ಮನೆ ಕಳ್ಳತನ ಮಾಡಿದ 6 ಆರೋಪಿತರ ಬಂಧನ: 25,75,200ರೂ ಮೌಲ್ಯದ ಮಾಲು ವಶ

ದಾವಣಗೆರೆ: ಮನೆಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿರುವ ಪೊಲೀಸರು ಆರು ಜನರನ್ನು ಬಂಧಿಸಿದ್ದು, 25.75 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ಗೋವಿಂದ ಬಡಾವಣೆಯ ಶಿವರಾಜ ಲಮಾಣಿ (26) ಮಾರುತಿ (25), ಸುನೀಲ್ ಬಿ ಲಮಾಣಿ (22) ಮನೋಜ್ ಡಿ ಲಮಾಣಿ (25), ಅಭಿಷೇಕ್ (22) ಮಾಲತೇಶ್ (25) ಬಂಧಿತರು. ಇವರಿಂದ ಕಳ್ಳತನ ಮಾಡಿದ್ದ 23,35,200 ರೂ. ಬೆಲೆ ಬಾಳುವ 417ಗ್ರಾಂ ಬಂಗಾರದ ಆಭರಣ, 60 ಸಾವಿರ ರೂ. ಬೆಲೆ ಬಾಳುವ 328ಗ್ರಾಂ ಬೆಳ್ಳಿಯ ಆಭರಣ ಮತ್ತು ಕೃತ್ಯಕ್ಕೆ ಬಳಿಸಿದ್ದ 1.80 ಲಕ್ಷ ರೂ. ಬೆಲೆ ಬಾಳುವ 2 ಬೈಕ್‌ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕಳೆದ ಜೂ.5ರಂದು ಡಾಲರ್ಸ್ ಕಾಲೋನಿಯ ಡಾ.ತಿಪ್ಪೇಸ್ವಾಮಿ ಎಂಬುವವರು ತಮ್ಮ ಮನೆಯಲ್ಲಿ ಕಳ್ಳತನವಾಗಿರುವ ಕುರಿತು ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದರು.
ಆರೋಪಿತಗಳನ್ನು ಪತ್ತೆ ಮಾಡಿದ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ, ವಿದ್ಯಾನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಭಾವತಿ ಸಿ ಶೇತಸನದಿ, ಶ್ರೀಮತಿ ರೇಣುಕಾ ಜಿ.ಎಂ., ಪಿ.ಎಸ್.ಐ ಮಂಜುನಾಥ ಕಲ್ಲದೇವರು ಹಾಗೂ ಸಿಬ್ಬಂದಿಗಳಾದ ಆನಂದ ಮುಂದಲಮನಿ, ಭೋಜಪ್ಪ ಕಿಚಡಿ, ಯೋಗೀಶ್ ನಾಯ್ಕ, ಮಂಜಪ್ಪ.ಟಿ, ಗೋಪಿನಾಥ ಬಿ ನಾಯ್ಕ, ಲಕ್ಷ್ಮಣ್ ಆರ್, ನಾಗರಾಜ, ಮಂಜುನಾಥ ಬಿ.ವಿ, ರಾಮಚಂದ್ರಪ್ಪ, ಅಜಯ್, ಮಂಜುನಾಥ ಹಾಗೂ ಅಕ್ತರ್, ನಾಗರಾಜ ಕುಂಬಾರ್, ಮಾರುತಿ, ವಿರೇಶ್, ರಾಘವೇಂದ್ರ, ಶಾಂತರಾಜ್ ರವರುಗಳನ್ನು ಎಸ್ಪಿ ಡಾ. ಅರುಣ್ ಕೆ. ಶ್ಲಾಘಿಸಿರುತ್ತಾರೆ