caste; ಶಾಮನೂರು ಶಿವಶಂಕರಪ್ಪಗೆ ಸತೀಶ್ ಜಾರಕಿಹೊಳಿ ಟಾಂಗ್

ದಾವಣಗೆರೆ, ಅ.02: ಅಧಿಕಾರಿಗಳನ್ನು ಜಾತಿ (caste) ಆಧಾರದ ಮೇಲೆ ನೇಮಕ ಮಾಡೋದಕ್ಕೆ ಆಗೋದಿಲ್ಲ, ಬದಲಾಗಿ ಅವರ ಕಾರ್ಯಕ್ಷಮತೆ ನೋಡಿ ಆಯ್ಕೆ ಮಾಡಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಶಾಸಕ ಶಾಮನೂರು ಶಿವಶಂಕರಪ್ಪಗೆ ಟಾಂಗ್ ನೀಡಿದರು.
ಹರಿಹರದ ರಾಜನಹಳ್ಳಿ ಪೀಠದಲ್ಲಿ ಲಿಂಗಾಯತ ಅಧಿಕಾರಿಗಳು ಮೂಲೆಗುಂಪಾಗಿದ್ದಾರೆ ಎಂಬ ಶಾಮನೂರು ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಉತ್ತರಿಸಿದ ಅವರು, ಅಧಿಕಾರಿಗಳನ್ನು ಜಾತಿ ಆಧಾರದ ಮೇಲೆ ನೇಮಕ ಮಾಡೋಕೆ ಆಗಲ್ಲ, ಅವರ ಕಾರ್ಯಕ್ಷಮತೆ ನೋಡಿ ಆಯ್ಕೆ ಮಾಡಲಾಗಿದೆ . ಅವರಿಗೆ ಏನೇ ಅನ್ಯಾಯ ಆಗಿದ್ರು ಸಿಎಂ ಮುಂದೆ ಹೇಳಲಿ. ಅವರ ಸಮಾಜದವರಿಗೆ ಅನ್ಯಾಯವಾಗಿರುವುದಕ್ಕೆ ಅಸಮಾಧಾನಗೊಂಡು ಈ ರೀತಿಯಾಗಿ ಹೇಳಿದ್ದಾರೆ. ಸಿಎಂ ರೇಸ್ ನಲ್ಲಿ ಬಾಳ ಜನ ಕ್ಯೂನಲ್ಲಿದ್ದಾರೆ. ಅದರಲ್ಲಿ ನಮ್ಮ ನಂಬರ್ ಯಾವಾಗ ಹತ್ತುತ್ತೆ ನೊಡೋಣ ಎಂದು ಪರೋಕ್ಷವಾಗಿ ತಮ್ಮ ಸಿಎಂ ಆಸೆಯನ್ನು ಸತೀಶ್ ಜಾರಕಿಹೊಳಿ ವ್ಯಕ್ತಪಡಿಸಿದರು.
ಲಿಂಗಾಯಿತ ಅಧಿಕಾರಿಗಳನ್ನು ಕಾಂಗ್ರೆಸ್ ಕಡೆಗಣಿಸಿದೆ : ದಾವಣಗೆರೆಯಲ್ಲಿ ಅಸಮಾಧಾನವ್ಯಕ್ತಪಡಿಸಿದ ಶಾಮನೂರು ಶಿವಶಂಕರಪ್ಪ
ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಆಗಿದ್ದಾಗ ಈ ಜಾತಿ ವಿಚಾರ ಬರಲಿಲ್ಲ. ಆದರೆ ಸಿದ್ದರಾಮಯ್ಯ ಸಿಎಂ ಆದಾಗ ಜಾತಿ ವಿಚಾರ ಬಂದಿದೆ. ಶಾಮನೂರು ಶಿವಶಂಕರಪ್ಪನವರು ಹಿರಿಯರು. ಅವರು ಸರ್ಕಾರದಲ್ಲಿ ಬಂದು ರಕ್ಷಣೆ ಮಾಡುವ ಕೆಲಸ ಮಾಡಬೇಕು. ಇನ್ನು ಎಸ್ಟಿ ಸಮಾಜದವರನ್ನು ಡಿಸಿಎಂ ಮಾಡೋ ವಿಚಾರ ಹೈ ಕಮಾಂಡ್ ಗೆ ಬಿಟ್ಟ ವಿಚಾರ ಎಂದರು.
ಇನ್ನು ಓರ್ವ ಸ್ವಾಮೀಜಿ, ಸತೀಶ್ ಜಾರಕಿಹೊಳಿ ಸೇರಿದಂತೆ ಮೂವರು ಸಚಿವರುಗಳಿಗೆ ಅನಾಮಿಕನಿಂದ ಬೆದರಿಕೆ ಪತ್ರಗಳು ಬಂದ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆದರಿಕೆ ಪತ್ರಗಳು ಬರುತ್ತಿರುತ್ತವೆ ಅದಕ್ಕೆ ತಲೆಕೆಡಿಸಿಕೊಳ್ಳಬಾರದು ಎಂದರು.