lake soil; ದಾವಣಗೆರೆ ಕೆರೆಗಳ ಮಣ್ಣಿನ ಆಸೆಗೆ ಮರುಗಿದ ರಸ್ತೆಗಳು.! ಮಣ್ಣಿನಲ್ಲಿ ಲೀನವಾಯ್ತಾ ನಿಯಂತ್ರಿಸುವರ ಕಣ್ಣು.! .?.!

ದಾವಣಗೆರೆ; lake soil ದಾವಣಗೆರೆ ಜಿಲ್ಲೆಯಲ್ಲಿ ಮರಳಿಗೆ ಭಾರಿ ಬೇಡಿಕೆ ಇರೋದು ನಿಜ ಆದರೆ ಕೆರೆಗಳ ಮಣ್ಣನ್ನು ಬಿಡದ ಈ ಮಣ್ಣು (ಮುರ್ರಂ) ಲೂಟಿಕೋರರು ಸಂಬಂಧಿಸಿದವರಿಗೂ ಮಣ್ಣೆರಚಾಟ ನಡೆಸುತ್ತಿರುವುದು ಕಂಡುಬಂದಿದೆ.

ಜಿಲ್ಲೆಯ ಕೆರೆಗಳಲ್ಲಿರುವ ಬಂಗಾರದಂತ ಫಲವತ್ತಾದ ಬೆಲೆ ಬಾಳುವ ಲಕ್ಷಾಂತರ ರೂಪಾಯಿ ಮಣ್ಣನ್ನ ಲೂಟಿ ಮಾಡುತ್ತಿದ್ದಾರೆ, ಏನಪ್ಪ ಇದು ಬಂಗಾರದ ಮಣ್ಣಿನ ಕಥೆ ಅಂತೀರಾ, ಹೌದು ಇದುವೇ ಯಾರ ಕಣ್ಣಿಗೂ ಕಾಣದ್ದು ‘ಗರುಡ'(ವಾಯ್ಸ್) ಚರಿತೆ ಕಣ್ಣಿಗೆ ಸಾಕ್ಷಿಗಳ ಸಮೇತ ಕಾಣಸಿಗುತ್ತೆ.

ದಾವಣಗೆರೆ ಕೆರೆಗಳ ಮಣ್ಣಿನ ಆಸೆಗೆ ಮರುಗಿದ ರಸ್ತೆಗಳು.! ನಿಯಂತ್ರಕರ ಕಣ್ಣಿಗೆ ಮಣ್ಣೆರೆಚಾಟದ ದೃಶ್ಯ

ಹಾಡಹಗಲೇ ಕೆರೆಯಲ್ಲಿ ಮಣ್ಣು ಬಗೆಯುತ್ತಿರುವ ಇಟಾಚಿಗಳು, ಕೆರೆಯ ಸ್ವರೂಪವನ್ನೇ ನಾಶ ಪಡಿಸಿ ಕೆರೆಯ ಮಣ್ಣನ್ನೇ ಲೂಟಿ ಮಾಡುತ್ತಿರುವ ಮಣ್ಣು ಮಾಫಿಯಾದವರು,ಯಾರ ಬಯವಿಲ್ಲದೆ 10 ಚಕ್ರದ ಬೃಹತ್ ಲಾರಿಗಳು ಎಗ್ಗಿಲ್ಲದೆ ರಸ್ತೆಯನ್ನು ಹಾಳು ಮಾಡಿ ಓಡಾಟ, ಇದೆಲ್ಲಾ ಕಂಡು ಬರೋದು ದಾವಣಗೆರೆ ತಾಲ್ಲೂಕಿನ ಗಂಗನಕಟ್ಟೆ ಹಾಗೂ ಚಿನ್ನಸಮುದ್ರ ರಸ್ತೆಯಲ್ಲಿ ಬರುವ ಗಂಗನಕಟ್ಟೆ ಕೆರೆಯಲ್ಲಿ..  ಇತ್ತೀಚೆಗೆ ದಾವಣಗೆರೆ ಜಿಲ್ಲೆಯಲ್ಲಿ ಅಡಿಕೆ ತೋಟಗಳಿಗಾಗಿ ರೈತರು ಕೆರೆಯ ಮಣ್ಣನ್ನ ತಮ್ಮ ಹೋಲಗಳಿಗೆ ಬಳಸುವುದು ವಾಡಿಕೆಯಂತೆ ಸರಿಯಿದೆ. ಆದ್ರೆ ಇದೇ ನೆಪ ಮಾಡಿಕೊಂಡ ಕೆಲ ಪಟ್ಟಭದ್ರ ಹಿತಾಸಕ್ತಿಗಳ ದುರುಳ ಇದರಿಂದ ಲಾಭ ಮಾಡಿಕೊಳ್ಳಲು ಮಣ್ಣಿಗೆ ಎಲ್ಲಿಲ್ಲದ ಬೇಡಿಕೆಯನ್ನ ತಂದಿಟ್ಟಿದ್ದಾರಂತೆ.

