ಆಗಸ್ಟ್ 15 ರಂದು ದಾವಣಗೆರೆಯಲ್ಲಿ ಬೃಹತ್ ಲಸಿಕಾಕರಣ: 6000 ಡೋಸ್ ಲಸಿಕೆಯ ಸಂಪೂರ್ಣ ಮಾಹಿತಿ ನೋಡಿ👇

ದಾವಣಗೆರೆ: ಜಿಲ್ಲೆಯಲ್ಲಿ ಆ.15 ರಂದು ಬೃಹತ್ ಮಟ್ಟದ ಲಸಿಕಾ ಕರಣ ಹಮ್ಮಿಕೊಳ್ಳಲಾಗಿದ್ದು, ತಾಲ್ಲೂಕಿನ ಗ್ರಾಮೀಣ ಭಾಗದ ಮತ್ತು ನಗರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಮೊದಲ ಮತ್ತು ಎರಡನೇ ಡೋಸ್ ನ ಒಟ್ಟು 6,000 ಲಸಿಕೆ ಹಂಚಿಕೆ ನಡೆಯಲಿದೆ.
ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಶೀಲ್ಡ್ 3,700 ಡೋಸ್, ನಗರದ ಸೇಂಟ್ ಪೌಲ್ಸ್ ಶಾಲೆಯಲ್ಲಿ 300 ಲಸಿಕೆ.

ಹಾಗೂ ಸಿಜಿ ಆಸ್ಪತ್ರೆ ಸೇರಿದಂತೆ ನಗರದ ನಿಟ್ಟುವಳ್ಳಿ, ಆಜಾದ್ ನಗರ, ಎಸ್.ಎಂ.ಕೃಷ್ಣ ನಗರ, ಬಾಷಾನಗರ, ಭಾರತ್ ಕಾಲೋನಿ, ಹೆಚ್ ಕೆಆರ್ ನಗರ ಸೇರಿದಂತೆ ನಗರದ ಎಲ್ಲಾ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಒಟ್ಟಾರೆ 2,000 ಕೊವ್ಯಾಕ್ಸಿನ್ ಲಸಿಕೆ ನೀಡಲಾಗುವುದು ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
