ನಂದಿನಿ ಹೆಸರಲ್ಲಿ ಕಲಬೆರಿಕೆ ತುಪ್ಪ – ಪೊಲೀಸ್ ವಶಕ್ಕೆ

ಕೋಲಾರ: ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ಅಂಗಡಿಗಳಿಗೆ ಕಲಬೆರಕೆ ತುಪ್ಪವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವ್ಯಕ್ತಿಯ ಜೊತೆಗೆ ತುಪ್ಪದ 75 ಬಾಕ್ಸ್ ಹಾಗೂ ವಾಹನವನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
‌ಬೆಂಗಳೂರಿನ ಮಾರತಹಳ್ಳಿಯ ಶರವಣ ಎಂಬಾತ ಕಲಬೆರಕೆ ತುಪ್ಪವನ್ನು ಕೆಎಂಎಫ್ ಬ್ರ್ಯಾಂಡ್‌ನ ಸ್ಯಾಚೆಟ್‌ಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದದ್ದು ಕಂಡುಬಂದಿದ್ದು, ಪ್ರಕರಣ ದಾಖಲಿಸಲಾಗಿದೆ.
ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ (ಕೋಮುಲ್) ಮಾರುಕಟ್ಟೆ ವಿಭಾಗದ ಅಧಿಕಾರಿ ನಂಜುಂಡಗೌಡ ಕೋಲಾರದ ಕಠಾರಿಪಾಳ್ಯ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ನಂದಿನಿ ತುಪ್ಪ ಮಾರಾಟದ ವಾಹನ ಕಾಣಿಸಿದೆ. ತಮ್ಮ ಒಕ್ಕೂಟದ್ದಲ್ಲದ ವಾಹನ ಕುರಿತು ಮಾಹಿತಿ ವಿಚಾರಿಸಿದಾಗ ಕೃತ್ಯ ಹೊರಬಂದಿದೆ.
ನಂದಿನಿ ತುಪ್ಪ ಖರೀದಿಸಿ ಅದಕ್ಕೆ ಕಲಬೆರಕೆ ಮಾಡಿ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದೆವು ಎಂದು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!