ಸಾಲುಮರಗಳ ಬೆಳವಣಿಗೆ,ಮರಗಳ ಜಾತಿ ಆಯ್ಕೆಗೆ ನಮ್ಮ ಆಳರಸರ ಆಳವಾದ ಪರಿಸರ ಪ್ರಜ್ಞೆಗೆ ಸಲಾಂ

ದಾವಣಗೆರೆ : ಕ್ರಿ.ಪೂ. ಕಾಲದ ಮಹಾರಾಜ ಅಶೋಕನ ಕಾಲದಿಂದ ಹಿಡಿದು ನಮ್ಮ ನಾಡನ್ನಾಳಿದ ಕಡೆಯ ರಾಜವಂಶಸ್ಥರಾದ ಮೈಸೂರು ಒಡೆಯರ ವರೆಗೂ ಹಲವಾರು ರಾಜರಾಜರುಗಳು ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದರು. ಮುಖ್ಯವಾಗಿ ಸಾಲುಮರಗಳ ಬೆಳವಣಿಗೆ ಮೂಲಕ ಮರಗಳ ಬೆಳವಣಿಗೆಗೆ ಹಾಗೂ ಆ ಕಾಲದಲ್ಲಿ ಹೆಚ್ಚಾಗಿ ನಡಿಗೆ ಮಾರ್ಗ ಹಾಗೂ ಎತ್ತಿನ ಗಾಡಿಯ ಮೂಲಕ ಪ್ರಯಾಣ ಮಾಡುತ್ತಿದ್ದ ಜನಸಾಮಾನ್ಯರಿಗೆ ನೆರಳನ್ನೊದಗಿಸುವ ಪ್ರಯತ್ನ ಮಾಡುತ್ತಿದ್ದರು. ಇದರ ಜೊತೆಗೆ ಅವರು ಸಾಲುಮರಗಳ ಬೆಳವಣಿಗೆಗೆ ಆಯ್ದುಕೊಳ್ಳುತ್ತಿದ್ದ ಮರಗಳ ಜಾತಿ ಗಮನಿಸಿದಾಗ ಅವರುಗಳಿಗೆ ಉತ್ತಮವಾದ ಪರಿಸರ ಪ್ರಜ್ಞೆ ಇದ್ದದ್ದು ಸ್ಪಷ್ಟವಾಗಿ ತಿಳಿಯುತ್ತದೆ.

ರಾಜರುಗಳು ಸಾಲು ಮರಳನ್ನು ಗಮನಿಸಿದಾಗ ಕಂಡುಬರುವುದು ಬಹುತೇಕ ಆಲ, ಅರಳಿ, ಗೋಣಿ, ಬಸರಿ, ಹುಣಸೆ, ನಾಯಿ ನೇರಳೆಯಂತಹ ಮರಗಳು. ಆಲದ ಜಾತಿಯ ಮರಗಳು ಪರಿಸರ ವ್ಯವಸ್ಥೆಯ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಮೂಲಕ key stone Species ಎನಿಸಿವೆ.

ರಾಜರುಗಳು ಎಲ್ಲೂ ಕೂಡ ಬೆಲೆ ಬಾಳುವಂತಹ ಬೀಟೆ, ಹೊನ್ನೆಯಂತಹ ಮರಗಳನ್ನಾಗಲಿ; ಮಾನವರು ಇಷ್ಟಪಡುವ ನಿರ್ದಿಷ್ಟ ಋತುಮಾನದಲ್ಲಿ ಮಾತ್ರ ಹಣ್ಣುಬಿಡುವ ಹಲಸು, ಮಾವಿನಂತಹ ಮರಗಳನ್ನಾಗಲಿ ಹೆಚ್ಚಾಗಿ ಆರಿಸಿಲ್ಲ. ಪ್ರಾಣಿ ಪಕ್ಷಿಗಳಿಗೆ ಯಥೇಚ್ಛವಾಗಿ ಕೊಡುವ, ಮುಖ್ಯವಾಗಿ ಮಾನವರ ಬಳಸದ, ನಿರ್ದಿಷ್ಟ ಋತುಮಾನವಲ್ಲದ ವರ್ಷದಲ್ಲಿ ಬೇರೆ ಬೇರೆ ಋತುಮಾನದಲ್ಲಿ random ಆಗಿ ಹಣ್ಣು ಬಿಡುವ ಆಲದ ಮರಗಳ ಜಾತಿಯನ್ನಷ್ಟೆ ಅವರು ಹೆಚ್ಚಾಗಿ ಆರಿಸಿದ್ದಾರೆ. ಅವರು ಬೆಲೆಬಾಳುವ ಬೀಟೆ, ಹೊನ್ನೆ ಮರಗಳನ್ನು ಬೆಳಸಿದ್ದರೆ ಅವು ಈ ಮರಗಳಂತೆ ನೂರಾರು ವರ್ಷ ಉಳಿಯುತ್ತಿದ್ದವೆ? ಮಾವು, ಹಲಸಿನಂತ ಮಾನವರು ಹೆಚ್ಚಾಗಿ ಇಷ್ಟಪಡುವ ಮರಗಳಾಗಿದ್ದರೆ ಅವುಗಳ ಹಣ್ಣುಗಳನ್ನು ಪರಮ ಸ್ವಾರ್ಥಿ, ಅತಿಯಾಸೆ ಪಡುವ ಮಾನವರಾದ ನಾವುಗಳು ಪ್ರಾಣಿಪಕ್ಷಿಗಳಿಗೆ ಒಂದನ್ನಾದರೂ ಬಿಡುತ್ತಿದ್ದವೇನೂ?

Leave a Reply

Your email address will not be published. Required fields are marked *

error: Content is protected !!