ಬಿ ಎಸ್ ಮಂಜಣ್ಣ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆ

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ ಗ್ರಾಮದ ವಾಸಿಯಾದ ಬಿಎಸ್ ಮಂಜಣ್ಣ ಬಿನ್ ಶ್ರೀನಿವಾಸ್ ಇವರು ಅಲೆಮಾರಿ (ಪಜಾತಿ) ಬುಡ್ಗಜಂಗಮ್ ಸಮುದಾಯಕ್ಕೆ ಸೇರಿದ್ದು ವೃತ್ತಿ ಯಲ್ಲಿ ಸಂಗೀತ ಕಲಾವಿದರಾಗಿ. ಸಂಘಟಕರಾಗಿ. ಸಮಾಜಮುಖಿ ಹೋರಾಟಗಾರರಾಗಿ ಚಿತ್ರದುರ್ಗ ಜಿಲ್ಲಾ ಅಲೆಮಾರಿ ಬುಡ್ಗಜಂಗಮ್ ಸೇವೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ವರದಿಗಾರರಾಗಿ ಹೀಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೋಡಗಿಸಿಕೊಂಡು ಯಾವ ಪ್ರಚಾರ ವಿಲ್ಲದೆ ಸಮಾಜದ ಹೊಳೆತಿಗಾಗಿ ಹಗಲಿರುಳು ಎನ್ನದೆ ತಮ್ಮ ಜೀವನವನ್ನೇ ಸಮಾಜ ಸೇವೆ ಗಾಗಿ ಮುಡಿಪಾಗಿಟ್ಟರುವ ಆನೇಕ ಪ್ರಶಸ್ತಿ ಪುರಸ್ಕಾರಗಳು ಸಹ ಪಡೆದುಕೊಂಡಿದ್ದಾರೆ.
ಇವರ ಸೇವೆಯನ್ನು ಪರಿಗಣಿಸಿ ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನೆ ಸಮಿತಿಗೆ ಜಿಲ್ಲಾ ನಾಮ ನಿರ್ದೇಶನ ಸದಸ್ಯರಾಗಿ ಚಿತ್ರದುರ್ಗ ಮಾನ್ಯ ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ರವರು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಪತ್ರಿಕೆ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.