sand; ಗಣಿ ಸಚಿವರ ತವರಲ್ಲಿ ಮರಳು ರಾಯಲ್ಟಿ ಲೂಟಿ.! ಮೌನವಹಿಸಿದ ಟಾಸ್ಕ್‌ ಫೊರ್ಸ್

ಮಣ್ಣಿಗೆ ಡಿಮ್ಯಾಂಡ್​ ಹೆಚ್ಚಾಗಿರುವ ಹಿನ್ನೆಲೆ ಮಣ್ಣನ್ನು ಬಿಡದ ಮಾಫಿಯಾದವರು, ಇಟಾಚಿ ಯಂತ್ರಗಳ ಮೂಲಕ ಮಣ್ಣನ್ನ ತೆಗೆದು ಹಗಲು ರಾತ್ರಿ ಎನ್ನದೆ ಬೃಹತ್ ಟಿಪ್ಪರ್​ ಮೂಲಕ ಲೂಟಿ ಮಾಡುತ್ತಿದ್ದಾರೆ. ಒಂದೆಡೆ ಇಟ್ಟಿಗೆ ಪ್ಯಾಕ್ಟರಿಗಳವರು ಮಣ್ಣನ್ನು ಲೂಟಿ ಮಾಡುತ್ತಾರೆ.  ಇನ್ನು ಕೆಲವರು ಸ್ಥಳೀಯವಾಗಿ ರೈತರು ಮಣ್ಣನ್ನು ತಮ್ಮ ಹೊಲಗಳಿಗೆ ಬಳಸಿಕೊಳ್ಳಲು ಹೋದರೆ ಪಂಚಾಯ್ತಿ ಅಧಿಕಾರಿಗಳು, ನೀರಾವರಿ ಇಲಾಖೆಯವರು ಪ್ರಶ್ನೆ ಮಾಡುತ್ತಾರಂತೆ ಅದರೆ ಮಾಫಿಯಾದವರು ಮಣ್ಣು ಲೂಟಿ ಮಾಡಲು ಬಂದರೆ ಮಾತ್ರ ಕಣ್ಣಿಗೂ ಕಾಣಲ್ಲ ಉಸಿರೇ ತೆಗೆಯೋದಿಲ್ಲವಂತೆ.

