ ನೀಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಕರ್ನಾಟಕ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ರಮೇಶ್ ಹಿರೇಜಂಬೂರು ಮಾತನಾಡಿ, ಪ್ರಸನ್ನಾನಂದಪುರಿ ಸ್ವಾಮೀಜಿ ಸಮಾಜ ಒಗ್ಗೂಡಿಸುತ್ತಿಲ್ಲ, ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಜನ ಕೊಟ್ಟ 85 ಲಕ್ಷ ರೂ. ಬೆಳ್ಳಿಯನ್ನು ಟ್ರಸ್ಟಿಗಳ ಅನುಮತಿ ಇಲ್ಲದೆಯೇ ಮಾರಿಕೊಂಡಿದ್ದಾಗಿ ಸ್ವಾಮೀಜಿಯೇ ಒಪ್ಪಿಕೊಂಡಿದ್ದಾರೆ. ಈಗ ಸಮುದಾಯ ಕೇಳುವ ಇತರ ಪ್ರಶ್ನೆಗಳಿಗೂ ಉತ್ತರ ನೀಡಲಿ. ಪ್ರಸನ್ನಾನಂದಪುರಿ ಸ್ವಾಮೀಜಿ ಯ ಬದಲಾವಣೆ ನಂತರ ಮುಂದ್ಯಾರು ಎಂಬ ಪ್ರಶ್ನೆ ಬರುತ್ತದೆ. ಆದರೆ ಕಂಚಿ ಮಠದಲ್ಲಿ ನಮ್ಮ ಸಮುದಾಯದ ಮೂವರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಲ್ಲಿ ಯಾರು ಉತ್ತಮರು, ಸಮುದಾಯದ ಹಿತಚಿಂತನೆ ಉಳ್ಳವರು ಎಂಬುದನ್ನು ಸಮುದಾಯದ ಮುಖಂಡರು ಚರ್ಚೆ ನಡೆಸಿ ಪೀಠಾಧಿಪತಿಯನ್ನಾಗಿ ಮಾಡಬಹುದು ಎಂದು ಹೇಳಿದರು.

ಮಸ್ಕಿಯ ಆತ್ಮಾನಂದ ಗುರೂಜಿ, ಚಿಕ್ಕಬಳ್ಳಾಪುರದ ಬ್ರಹ್ಮಾನಂದ ಗುರೂಜಿ, ಸಂಘಟಕರು, ಮದಕರಿ ಸೇನೆ ರಾಜ್ಯಾಧ್ಯಕ್ಷರಾದ ಸಿಂಗಾಪುರ ವೆಂಕಟೇಶ್, ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ತುಳಸೀರಾಮ್, ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷರಾದ ಸಿರಿಗೆರೆ ತಿಪ್ಪೇಶ್, ರಾಜಣ್ಣ ಲಕ್ಷ್ಮೀಸಾಗರ, ಸುಜಾತಾ ನಾಯಕ್, ಕರಿಯಪ್ಪ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

valmiki peetha prasannananda swamyji rajanahalli

ವಾಲ್ಮೀಕಿ ನಾಯಕರ ಸಭೆಯ ನಿರ್ಣಯಗಳು:

1. ರಾಜನಹಳ್ಳಿ ಪೀಠದಿಂದ ಪ್ರಸನ್ನಾನಂದಪುರಿ ಸ್ವಾಮೀಜಿಯನ್ನು ಹೊರ ಹಾಕಬೇಕು.

2. ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಟ್ರಸ್ಟ್ ಎಲ್ಲ ಟ್ರಸ್ಟಿಗಳು ರಾಜೀನಾಮೆ ನೀಡಬೇಕು.

3. ಟ್ರಸ್ಟ್ ಗೆ ವಿದ್ಯಾವಂತ, ಸಮರ್ಥರನ್ನು ಅಧ್ಯಕ್ಷರನ್ನಾಗಿ ಮಾಡಬೇಕು.

4. ನಾಯಕ ಸಮಾಜದ, ಟ್ರಸ್ಟ್ ಸದಸ್ಯರ ಅನುಮತಿ ಇಲ್ಲದೆ ಸೇರಿದ ಟ್ರಸ್ಟಿಗಳನ್ನು ಕಿತ್ತು ಹಾಕಬೇಕು.

5. ಡ್ರೈವರ್ ನಾಗರಾಜ್ ನನ್ನು ಕಿತ್ತು ಹಾಕಬೇಕು.

6. ಈ ನಿರ್ಣಯಗಳನ್ನು ಸಚಿವರು, ಸಮುದಾಯದ ಮಠಕ್ಕೆ ಸಂಬಂಧಿಸಿದ ಹಿರಿಯರು ಒಟ್ಟುಗೂಡಿ ಪ್ರಸನ್ನಾನಂದಪುರಿ ಸ್ವಾಮೀಜಿ ಬದಲಾವಣೆ ಆಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ.

Valmiki Reservation: “ನಾಟಕ ಬಿಟ್ಟು ಮೀಸಲಾತಿ ಕೊಡಿ” ಅಭಿಯಾನ.! ಶೇ.7.5 ಮೀಸಲಾತಿ ನೀಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಗೊಂದಲ ಸೃಷ್ಟಿ ಯತ್ನ

ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ನಾಯಕ ಸಮಾಜದ ಹಿರಿಯರು ಸಭೆ ಕರೆದಿದ್ದು ಗೊತ್ತಾಗುತ್ತಿದ್ದಂತೆ ಕೋಲಾರಿಂದ ಬಂದಿದ್ದ ಶಿವು ಎಂಬ ಯುವಕ ಗೊಂದಲ ಸೃಷ್ಟಿಗೆ ಯತ್ನಿಸಿದ. ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಮೊದಲು ಆಡಿಯೋ ಹರಿಬಿಟ್ಟಿದ್ದ ಇದೇ ಕೋಲಾರ ಶಿವು ಇಂದು ಸ್ವಾಮೀಜಿ ಜೊತೆಗೆ ಸೇರಿ ಸಭೆಯಲ್ಲಿ ಗೊಂದಲ ಸೃಷ್ಟಿಗೆ ಯತ್ನಿಸಿದ. ಈ ಸಮಯದಲ್ಲಿ ಅಲ್ಲಿ ಕೆಲ ಕಾಲ ವಾಕ್ಸಮರ ನಡೆಯಿತು. ನಂತರ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ವಾತಾವರಣ ತಿಳಿಗೊಳಿಸಿ ಆ ಯುವಕನನ್ನು ಗಾಂಧಿ ಭವನದಿಂದ ಹೊರ ಹಾಕಿದರು. ಈ ವೇಳೆ ವಿಷಯಾಂತರ ಮಾಡಲು ಸ್ವಾಮೀಜಿ ಇಂಥವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!