ಬಿಜೆಪಿ ‘ಪ್ರಗತಿ ರಥ’ ವೀಕ್ಷಣೆಗೆ ಚಾಲನೆ
ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಮತ್ತು ದೇಶದ ಪ್ರಗತಿ ಕುರಿತಾದ ವಿಷಯಗಳನ್ನು ಒಳಗೊಂಡ ವಿಡಿಯೊ, ಸಾಕ್ಷ್ಯಚಿತ್ರಗಳ ಸಾರ್ವಜನಿಕರ ವೀಕ್ಷಣೆಗೆ ಪ್ರಗತಿ ರಥವನ್ನು ಉತ್ತರ ವಿದಾನಸಭಾ ಕ್ಷೇತ್ರದ ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದ ಬಳಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಹಾಗೂ ಉತ್ತರ ಮಂಡಲದ ಅಧ್ಯಕ್ಷ ಬಿ.ಜಿ. ಸಂಗನಗೌಡ್ರು ಉದ್ಘಾಟಿಸಿದರು.
ಧೂಡಾ ಅಧ್ಯಕ್ಷ ಎ.ವೈ. ಪ್ರಕಾಶ್, ಬಸವರಾಜಯ್ಯ, ಸಚಿನ್ ವರ್ಣೆಕರ್, ಪಾಲಿಕೆ ಸದಸ್ಯರಾದ ಕೆ.ಎಂ. ವೀರೇಶ್, ರೇಣುಕಾ ಶ್ರೀನಿವಾಸ್, ಚಂದ್ರಶೇಖರ್, ಮಂಜುಳ ಮಹೇಶ್, ಸರ್ವಮಂಗಳಮ್ಮ, ಶಿವಾಜಿ, ಮುಕುಂದಪ್ಪ, ಪಿ.ಎಸ್. ಬಸವರಾಜಯ್ಯ, ಹನುಮಂತರಾವ್ ಸೂರ್ವೆ, ಗುಡ್ಡಪ್ಪ, ಗುತ್ತೂರು ಮಂಜುನಾಥ್, ದುರುಗೇಶ್, ಹನುಮಂತಪ್ಪ, ವಿಶ್ವಾಸ್ ಮತ್ತಿತರರಿದ್ದರು.