ಈ ವಿಚಾರ ಬಗ್ಗೆ ‘ಗರುಡವಾಯ್ಸ್/ಗರುಡಚರಿತೆ’ ಗಣಿ ಇಲಾಖೆಯ ಹಿರಿಯ ಅಧಿಕಾರಿಯನ್ನ ಫೋನ್ ಮೂಲಕ ಸಂಪರ್ಕಿಸಿ ವಿಚಾರ ತಿಳಿಸಿದಾಗ, ಅವರು ಹೇಳಿದ್ದು ಇತ್ತೀಚಿನ ದಿನದಲ್ಲಿ ದಾವಣಗೆರೆ ಚಿತ್ರದುರ್ಗ ತುಮಕೂರು ನೇರ ರೈಲು ಮಾರ್ಗದ ಕಾಮಗಾರಿಗಾಗಿ ರೈಲ್ವೆ ಹಳಿ ನಿರ್ಮಾಣ ಗುತ್ತಿಗೆ ಪಡೆದಿರುವವರು ಮುರ್ರಂ ಖನಿಜದ ರಾಯಲ್ಟಿಯನ್ನ ಕಟ್ಟಿರುತ್ತಾರೆ, ಆದರೆ ಕೆರೆಗಳಲ್ಲಿ ಮಣ್ಣನ್ನ ತೆಗೆದಿರುವ ಬಗ್ಗೆಯ ಅನುಮತಿ ನೀರಾವರಿ ಇಲಾಖೆಗೆ ಸಂಬಂದಿಸಿರುತ್ತೆ ಅಂತಾರೆ. ದಾವಣಗೆರೆ ವಿಭಾಗದ ಸಣ್ಣ ನೀರಾವರಿ ಇಲಾಖೆಯ ಎಇಇ ಅವರನ್ನ ಸಂಪರ್ಕಿಸಿ ಕೇಳಿದಾಗ, ರೈಲ್ವೆ ಕಾಮಗಾರಿಗಾಗಿ ಮಣ್ಣು ಎತ್ತುವಳಿಗಾಗಿ ಯಾರೂ ಮನವಿ ಸಲ್ಲಿಸಿಲ್ಲ ಅಂತಾರೆ ಅಲ್ಲದೇ ರೈತರಿಗೆ ಉಚಿತವಾಗಿ ಕೆರೆ ಮಣ್ಣು ಬಳಸಲು ಅವಕಾಶವಿದೆ ಆದ್ರೆ ಕೆಲ ನಿರ್ಬಂಧಿತ ಪ್ರದೇಶ ಹಾಗೂ ನಿಬಂಧನೆಗಳನ್ನ ಒಪ್ಪಿಕೊಂಡು ಮಣ್ಣನ್ನ ಕೆರೆಯಿಂದ ಹೊಲಕ್ಕೆ ಬಳಸಲು ಮಾತ್ರ ಎತ್ತಬಹುದಂತೆ.

ಸಣ್ಣ ನೀರಾವರಿ ಇಲಾಖೆ ಅಧಿಕಾರಿಯ ಗಮನಕ್ಕೆ ಈ ವಿಷಯ ಬಂದಾಗ ಏನು ಮಾಡ್ತೀರಾ ಅಂದ್ರೆ ಅವರು ಹೇಳಿದ್ದು ಪಿಡಿಒ ಗೆ ಹೇಳಿ ನಿಲ್ಲಿಸ್ತೀವಿ, ಕ್ರಮ ತೆಗೆದುಕೊಳ್ಳುತ್ತೆವೆ ಅಂತಾರೆ, ಆದ್ರೆ ಕಳೆದ ಕೆಲ ದಿನಗಳಿಂದ ದುರುಳರು ಸಂಪದ್ಭರಿತ ಮಣ್ಣನ್ನ ಲೂಟಿ ಮಾಡುವವರೆಗೂ ಇವರ ಗಮನಕ್ಕೆ ಬಾರದೇ ಇರೋದು ವಿಪರ್ಯಾಸವೇ ಸರಿ.

ಒಟ್ಟಾರೆ ಗಣಿ ಸಚಿವರ ಸ್ವ ಜಿಲ್ಲೆಯಲ್ಲಿ ಗಣಿ ವಿಚಾರದ ಬಗ್ಗೆ ವಿರೋಧಿಳಿಗೆ ಆಹಾರವಾಗದಿರಲಿ ಎಂಬುದು ಗ್ರಾಮಗಳ ಜಗಳಿ ಕಟ್ಟೆಯಲ್ಲಿ ಕಾರ್ಯಕರ್ತರ ಮಾತುಗಳಾಗಿವೆ. ಅಲ್ಲದೇ ಜಿಲ್ಲೆಯ ಪ್ರಕೃತಿ ಸಂಪತ್ತು, ಜೀವ ವೈವಿದ್ಯ ಹಾಳಾಗುವ ಮುನ್ನ ಜಿಲ್ಲೆಯ ಅಧಿಕಾರಿಗಳು ಮಣ್ಣು ಲೂಟಿ ಕೋರರಿಗೆ ಕಡಿವಾಣ ಹಾಕಬೇಕು ಹಾಗೂ ರಸ್ತೆಗಳು ಹಾಳಾಗದಂತೆ ಕ್ರಮ ವಹಿಸಬೇಕು ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.

Leave a Reply

Your email address will not be published. Required fields are marked *

error: Content is protected !!