ಹರಿಹರಕ್ಕೆ ಇಂದು ನಟ ಶಿವರಾಜ್ ಕುಮಾರ್

ಹರಿಹರ: ‘ವೇದಾ’ ಚಲನಚಿತ್ರ ಪ್ರಚಾರ ಅಂಗವಾಗಿ ಖ್ಯಾತ ಚಲನಚಿತ್ರ ನಟ ಶಿವರಾಜ್ ಕುಮಾರ್ ಗುರುವಾರ ಮಧ್ಯಾಹ್ನ ಹರಿಹರಕ್ಕೆ ಆಗಮಿಸಲಿದ್ದಾರೆ.
ಗುರುವಾರ ಬೆಳಗ್ಗೆ ದಾವಣಗೆರೆ ನಗರದೇವತೆ ದುರ್ಗಾಂಬಿಕಾ ದೇವಿ ಆಶೀರ್ವಾದ ಪಡೆಯಲಿರುವ ಶಿವರಾಜ್ ಕುಮಾರ್, ನಂತರ ಹರಿಹರ ನಗರಕ್ಕೆ ಮಧ್ಯಾಹ್ನ 2-30 ಕ್ಕೆ ಬರಲಿದ್ದಾರೆ. ಇದೇ ಸಂದರ್ಭದಲ್ಲಿ ಜಯಶ್ರೀ ಚಿತ್ರಮಂದಿರದ ಬಳಿ ಸಾರ್ವಜನಿಕರ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಬಿ.ವಾಸುದೇವ ತಿಳಿಸಿದ್ದಾರೆ.
ಶಿವರಾಜ್ ಕುಮಾರ್ ಅಭಿನಯದ 125 ಚಲನಚಿತ್ರಗಳಲ್ಲಿ ವೇದ ಚಿತ್ರವು ಭಿನ್ನ ನಟನೆಯ ಚಿತ್ರವಾಗಿದೆ. ಇದರಲ್ಲಿ ಮಹಿಳೆಯರ ಬಗ್ಗೆ ಒಳ್ಳೆಯ ಸಂದೇಶಗಳಿವೆ. ರಾಜ್ಯದಾದ್ಯಂತ 224 ಕ್ಷೇತ್ರದಲ್ಲಿ ಚಲನಚಿತ್ರ ಪ್ರದರ್ಶನ ನಡೆಯತ್ತಿದೆ ಎಂದವರು ಹೇಳಿದರು.
ಶಿವರಾಜ್ ಕುಮಾರ್ ಬರುವ ವೇಳೆ ಉಚಿತವಾಗಿ ಚಲನಚಿತ್ರ ಪ್ರದರ್ಶನದ ವ್ಯವಸ್ಥೆಯ ಕೂಡ ಮಾಡಲಾಗಿದೆ ಎಂದು ಟಾಕೀಸ್ ಗುತ್ತಿಗೆದಾರ ಮಂಜುನಾಥ್ ಚಿತ್ರದುರ್ಗ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ಶಿವರಾಜ್ ಕುಮಾರ್ ಅಭಿಮಾನಿ ಬಳಗದ ಜಿಲ್ಲಾ ಮಹಿಳಾ ಅಧ್ಯಕ್ಷೆ ವೈ ಬಾಗ್ಯಮ್ಮ, ಪ್ರಕಾಶ್, ದಾದಾಪೀರ್ ಭಾನುವಳ್ಳಿ, ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!