ಮಾಜಿ ಶಾಸಕ ಹೆಚ್.ಪಿ. ರಾಜೇಶ್ ತಾಲ್ಲೂಕು ಆಸ್ಪತ್ರೆಗೆ ಭೇಟಿ

ಜಗಳೂರು: ಕೋವಿಡ್ ಸೋಂಕಿತರ ಪ್ರಮಾಣ ಸಂಖ್ಯೆ 30 ಕ್ಕೆ ಏರಿಕೆ ಹಿನ್ನಲೆ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಸಾರ್ವಜನಿಕ ಆಸ್ವತ್ರೆಗೆ ಭೇಟಿ ನೀಡಿ ಅಗತ್ಯ ಸಿದ್ದತೆ ಬಗ್ಗೆ ಆಸ್ವತ್ರೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ಇದೇ ವೇಳೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಮೂಲ ಸೌಲಭ್ಯಗಳು ಹಾಗು ಆಕ್ಸಿಜನ್, ಬೆಡ್, ಹಾಗು ಶುಚಿತ್ವದ ಬಗ್ಗೆ ಪರಿಶೀಲಿಸಿ ವೈದ್ಯರು ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯ ಕುಬೇಂದ್ರಪ್ಪ ಎಸ್ಟಿ ಘಟಕ ಅಧ್ಯಕ್ಷ ಬಿ.ಲೋಕೇಶ್ ಮುಖಂಡರಾದ ಐನಳ್ಳಿ ರಾಜಣ್ಣ, ಮುತ್ತು, ತಿಮ್ಮಣ್ಣ, ಮಹಮದ್ ಖಾಸೀಂ, ಕೆಂಚಮ್ಮ ಧನ್ಯಕುಮಾರ್ ಹಿರಿಯ ಆರೋಗ್ಯ ಸಹಾಯಕಿ ಮೀನಾಕ್ಷಮ್ಮ ಆಕ್ಸಿಜನ್ ನಿಯಂತ್ರಕ ಮಧುಕುಮಾರ್ ಇತರರು ಇದ್ದರು.