ಅಕ್ಟೋಬರ್ 30 ರಿಂದ ಆಟೋಗಳಿಗೆ ಮೀಟರ್ ಕಡ್ಡಾಯ ಮೀಟರ್ ಅಳವಡಿಸದಿದ್ದರೆ ಕಠಿಣ ಕ್ರಮ
- ದಾವಣಗೆರೆ: ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಇಂದು ಸಂಜೆ ನಗರದ ರೋಟರಿ ಬಾಲಭವನದಲ್ಲಿಆಟೋ ಚಾಲಕರ ಹಾಗೂ ಮಾಲೀಕರ ಸಭೆ ಕರೆದು ಕಡ್ಡಾಯವಾಗಿ ಆಟೋಗಳಿಗೆ ಮೀಟರ್ ಅಳವಡಿಕೆ ಮಾಡಬೇಕೆಂದು ತಿಳಿಸಲಾಯಿತು.
ಈ ತಿಂಗಳು 30 ರೊಳಗೆ ಎಲ್ಲಾ ಚಾಲಕರು ಹಾಗೂ ಮಾಲೀಕರುಗಳು ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಬೇಕು.ಇಲ್ಲದಿದ್ದರೆ ಕಠಿಣ ಕಾನೂನುಕ್ರಮ ಕೈಗೊಳ್ಳಲಾಗುವುದು.
ಎಂದು ಡಿವೈಎಸ್ಪಿ ರವರಾದ ಶ್ರೀ ನಾಗೇಶ್ ಐತಾಳ್ ಮತ್ತು ಆರ್.ಟಿ.ಓ ರವರಾದ ಶ್ರೀ ಶ್ರೀಧರ್ ತಿಳಿಸಿದರು.
ಈ ಸಂದರ್ಭದಲ್ಲಿ , ಶ್ರೀ ತಿಮ್ಮಣ್ಣ, ಸಿಪಿಐ, ವಿವಿಧ ಆಟೋ ಸಂಘಟನೆಗಳು ಚಾಲಕರುಮಾಲೀಕರು ಇದ್ದರು.