ಲೋಕಲ್ ಸುದ್ದಿ

ಸಂಶೋಧನಾ ಅಧ್ಯಯನಕ್ಕಾಗಿ ಇಟಲಿ, ಹಂಗೇರಿಗೆ ಪ್ರೊ.ಮಹಾಬಲೇಶ್ವರ

ಸಂಶೋಧನಾ ಅಧ್ಯಯನಕ್ಕಾಗಿ ಇಟಲಿ, ಹಂಗೇರಿಗೆ ಪ್ರೊ.ಮಹಾಬಲೇಶ್ವರ

ದಾವಣಗೆರೆ: ಯುರೋಪಿಯನ್ ರಾಷ್ಟ್ರಗಳಲ್ಲಿ ಯುವ ಸಂಶೋಧಕರಿಗೆ ಮಾರ್ಗದರ್ಶನ ಹಾಗೂ ಸಂಶೋಧನಾ ಕ್ಷೇತ್ರದ ಹೊಸ ಆಯಾಮ ಮತ್ತು ಅವಕಾಶಗಳನ್ನು ಕುರಿತು ಅಧ್ಯಯನ ನಡೆಸುವ ಉದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಯು.ಎಸ್.ಮಹಾಬಲೇಶ್ವರ ಅವರು ಯುರೋಪಿಯನ್ ವಿಶ್ವವಿದ್ಯಾಲಯಗಳಿಗೆ ಮೇ 8ರಂದು (ಭಾನುವಾರ) ತೆರಳುತ್ತಿದ್ದಾರೆ.

ಯುರೋಪಿಯ್ ಕಮಿಷನ್ ಯೂನಿಯನ್‌ನ ಸಂಶೋಧನಾ ವಿನಿಮಯ ಯೋಜನೆಯಡಿ ಆಹ್ವಾನದ ಮೇರೆಗೆ ಪ್ರೊ.ಮಹಾಬಲೇಶ್ವರ ಅವರು ಯುರೋಪ್    ರಾಷ್ಟ್ರಗಳಾದ   ಇಟಲಿಯ ಯುನಿಕ್ಯಾಂಪಿಯನ್ ಹಾಗೂ ಹಂಗೇರಿಯ ವಿಶ್ಕೋಲ್ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಲಿದ್ದಾರೆ. ಈ ವಿಶ್ವವಿದ್ಯಾಲಯಗಳ ಯುವ ಸಂಶೋಧನಾರ್ಥಿಗಳು ಮತ್ತು ಹಿರಿಯ ಪ್ರಾಧ್ಯಾಪಕರ ಜೊತೆಗೆ ಸರಣಿ ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಎರಡೂ ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸ ನೀಡುವರು.

ಸಂಶೋಧನಾ ವಿನಿಮಯದ ಪ್ರಯುಕ್ತ ಇತ್ತೀಚೆಗೆ ಹಂಗೇರಿಯ ವಿಶ್ಕೋಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ತಂಡವು ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ, ಸಂಶೋಧನಾ ವಿದ್ಯಾರ್ಥಿಗಳ ಜೊತೆಗೆ ಚರ್ಚೆ ನಡೆಸಿತ್ತು. ಯುರೋಪಿಯನ್ ವಿಶ್ವವಿದ್ಯಾಲಯಗಳಿಗೆ ಅಧ್ಯಯನಕ್ಕಾಗಿ ತೆರಳುತ್ತಿರುವ ಪ್ರೊ.ಮಹಾಬಲೇಶ್ವರ್ ಅವರನ್ನು ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅವರು ಅಭಿನಂದಿಸಿ, ಬೀಳ್ಕೊಟ್ಟರುಬೀಳ್ಕೊಟ್ಟರು.

Click to comment

Leave a Reply

Your email address will not be published. Required fields are marked *

Most Popular

To Top