‘ಕಾಂತಾರ’ ನಂತರದ ‘ಅರಣ್ಯ ಕಾಂಡ’; ರಿಷಭ್ ಮಾತಿಗೆ ಮಣಿದ ಸಿಎಂ

ರಿಷಭ್ ಮಾತಿಗೆ ಮಣಿದ ಸಿಎಂ

ಬೆಂಗಳೂರು: ಸೂಪರ್ ಹಿಟ್ ಚಿತ್ರ ‘ಕಾಂತಾರ’ ಸ್ಯಾಂಡಲ್‌ವುಡ್‌ನಲ್ಲಷ್ಟೇ ಅಲ್ಲ, ಇಡೀ ದೇಶದಲ್ಲೇ ತರಂಗ ಎಬ್ಬಿಸಿರುವುದಂತೂ ಸತ್ಯ. ಅಂದ ಹಾಗೆ, ‘ಕಾಂತಾರ’ ಸಿನಿಮಾ ರಂಜನೆಯನ್ನಷ್ಟೇ ನೀಡಿದ್ದಲ್ಲ, ಅರಣ್ಯ ತಪ್ಪಲಿನ ಜನರ ಬದುಕು-ಬವಣೆ, ಅರಣ್ಯ ರಕ್ಷಕರ ಸವಾಲುಗಳ ಬಗ್ಗೆಯೂ ಬೆಳಕುಚೆಲ್ಲಿದೆ.
ಈ ಸಿನಿಮಾದ ಸೂತ್ರದಾರ ರಿಷಬ್ ಶೆಟ್ಟಿಯವರು ‘ಕಾಂತಾರ’ ಕಥೆಯನ್ನು ರೀಲ್‌ಗಷ್ಟೇ ಸೀಮಿತಗೊಳಿಸಿಲ್ಲ. ರಿಯಲ್ ಬಗ್ಗೆಯೂ ಗಮನಕೇಂದ್ರೀಕರಿಸಿದ್ದಾರೆ. ಸಿನಿಮಾ ತೆರೆಕಂಡ ನಂತರ ಅರಣ್ಯ ಸುತ್ತಾಡಿ ಅರಣ್ಯವಾಸಿಗಳ ಬದುಕು, ವನ್ಯ ಜೀವಿಗಳ ಪರಿಪಾಟಿಲು, ಅರಣ್ಯ ರಕ್ಷಕರ ಬವಣೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಒಟ್ಟಾರೆ ವ್ಯವಸ್ಥೆ ಬಗ್ಗೆ ಮಮ್ಮಲ ಮರುಗಿರುವ ರಿಷಬ್ ಶೆಟ್ಟಿ ಅವರು ಈ ರಿಯಲ್ ಸ್ಟೋರಿಯನ್ಬು ಸರ್ಕಾರದ ಮುಂದಿಟ್ಟು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.

ಈ ಸಂಬಂಧ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿಯಾದರು. ತಮ್ಮ ‘ಕಾಂತಾರ’ ನಂತರದ ಕಥಾನಕವನ್ನು ಸಿಎಂಗೆ ವಿವರಿಸಿದರು. ಅರಣ್ಯವಾಸಿಗಳ ಬಗ್ಗೆ ಅರಣ್ಯ ಸಂರಕ್ಷಕರ ಬಗ್ಗೆ, ಫಾರೆಸ್ಟ್ ಗಾರ್ಡ್‌ಗಳ ಸಮಸ್ಯೆಗಳ ಬಗ್ಗೆ ಸಿಎಂಗೆ ಮನವರಿಕೆ ಮಾಡಿದರು.

ಈ ಕುರಿತಂತೆ ಮಾಹಿತಿ ಹಚಿಕೊಂಡಿರುವ ನಟ ರಿಷಬ್ ಶೆಟ್ಟಿ, ‘ಕಾಂತಾರ’ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ,ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

 

ಈ ಕುರಿತಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರೂ ಟ್ವೀಟ್ ಮಾಡಿ ‘ನಮ್ಮ ನೆಲದ ಮೂಲ ಸಂಸ್ಕೃತಿ – ಪರಂಪರೆಯನ್ನು ಕಾಂತಾರ ಚಿತ್ರದ ಮೂಲಕ ಜಗತ್ತಿಗೆ ಪರಿಚಯಿಸಿದ ಕನ್ನಡದ ಹೆಮ್ಮೆಯ ನಿರ್ದೇಶಕ ರಿಷಬ್ ಶೆಟ್ಟಿಯವರು ಅರಣ್ಯ ನಿವಾಸಿಗಳೊಡನೆ ಚರ್ಚಸಿ ಅವರ ಸಮಸ್ಯೆಗಳನ್ನು ನಮ್ಮ ಮುಂದೆ ಮಂಡಿಸಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಸರ್ಕಾರ ಸಹ ಉತ್ಸುಕವಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!