ಬೆಂಗಳೂರಿನ ವಿಜಯಾ ಕಾಲೇಜ್ ನಲ್ಲಿ ವಿದ್ಯಾರ್ಥಿನಿಗೆ ವಿಕೃತನಿಂದ ಚಾಕು ಇರಿತ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕಾಲೇಜುಗಳಿಗೆ ಏನಾಗಿದೆಯೋ..ಅಲ್ಲಿ ಓದುತಿರುವ ವಿದ್ಯಾರ್ಥಿಗಳಿಗೆ ಏನಾಗಿದೆಯೋ ತಿಳೀತಿಲ್ಲ..ಜ್ಞಾನದೇಗುಲಗಳನ್ನಾಗಿ ಉಳಿಸಬೇಕಾದವರೇ ಅಪರಾಧ ಚಟುವಟಿಕೆ ನಡೆಸ್ಲಿಕ್ಕೆ ಅಡ್ಡಾವನ್ನಾಗಿಸಿಕೊಂಡಿದ್ದಾರೆ.ಮೊನ್ನೆ ಪ್ರಸಿಡೆನ್ಸಿ ಕಾಲೇಜಿನಲ್ಲಿ ಭಗ್ನಪ್ರೇಮಿಯೋರ್ವ ವಿದ್ಯಾರ್ಥಿನಿಯನ್ನು ಕಾಲೇಜ್ ಕ್ಯಾಂಪಸ್ ನಲ್ಲಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಹಸಿಯಾಗಿರುವಾಗಲೇ ನಗರದ ಮತ್ತೊಂದು ಪ್ರತಿಷ್ಟಿತ ಕಾಲೇಜ್ ನಲ್ಲಿಯೂ ಇಂತದ್ದೇ ಒಂದು ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಅಂದ್ಹಾಗೆ ಈ ಘಟನೆ ನೆಡೆದಿದೆ ಎನ್ನಲಾಗಿರುವದು ಜಯನಗರ ನಾಲ್ಕನೇ ಬ್ಲಾಕ್ ನಲ್ಲಿರುವ ವಿಜಯಾ ಕಾಲೇಜ್ ನಲ್ಲಿ.ನಿನ್ನೆ ಮದ್ಯಾಹ್ನ ಸುಮಾರು 3-4 ಗಂಟೆ ಸಮಯದಲ್ಲಿ ಕ್ಯಾಂಪಸ್ ನಲ್ಲಿ ಬಿಸಿಎ 2ನೇ ವರ್ಷದ 3ನೇ ಸೆಮ್ ನಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆಯಾಗಿದೆಯಂತೆ,ಘಟನೆಯಿಂದ ಕಾಲೇಜಿನ ವಿದ್ಯಾರ್ಥಿಗಳೆಲ್ಲಾ ಭಯಭೀತರಾಗಿ ಓಡಿ ಹೋದರು ಎನ್ನಲಾಗಿದೆ.
ವಿದ್ಯಾರ್ತಿನಿ ಮೇಲೆ ಚಾಕುವಿನಿಂದ ಇರಿದಾತ ಅದೇ ಕಾಲೇಜಿನ ವಿದ್ಯಾರ್ಥಿನೋ ಅಥವಾ ಹೊರಗಿನವನೋ ಎನ್ನುವುದು ಗೊತ್ತಾಗಿಲ್ಲ.ಸಧ್ಯ ವಿದ್ಯಾರ್ಥಿನಿ ಪರಿಸ್ಥಿತಿ ಹೇಗಿದೆ ಎನ್ನುವುದೂ ತಿಳಿದುಬಂದಿಲ್ಲ
ಘಟನೆ ಸಂಬಂಧ ವಿದ್ಯಾರ್ಥಿಗಳು ಆತಂಕ ಹಾಗೂ ಆಕ್ರೋಶಕ್ಕೆ ಈಡಾಗಿದ್ದಾರೆ.ತಮಗೆ ಸೂಕ್ತ ರಕ್ಷಣೆ ಬೇಕೆಂದು ಆಗ್ರಹಿಸಿ ಕಾಲೇಜ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.