ವಿಟ್ಲ : ಅನ್ಯಮತಿಯನಿಂದ ಹಿಂದೂ ಮನೆಗೆ ದಾಳಿ ಹಿಂ.ಜಾ.ವೇ.ಖಂಡನೆ
ವಿಟ್ಲ : ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆ ಹಾಗೂ ಮಕ್ಕಳ ಮೇಲೆ ಅನ್ಯಕೋಮಿನ ವ್ಯಕ್ತಿಯೊಬ್ಬ ದೌರ್ಜನ್ಯವೆಸಗಿದ ಘಟನೆ ವಿಟ್ಲ ಸಮೀಪದ ಕನ್ಯಾನ ಕಣಿಯೂರು ತಲಕ್ಕಿ ಎಂಬಲ್ಲಿ ನಡೆದಿದೆ.
ಸಿದ್ದಿಕ್ ಎಂಬ ಅನ್ಯಕೋಮಿನ ವ್ಯಕ್ತಿಯೊಬ್ಬ ಮನೆಗೆ ಅಕ್ರಮ ಪ್ರವೇಶ ಮಾಡಿ ದೌರ್ಜನ್ಯವೆಸಗಿದ್ದಾನೆ ಎನ್ನಲಾಗಿದೆ. ಮಹಿಳೆ ಮತ್ತು ಮಗನ ಮೇಲೆ ದೌರ್ಜನ್ಯವೆಸಗಿದ್ದು ಈ ಘಟನೆಯನ್ನು ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ತೀವ್ರವಾಗಿ ಖಂಡಿಸುತ್ತದೆ. ಮನೆಗೆ ಅಕ್ರಮ ಪ್ರವೇಶಿಸಿ ದೌರ್ಜನ್ಯ ಎಸಗಿದ ಆರೋಪಿಯನ್ನು ತಕ್ಷಣ ಬಂಧಿಸಿ ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಹಿಂ.ಜಾ.ವೆ. ಆಗ್ರಹಿಸಿದೆ.