ಪಾಲಿಕೆಯಿಂದ ವಿದ್ಮುದ್ಮಾನಾ ಮತಯಂತ್ರ ಬಳಕೆ ಕುರಿತಂತೆ ಜಾಗೃತಿ ಕಾರ್ಯಕ್ರಮ

ಪಾಲಿಕೆಯಿಂದ ವಿದ್ಮುದ್ಮಾನಾ ಮತಯಂತ್ರ ಬಳಕೆ
ದಾವಣಗೆರೆ : ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023 ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಹಾಗೂ ಕಾರ್ಯ ನಿರ್ವಹಣೆ ಪ್ರಕ್ರಿಯೆ ಕುರಿತಂತೆ ಪ್ರಯೋಗಿಕವಾಗಿ ಕುರಿತಂತೆ ಮತದಾರರಿಗೆ ಅರಿವು ಮತ್ತು ಜಾಗೃತಿ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ತಿಳಿಸಿದರು.
ಮಹಾನಗರ ಪಾಲಿಕೆ ಆವರಣದಲ್ಲಿ ಸೋಮವಾರ ಮತದಾರರಿಗೆ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಕುರಿತು ಪ್ರಾತ್ಯಕ್ಷಿತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪಾಲಿಕೆ ಆವರಣದಲ್ಲಿ ಇಂದು ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಡ್‌ಗಳ ಕುರಿತು ಮಾದರಿ ಮತಯಂತ್ರವನ್ನು ಸ್ಥಾಪಿಸಿ ಮೊದಲನ ಹಂತದಲ್ಲಿ ರಾಜಕೀಯ ವ್ಯಕ್ತಿಗಳು ಮತ್ತು ಮಾಧ್ಯಮದವರಿಗೆ ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ ಪ್ಯಾಡ್‌ಗಳ ಕುರಿತು ಜಾಗೃತಿ ಮೂಡಿಸಲಾಗಿದೆ ಎ೦ದರು.
ಇಂದಿನಿಂದ 10 ದಿನಗಳ ಕಾಲ ದಾವಣಗೆರೆ ಉತ್ತರ ಹಾಗೂ ದಕ್ಷಿಣವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 24 ಮಾದರಿ ಮತಯಂತ್ರಗಳನ್ನು ಬಳಸಿ ಮತ್ತು 102ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ 21ಮಾದರಿ ವಿದ್ಯುದ್ಮಾನಾ ಮತಯಂತ್ರಗಳನ್ನು ಬಳಸಿಕೊಂಡು ಪ್ರತಿಮತಗಟ್ಟೆಗಳಲ್ಲಿ ವಿದ್ಯುದ್ಮನಾ ಚಾಲಾವಣೆ ಕುರಿತಂತೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕಳ್ಳಲಾಗಿದೆ. ಪ್ರತಿ ಮತಗಟ್ಟೆಗಳಲ್ಲಿ ಒರ್ವ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಸೂಕ್ತ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ ಸಿಸಿಟಿವಿ ಕಣ್ಗಾವಾಲು ಗಳಲ್ಲಿ ಪ್ರತಿಕ್ಷತೆ ನಡೆಸಲಾಗುವುದು. ಪ್ರತಿದಿನ ಮತಗಟ್ಟೆಗಳಲ್ಲಿ ಪ್ರತಿದಿನ ಪ್ರತಿಮತಗಟ್ಟೆಗಳಲ್ಲಿ ಕನಿಷ್ಠ 50 ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.