high court; ಮಾಜಿ ಶಾಸಕ ಮಾಡಾಳ್ ಲಂಚ ಪ್ರಕರಣ, ಸಿಬಿಐ / ಎಸ್ ಐ ಟಿಗೆ ವಹಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ
- ಮಾಡಾಳ ವಿರುಪಾಕ್ಷಪ್ಪ ಮತ್ತು ಮಾಡಾಳ ಪ್ರಶಾಂತ್ ಮೇಲಿನ ಲೋಕಾ ದಾಳಿ ಪ್ರಕರಣ.
- ಪ್ರಕರಣವನ್ನ ಸಿಬಿಐ ಇಲ್ಲವೇ ಎಸ್ ಐಟಿಗೆ ವಹಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ.
- ಸರ್ಕಾರಕ್ಕೆ ಆದೇಶ ಮಾಡಿದ ಹೈಕೋರ್ಟ್ ದ್ವಿಸದಸ್ಯ ಪೀಠ
- 8 ವಾರದೊಳಗೆ ತನಿಖೆಗೆ ನೀಡಿ ವರದಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ.
ದಾವಣಗೆರೆ: high court ಮಾಜಿ ಶಾಸಕ ಮಾಡಾಳ ವಿರುಪಾಕ್ಷಪ್ಪ ಮತ್ತು ಮಾಡಾಳ ಪ್ರಶಾಂತ್ ಮೇಲಿನ ಲೋಕಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನ ಸಿಬಿಐ ಇಲ್ಲವೇ ಎಸ್ ಐಟಿಗೆ ವಹಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ.
ಈ ಸಂಬಂಧ ಹೈಕೋರ್ಟ್ ದ್ವಿ ಸದಸ್ಯ ಪೀಠ ಸರಕಾರಕ್ಕೆ ಆದೇಶಿಸಿದ್ದು, 8 ವಾರದೊಳಗೆ ತನಿಖೆಗೆ ನೀಡಿ ವರದಿ ನೀಡುವಂತೆ ಹೇಳಿದೆ. ಮಾರ್ಚ್ ನಲ್ಲಿ ಮಾಡಾಳ ಪ್ರಶಾಂತ್ ಕೆಎಸ್ ಡಿಎಲ್ ಕಚೇರಿಯಲ್ಲಿ ಲಂಚ ಪಡೆಯುವಾಗ ಲೋಕಾಗೆ ಸಿಕ್ಕಿ ಬಿದ್ದಿದ್ದರು. ಮಾಡಾಳ ಪ್ರಶಾಂತ್ ಕೆಎಸ್ ಡಿಎಲ್ ನ ಆಯುಕ್ತರಾಗಿದ್ದರು.ಆಗ 40 ಲಕ್ಷ ರೂ. ಹಣದ ಸಮೇತ ಲೋಕಾಯುಕ್ತಕ್ಕೆ ಮಾಡಾಳ ಪ್ರಶಾಂತ್ ಸಿಕ್ಕಿಬಿದ್ದಿದ್ದರು.
ಅದೇ ದಿನ ಚನ್ನಗಿರಿಯ ಮಾಡಾಳದಲ್ಲಿನ ಮಾಜಿ ಶಾಸಕ ಮಾಡಾಳ ವಿರುಪಾಕ್ಷಪ್ಪ ಮನೆ ಮೇಲು ದಾಳಿ ನಡೆದಿತ್ತು. ದಾಳಿ ವೇಳೆ ಮಾಡಾಳ ಮನೆಯಲ್ಲಿ 8 ಕೋಟಿ ರೂ. ಕ್ಯಾಶ್ ಸಿಕ್ಕಿತ್ತು. ಸದ್ಯ ಪ್ರಕರಣ ವಿಚಾರ ಹಂತದಲ್ಲಿದ್ದು, ಸಿಬಿಐ ಇಲ್ಲವೇ ಎಸ್ ಐ ಟಿ ಗೆ ವಹಿಸುವಂತೆ ಶ್ರೀರಾಮ ಸೇನೆ ದಾವಣಗೆರೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ ಹೈ ಕೋರ್ಟ್ ಗೆ ಮನವಿ ಮಾಡಿತ್ತು. ಸರಿಯಾದ ತನಿಖೆ ನಡೆಯುತ್ತಿಲ್ಲ ಎಂದು ಹೈ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮಾಡಾಳ ಅಕ್ರಮ ಹಾಗೂ ಆದಾಯದ ಕುರಿತು ಕೋರ್ಟ್ ಗೆ ದಾಖಲೆ ನೀಡಿತ್ತು
ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ
ಈ ಹಿನ್ನಲೆಯಲ್ಲಿ ಹೈ ಕೋರ್ಟ್ ನ ದ್ವಸದಸ್ಯ ಪೀಠ ಪ್ರಕರಣವನ್ನ ಸಿಬಿಐ ಇಲ್ಲವೇ ಎಸ್ ಐಟಿಗೆ ವಹಿಸುವಂತೆ ಆದೇಶ ಮಾಡಿದೆ.ಅರ್ಜಿಯನ್ನ ಮಾನ್ಯ ಮಾಡಿದ ನ್ಯಾಯಾಲಯ ಇದೀಗ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಈಗಾಗಲೇ ಪ್ರಕರಣದ ಆರೋಪಿಗಳು ನ್ಯಾಯಾಲಯದ ಜಾಮೀನಿನ ಮೇಲೆ ಬಿಡುಗಡೆ ಅಗಿದ್ದು, ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುವ ಕಾರಣ ಶೀಘ್ರವಾಗಿ ತನಿಖೆ ನಡೆಸಲು ಮುಂದಿನ ಆರು ತಿಂಗಳ ಒಳಗಾಗಿ ವರ್ಗಾವಣೆ ಮಾಡಬೇಕು. ಇಲ್ಲವಾದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗುವುದು ಎಂದು ಮಣಿ ಸರ್ಕಾರ್ ಎಚ್ಚರಿಕೆ ನೀಡಿದ್ದಾರೆ.
ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಮಾಡಿರುವ ಕುರಿತಂತೆ ಮಾಡಾಳ್ ವಿರೂಪಾಕ್ಷಪ್ಪ, ಮಾಡಾಳ್ ಪ್ರಶಾಂತ್ ವಿರುದ್ಧ ಜಾರಿ ನಿರ್ದೇಶನಾಯಲಕ್ಕೂ ದೂರು ಕೊಡಲಾಗಿದೆ. ಈ ಸಂಬಂಧ ಆ ಸಂಸ್ಥೆಯು ತನಿಖೆ ನಡೆಸಿದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದರು.