ದಾವಣಗೆರೆ; raksith shetty ಸಪ್ತ ಸಾಗರದಾಚೆ ಎಲ್ಲೋ ಸಿನೆಮಾ ಇದೆ ತಿಂಗಳು ಸೆಪ್ಟೆಂಬರ್ 1 ರಂದು ತೆರೆ ಕಂಡಿದ್ದು , ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ವಾಗುತ್ತಿದ್ದು , ಸಿನೆಮಾ ಪ್ರಿಯರ ಹಾಗೂ ರಕ್ಷಿತ್ ಶೆಟ್ಟಿ, ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಎಲ್ಲೆಡೆ ಚಿತ್ರಮಂದಿರಗಳಿಗೆ ಭೇಟಿ ನೀಡಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ಕೃತಘ್ನತೆ ಸಲ್ಲಿಸಲು ಚಿತ್ರ ತಂಡ ಪ್ರಯಾಣ ಮಾಡುತ್ತಿದ್ದು, *ಇದೇ ಸೆಪ್ಟೆಂಬರ್ 11 ನೇ ತಾರೀಖಿನಂದು ಬೆಳಗ್ಗೆ 10 ಕ್ಕೆ ಶಾಮನೂರು ರಸ್ತೆಯ ಮೂವಿ ಟೈಮ್ಸ್ ಚಿತ್ರ ಮಂದಿರದಲ್ಲಿ ಹಾಗೂ ಬೆಳಗ್ಗೆ 11ಕ್ಕೆ ಗೀತಾಂಜಲಿ ಚಿತ್ರ ಮಂದಿರದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ.
ದಾವಣಗೆರೆಯ ಹೈಪ್ ಅಪ್ ಯುವ ಉದ್ಯಮಿಗಳ ಸಮೂಹದ ಸಂಸ್ಥಾಪಕ ಹಾಗೂ ಮುಖ್ಯಸ್ಥರಾದ ಶಿವರತನ್ ಸಮೂಹದ ಮುಖ್ಯಸ್ಥರುಗಳಾದ ಅರುಣ್ ಕುಮಾರ್ (ಬಾಟಲ್ ಬಿಲ್ಡಿಂಗ್) ,ಶಂಭು ಒರೆಕೊಂಡಿ, ನಿಖಿತ್ ಶೆಟ್ಟಿ, ಸಂತೋಷ್ ಏಕಬೋಟೀ , ಮಯೂರ್ , ರಘುವೀರ , ವರುಣ್ ಬೆಣ್ಣೆಹಳ್ಳಿ , ಪುನೀತ್ ವಿಕ್ಟರ್, ವಿವೇಕ್ ರಾಜ್ ರವರ ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿ ಸ್ವಾಗತಿಸುತ್ತಿದ್ದು , ನಗರದ ಸಿನಿ ಪ್ರಿಯರು ಹಾಗೂ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಚಿತ್ರಮಂದಿರಕ್ಕೆ ಭೇಟಿ ನೀಡಿ ಚಿತ್ರ ತಂಡಕ್ಕೆ ಶುಭ ಕೋರಲು ಆಹ್ವಾನಿಸಿದ್ದಾರೆ.
