ರಂಗ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ 

ದಾವಣಗೆರೆ : ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ರಂಗಾಯಣವು ಭಾರತೀಯ ರಂಗಶಿಕ್ಷಣ ಕೇಂದ್ರ ರಂಗಶಾಲೆಯನ್ನು ಕಳೆದ 10 ವರ್ಷಗಳಿಂದ ನಡೆಸುತ್ತಿದೆ. ಪ್ರಸ್ತುತ ಒಂದು ವರ್ಷದ ರಂಗಶಿಕ್ಷಣದಲ್ಲಿ ಡಿಪ್ಲೊಮೋ ಕೋರ್ಸ್ 2022-23ನೇ ಸಾಲಿನ ರಂಗಶಾಲೆಗೆ ಇಬ್ಬರು ರಂಗಶಿಕ್ಷಕರ ಅವಶ್ಯಕತೆ ಇದ್ದು, ಈ ತಾತ್ಕಾಲಿಕ ಹುದ್ದೆಗಳಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲು ಆಯೋಜಿಸಲಾಗಿದೆ.

ರಂಗಭೂಮಿಯಲ್ಲಿ ಅನುಭವವಿರುವ ಅಭ್ಯರ್ಥಿಗಳು ರಾಷ್ಟ್ರೀಯ ನಾಟಕ ಶಾಲೆಯ ಪದವಿ/ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ಪದವಿ/ಡಿಪ್ಲೊಮೋ ಪಡೆದವರಾಗಿರಬೇಕು. ಆಸಕ್ತರು ಜು.08 ರೊಳಗಾಗಿ ಉಪ ನಿರ್ದೇಶಕರು, ರಂಗಾಯಣ, ವಿನೋಬ ರಸ್ತೆ, ಮೈಸೂರು-05 ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಜು.13 ರಂದು ಬೆಳಿಗ್ಗೆ 10.30ಕ್ಕೆ ಕೆಳಕಂಡ ಮೂಲ ದಾಖಲಾತಿಗಳೊಂದಿಗೆ ಮೈಸೂರಿನ ರಂಗಾಯಣದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಅರ್ಜಿ ನಮೂನೆಯನ್ನು ವೆಬ್‍ಸೈಟ್ www.rangayana.org ನ್ನು ಸಂಪರ್ಕಿಸಬಹುದೆಂದು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ ಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!