13 ಬಾರಿ ಅಂಬಾರಿ ಹೊತ್ತ ಬಲರಾಮ ಇನ್ನಿಲ್ಲ

13 ಬಾರಿ ಅಂಬಾರಿ ಹೊತ್ತ ಬಲರಾಮ ಇನ್ನಿಲ್ಲ

ಮೈಸೂರು: ನಾಡಹಬ್ಬ ದಸರಾ ಜಂಬೂ ಸವಾರಿಯಲ್ಲಿ 13 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಹೆಗ್ಗಳಿಕೆಯ ‘ಬಲರಾಮ’ ಆನೆ (67) ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದೆ.

1958ರಲ್ಲಿ ಜನಿಸಿದ ಈ ಆನೆಯು ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ವೇಳೆ, ವಿಶೇಷ ಆಕರ್ಷಣೆಯಾಗಿತ್ತು.
ಕಳೇಬರದ ಅಂತ್ಯಕ್ರಿಯೆಯನ್ನು ಸೋಮವಾರ ಬೆಳಿಗ್ಗೆ 11ರ ಸುಮಾರಿಗೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಭೀಮನಕಟ್ಟೆ ಆನೆ ಶಿಬಿರದಲ್ಲಿರುವ ಕೆಲವು ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ. ಆನೆಯ ಗಂಟಲಿನಲ್ಲಿ ಹುಣ್ಣಾಗಿದ್ದು, ಆಹಾರ ನಿರಾಕರಿಸುತ್ತಿರುವುದರಿಂದ ನಿತ್ರಾಣಗೊಂಡಿದೆ. ಎಂಡೋಸ್ಕೋಪಿ ಮಾಡಿ ರಕ್ತ ಹಾಗೂ ಅಂಗಾಂಗದ ಮಾದರಿಯನ್ನು ಪರೀಕ್ಷೆಗಾಗಿ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ತಜ್ಞ ವೈದ್ಯರಿಂದ ಎಲ್ಲ ರೀತಿಯಿಂದಲೂ ಚಿಕಿತ್ಸೆ ನೀಡಲಾಗಿತ್ತು. ಉತ್ತಮವಾಗಿ ಸ್ಪಂದಿಸುತ್ತಿತ್ತು. ಆದರೆ, ಭಾನುವಾರ ಸಂಜೆ ಮೃತಪಟ್ಟಿದೆ’ ಎಂದು ಹುಣಸೂರು ವಲಯದ ಡಿಸಿಎಫ್‌ ಹರ್ಷಕುಮಾರ್‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!