ದಾವಣಗೆರೆ ಜಿಲ್ಲೆಯ ಅಡಿಷನಲ್ ಎಸ್ ಪಿ ಯಾಗಿ ರಾಮಗೊಂಡ ಬಸರಿಗಿ ಅಧಿಕಾರ ಸ್ವೀಕಾರ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ರಾಮಗೊಂಡ ಬಸರಗಿ ಕೆ.ಎಸ್.ಪಿ.ಎಸ್ ಅವರು ಇಂದು ಅಧಿಕಾರ ವಹಿಸಿಕೊಂಡರು.
ಮೂಲತಃ ವಿಜಾಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಕೆರೂರು ಗ್ರಾಮದವರಾಗಿದ ಅವರು,1994 ನೇ ಸಾಲಿನಲ್ಲಿ ಪಿಎಸ್ಐ ಆಗಿ ಇಲಾಖೆಗೆ ಅಡಿಯಿಟ್ಟಿದ್ದರು.
ಡಿವೈಎಸ್ಪಿ ಆಗಿ ಸಿಐಡಿ ಬೆಂಗಳೂರು, ಯಾದಗಿರಿ. ಅಥಣಿಯಲ್ಲಿ ಸೇವೆ ಸಲ್ಲಿಸಿದ್ದು, ಡಿವೈಎಸ್ಪಿ ಹುದ್ದೆಯಿಂದ ಪದೋನ್ನತಿ ಹೊಂದಿ ಎಸಿಬಿ ಕೇಂದ್ರ ಕಚೇರಿಯ ಎಸ್ಪಿಯಾಗಿ, ಹುಬ್ಬಳಿ – ಧಾರವಾಡ ಕಮಿಷನರೇಟ್ ನಲ್ಲಿ ಡಿಸಿಪಿ ಕ್ರೈಂ ಮತ್ತು ಟ್ರಾಫಿಕ್ ಆಗಿ ಸೇವೆ ಸಲ್ಲಿಸಿದ್ದರು.
ದಾವಣಗೆರೆ ಜಿಲ್ಲೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಡಿ ಸಿ ಆರ್ ಬಿ ಡಿವೈ ಎಸ್ಪಿ ರವರಾದ ಬಸವರಾಜ್ ಬಿ.ಎಸ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.