ರಾಜ್ಯ ಸುದ್ದಿ

 ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೈವೆಗೆ: ಲಘು ವಾಹನಗಳು ನಿಷೇಧ

 ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೈವೆಗೆ: ಲಘು ವಾಹನಗಳು ನಿಷೇಧ

ಬೆಂಗಳೂರು:  ಕಳೆದ ಮಾರ್ಚ ತಿಂಗಳಲ್ಲಿ ಪ್ರಾಧಾನಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ  ಬೆಂಗಳೂರು ಮೈಸೂರು ಎಕ್ಸಪ್ರೇಸ್ ವೇ  ಲೋಕಾರ್ಪಣೆ ಆಗಿದೆ. ಹೆದ್ದಾರಿ ಲೋಕಾರ್ಪಣೆ ಆದಾಗಿನಿಂದ ಹಲವಾರು ವಿಷಯಗಳಿಂದ ಸುದ್ದಿಯಲ್ಲಿದೆ. ಒಂದು ಕಡೆ ಅಧಿಕ ಶುಲ್ಕ  ಶೇಖರಣೆ ಮತ್ತು ಸರಿಯಾಗಿ ಕಾಮಗಾರಿ ಸರಿಯಾದ ರೀತಿಯಲ್ಲಿ ಆಗಿಲ್ಲ ಬಹಳಷ್ಟು ಲೋಪದೋಷಗಳಿವೆ ಎಂದು ಸುದ್ದಿಯಾಗಿತ್ತು ಆದರೆ ಈಗ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿವೆ ಎಂದು ಸುದ್ದಿಯಾಗಿದೆ.

ದಶಪಥ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತ ತಡೆಯಲು ಹೆದ್ದಾರಿ ಪ್ರಾಧಿಕಾರ ಆಟೋ, ಟ್ರ್ಯಾಕ್ಟರ್​, ಮಲ್ಟಿ ಆಕ್ಸೇಲ್ ಹೈಡ್ರಾಲಿಕ್ ವಾಹನ, ದ್ವಿಚಕ್ರ ಸೇರಿದಂತೆ ಲಘು ವಾಹನಗಳಿಗೆ ನಿಷೇಧ ಹಾಕಿದೆ.ಜುಲೈ 12ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಆದೇಶವನ್ನು ಹೊರಡಿಸಿತ್ತು. ಈಗ ಈ ಆದೇಶವನ್ನು ಶೀಘ್ರವೇ ಕಾರ್ಯರೂಪಕ್ಕೆ ತರಲು ಮುಂದಾಗಿದೆ.ಜುಲೈ 12ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಆದೇಶವನ್ನು ಹೊರಡಿಸಿತ್ತು. ಈಗ ಈ ಆದೇಶವನ್ನು ಶೀಘ್ರವೇ ಕಾರ್ಯರೂಪಕ್ಕೆ ತರಲು ಮುಂದಾಗಿದೆ.

ಬೆಂಗಳೂರು ಮಂಗಳೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗದ ಮಿತಿಯನ್ನು ಗಂಟೆಗೆ 80 ರಿಂದ 100 ಕಿಲೋಮೀಟರ್ ನಿಗದಿಪಡಿಸಲಾಗಿದೆ. ಈ ಹಿನ್ನೆಲೆ ಲಘು ವಾಹನಗಳ ಸಂಚಾರಕ್ಕೆ ನಿರ್ಬಂಧ ಹಾಕಲಾಗ್ತಿದೆ.ಇದುವರೆಗೂ ಈ ಹೆದ್ದಾರಿಯಲ್ಲಿ 570ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ ಎಂದು ವರದಿಯಾಗಿದ್ದು, 100ಕ್ಕೂ ಅಧಿಕ ಜನ ಮೃತರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರೀತಿ ಹೊರಡಿಸಿರುವ ನಿಯಮದಿಂದ ಇನ್ನು ಮುಂದೆ ಅಪಘಾತಗಳು ಸಂಖ್ಯೆ ಕಡಿಮೆಯಾಗಬಹುದಾ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

Click to comment

Leave a Reply

Your email address will not be published. Required fields are marked *

Most Popular

To Top