ಜನವರಿ ಮಾಹೆ ಪಡಿತರ ಬಿಡುಗಡೆ- ತಹಶೀಲ್ದಾರ
ದಾವಣಗೆರೆ: ರಾಷ್ಟ್ರೀಯ ಆಹಾರ ಭದ್ರತಾ ಎನ್.ಎಫ್.ಎಸ್.ಎ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿಯನ್ನು ಜನವರಿಯಿಂದ ಡಿಸೆಂಬರ್ ರವರೆಗೆ ಉಚಿತವಾಗಿ ವಿತರಿಸುವುದರೊಂದಿಗೆ, ಹೆಚ್ಚುವರಿಯಾಗಿ 1. ಕೆ.ಜಿ ಅಕ್ಕಿಯನ್ನು ರಾಜ್ಯ ಸರ್ಕಾರದ ವೆಚ್ಚದಲ್ಲಿ ವಿತರಿಸಲಾಗುತ್ತಿದೆ. ಈಗಾಗಲೇ ಜನವರಿ ಮಾಹೆ ಪಡಿತರ ಹಂಚಿಕೆಯಾಗಿರುವುದರಿದ ಜನವರಿ ಮಾಹೆಯ ಒಂದು ಕೆಜಿ ಹೆಚ್ಚುವರಿ ಅಕ್ಕಿಯನ್ನು ಫೆಬ್ರುವರಿ ಮಾಹೆಯಲ್ಲಿ ನೀಡಲಾಗುವುದು ಎಂದು ದಾವಣಗೆರೆ ತಹಶೀಲ್ದಾರ ಅವರು ತಿಳಿಸಿದ್ದಾರೆ.
ಅಂತ್ಯೋದಯ ಪಡಿತರ ಚೀಟಿ(ಎ.ಎ.ವೈ) ಹೊಂದಿದವರಿಗೆ ಪ್ರತಿ ಕಾರ್ಡಿಗೆ 35 ಕೆಜಿ ಅಕ್ಕಿ, ಆದ್ಯತಾ ಪಡಿತರ ಚೀಟಿ(ಪಿ.ಹೆಚ್.ಹೆಚ್./ಬಿ.ಪಿ.ಎಲ್) ಹೊಂದಿದ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗೂ ಒಪ್ಪಿಗೆ ನೀಡಿದ ಏಕ ಸದಸ್ಯ ಎ.ಪಿ.ಎಲ್ ಪಡಿತರ ಚೀಟಿಗಳಿಗೆ 1 ಕೆ.ಜಿ ಗೆ 15 ರೂ ಗಳಂತೆ ಅಕ್ಕಿಯನ್ನು ವಿತರಿಸಲಾಗುವುದು.
ಅಂತರ್ ರಾಜ್ಯ/ಜಿಲ್ಲೆ ಜಾರಿಯಲ್ಲಿ ಇರುವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ ಸ್ಥಳೀಯ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡಿತರ ಪಡೆಯಲು ಅವಕಾಶವಿದೆ.
ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಯೋಜನೆ(ಪಿ.ಎಮ್.ಜಿ.ಕೆ.ವೈ.ಎ)ಯಡಿ ಡಿಸೆಂಬರ್-2022 ಕ್ಕೆ ಅಂತ್ಯಗೊಡಿದ್ದು, ಎನ್.ಎಫ್.ಎಸ್.ಎ ಅಡಿ ಜನವರಿ 2023 ರ ಮಾಹೆಯಲ್ಲಿ ಮೇಲ್ಕಂಡ ವಿವಿಧ ವರ್ಗದ ಪಡಿತರ ಚೀಟಿದಾರರು ತಿಂಗಳ ಅಂತ್ಯದವರೆಗೆ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋ/ಆದಾರ್ ಆಧಾರಿತ ಧೃಡೀಕರಣ ಓ.ಟಿ.ಪಿ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಂಡು ಪಡಿತರ ಆಹಾರಧಾನ್ಯ ಪಡೆಯಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.