ಸಾಧನೆಗೆ ಮತ್ತೊಂದು ಹೆಸರೇ ಜಿ.ಎಂ. ಸಿದ್ದೇಶ್ವರ : ಬಾಡದ ಆನಂದರಾಜು

ದಾವಣಗೆರೆ : ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಿದ ಏಕೈಕ ಸಂಸದರು ಎಂದರೆ ಜಿ.ಎಂ ಸಿದ್ಧೇಶ್ವರ ಅವರು ಮಾತ್ರ ಎಂದು ಶೋಷಿತ ವರ್ಗಗಳ ಮುಖಂಡರಾದ ಬಾಡದ ಆನಂದರಾಜು ತಿಳಿಸಿದರು.

ಜಿ. ಮಲ್ಲಿಕಾರ್ಜುನಪ್ಪ ಅವರಿಂದ ಹಿಡಿದು ಇಲ್ಲಿನ ವರೆಗೆ ಬಿಜೆಪಿ ಸಂಸದರಾಗಿರುವ ಜಿ.ಎಂ ಕುಟುಂಬ ದಾವಣಗೆರೆ ಜಿಲ್ಲೆಯನ್ನು ಭೂ ಪಟದಲ್ಲಿ ಗುರುತಿಸುವಂತೆ ಮಾಡಿದೆ ಎಂದು ಹೇಳಿದರು. ಭ್ರಷ್ಟಾಚಾರವಿಲ್ಲದೆ, ಪ್ರಾಮಾಣಿಕವಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ.

ಸ್ವಾರ್ಟ್ ಸಿಟಿ ಯೋಜನೆ, ಅಮೃತ ನಗರ ಯೋಜನೆ ಸೇರಿದಂತೆ ಕೇಂದ್ರದಿಂದ ಸಾವಿರಾರು ಕೋಟಿ ಹಣವನ್ನು ದಾವಣಗೆರೆ ಜಿಲ್ಲೆಗೆ ತಂದಿದ್ದಾರೆ. ಇವರ ಸಾಧನೆಗಳನ್ನು ಮಾಡಿರುವ ಕೆಲಸಗಳು ಹೇಳುತ್ತಿವೆ. ನಗರದಲ್ಲಿ ರೈಲ್ವೇ ನಿಲ್ದಾಣ, ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣವನ್ನು ಅತ್ಯುತ್ತಮ ಗುಣಮಟ್ಟದಡಿ ಸುಂದರವಾಗಿ ನಿರ್ಮಿಸಿದ ಕೀರ್ತೀ ಮತ್ತು ಶ್ರಮ ಜಿ.ಎಂ ಸಿದ್ದೇಶ್ವರ ಅವರಿಗೆ ಸಲ್ಲುತ್ತದೆ.

ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಜಿಲ್ಲೆಯಲ್ಲಿ ಉತ್ತಮ ಗುಣ ಮಟ್ಟದ ರಸ್ತೆಗಳನ್ನ ಮಾಡಿದ್ದಾರೆ. ಕೈಗಾರಿಕೆಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದಾರೆ. ಪ್ರತಿ ಹಳ್ಳಿಗಳಲ್ಲೂ ಮೂಲಬೂತ ಸೌಕರ್ಯ ಒದಗಿಸಿದ್ದಾರೆ. ಎಲ್ಲಾ ತಾಲ್ಲೂಕ್‍ಗಳಿಗೂ ಕೋಟಿ ಕೋಟಿ ಹಣ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡಿರುವ ಕಾರಣ ಇದೀಗ ಅವರ ಧರ್ಮಪತ್ನಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಪಕ್ಷ ಟಿಕೆಟ್ ನೀಡಿದೆ.

ಇನ್ನೂ ಸಾಮಾನ್ಯ ಕಾರ್ಯಕರ್ತರಿಗೂ ದಿಶಾ ಸಮಿತಿ, ಆರೋಗ್ಯ ರಕ್ಷ ಸಮಿತಿ ಸೇರಿದಂತೆ ಹತ್ತಾರು ಸಮಿತಿಗಳಿಗೆ ನೇಮಕ ಮಾಡಿ ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಭದ್ರಕೋಟೆಯನ್ನಾಗಿ ಮಾಡಿದ್ದಾರೆ ಎಂದು ಬಾಡದ ಆನಂದರಾಜು ತಿಳಿಸಿದ್ದಾರೆ. ಈ.ಎಂ. ಸಿದ್ಧೇಶ್ವರ ಅವರು ತಮ್ಮ ಅಧಿಕಾರಾವಧೀಯಲ್ಲಿ ಮಾಡಿರುವ ಕೆಲಸಗಳು ಕಣ್ಮುಂದೆ ಇದ್ದು, ಈ ಬಾರಿಯೂ ಜಿಲ್ಲೆಯಲ್ಲಿ ಜನರ ಒಲವು ಬಿಜೆಪಿ ಪಕ್ಷಕ್ಕೆ ಇದೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡಿದ ರಾಜಕಾರಣಿ ಎಂದರೆ ಜಿ.ಎಂ ಸಿದ್ದೇಶ್ವರ ಅವರು ಪ್ರತಿ ಹಳ್ಳಿಯಲ್ಲೂ ಜನರ ವಿಶ್ವಾಸ ಹೊಂದಿದ್ದಾರೆ. ಇದೀಗ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದರು ಪಕ್ಷದ ಸಂಘಟನೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಹೊಸ ಚಿಂತನೆ ಆಲೋಚನೆ ಮಾಡುವ ಸಿದ್ದೇಶ್ವರ ಅವರು ಈ ಬಾರಿಯೂ ಅವರ ನೇತೃತ್ವದಲ್ಲೇ ಜಿಲ್ಲೆಯ ಎಲ್ಲಾ ನಾಯಕರೊಂದಿಗೆ ಒಟ್ಟಿಗೆ ಸೇರಿ ಸಾಮೂಹಿಕ ನಾಯಕತ್ವದಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಮತ್ತೊಮ್ಮೆ ದಾವಣಗೆರೆಯಲ್ಲಿ ಕಮಲ ಹರಳುವುದು ಸತ್ಯ ಸಂಗತಿ. ಪಕ್ಷದ ಅಭ್ಯರ್ಥಿ ಯಾರೇ ಆಗಲಿ, ಹೈಕಮಾಂಡ್ ಮಾಡಿರುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಮಾಡಲು ಕೈ ಜೋಡಿಸಬೇಕು, ಶ್ರಮಿಸಬೇಕೆಂದು ಬಾಡದ ಆನಂದರಾಜು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!