Minor Raped Conviction: ಅಪ್ರಾಪ್ತೆಯನ್ನ ಟಿವಿ ನೋಡಲು ಕರೆದು ಅತ್ಯಾಚಾರವೆಸಗಿದ | ಇದೀಗ ಕಠಿಣ ಶಿಕ್ಷೆಗೆ ಗುರಿಯಾದ ಕಥೆಯಿದು.!

ಶಿವಮೊಗ್ಗ:  ಟಿವಿ ನೋಡುವ‌ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ಮನೆಗೆ‌ ಕರೆಸಿಕೊಂಡು ಅತ್ಯಚಾರ ಮಾಡಿದ‌ ವ್ಯಕ್ತಿ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಲಾಗಿದೆ.

20-05-2019 ರಂದು ಮನ್ಸೂರ್ (36 ವರ್ಷ ) ಎಂಬ ವ್ಯಕ್ತಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಟಿವಿ ನೋಡುವ ನೆಪದಲ್ಲಿ ತನ್ನ ಮನೆಗೆ ಕರೆದು ಅತ್ಯಾಚಾರವೆಸಗಿದ್ದ.
ಈ ವಿಚಾರವನ್ನು ಯಾರಿಗೂ ತಿಳಿಸದಂತೆ, ಬಾಲಕಿಗೆ ಜೀವ ಬೆದರಿಕೆ ಹಾಕಿದ್ದ. ಅಲ್ಲದೇ ಬೀಡಿಯಿಂದ ಅಪ್ರಾಪ್ತ ಬಾಲಕಿಯ ಬಲಗೈ ಸಹ ಸುಟ್ಟಿದ್ದ. ಆನಂತರದಲ್ಲಿ ಅಪ್ರಾಪ್ತ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು‌ಬಂದು ಆಸ್ಪತ್ರೆಯಲ್ಲಿ ಚಿಕಿತ್ಯೆಗೆ ಬಂದ ವೇಳೆ ಬಾಲಕಿ ಗರ್ಭಿಣಿಯಾಗಿರುವುದು ತಿಳಿದು ಬಂದಿರುತ್ತದೆ ಎಂದು ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ 01-10-2019 ರಂದು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 68/2019 ಕಲಂ 376(2)(ಎನ್), 323, 506 ಐ.ಪಿ.ಸಿ ಹಾಗೂ ಕಲಂ 6 ಪೂಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.

ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯ ಪಿಐ ಅಭಯ್ ಪ್ರಕಾಶ್ ಸೋಮನಾಳ್ ಪ್ರಕರಣದ ತನಿಖೆ ಕೈಗೊಂಡು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸತೀಶ್ ಅವರು ವಾದ ಮಂಡಿಸಿದ್ದರು

ಶಿವಮೊಗ್ಗ ADJFT SC1 POCSO ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಾಧೀಶರಾದ ದಯಾನಂದ ರವರು ದಿನಾಂಕ 08-10-2021 ರಂದು ಆರೋಪಿತನ ವಿರುದ್ಧ ಕಲಂ 6 ಪೋಕ್ಸೋ ಕಾಯ್ದೆ ದೃಢಪಟ್ಟಿದ್ದು ಆರೋಪಿ ಮನ್ಸೂರ್ ಗೆ ಹತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ 10 ಸಾವಿರ ದಂಡವನ್ನು ಸಹ ಹಾಕಿದ್ದಾರೆ.

ದಂಡ ವಿಧಿಸಿದ ಹಣ ಕಟ್ಟದಿದ್ದರೆ ಆರು ತಿಂಗಳ ಸಾದಾ ಕಾರಗೃಹ ವಾಸ ಶಿಕ್ಷೆ ಮತ್ತು ಕಲಂ 323 ಐಪಿಸಿ ದೃಢಪಟ್ಟಿದ್ದು ಆರು ತಿಂಗಳ ಕಠಿಣ ಕಾರವಾಸ ಶಿಕ್ಷೆ 1000 ದಂಡ , ದಂಡವನ್ನು ಪಾವತಿಸದಿದ್ದರೆ ಒಂದು ತಿಂಗಳ ಸಾದಾ ಕಾರವಾಸ ಶಿಕ್ಷೆ ವಿದಿಸಿ ಆದೇಶಿಸಿದ್ದಾರೆ. ಹಾಗೂ ಕಲಂ 506 ಐಪಿಸಿ ದೃಢಪಟ್ಟಿದ್ದು ಆರು ತಿಂಗಳ ಸಾದಾ ಕಾರವಾಸ ಹಾಗೂ 1000 ದಂಡ, ದಂಡ ಪಾವತಿಸದಿದ್ದರೆ ಒಂದು ತಿಂಗಳ ಸಾದಾ ಕಾರವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ.

ನೊಂದ ಬಾಲಕಿಗೆ ಪರಿಹಾರವಾಗಿ 12,000 ಹಣ ಪಾವತಿಸುವುದು ಹಾಗೂ ಸರ್ಕಾರಕ್ಕೆ 1000 ಹಣವನ್ನು ಜಮಾ ಮಾಡಲು ಆದೇಶ ನೀಡಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!