ಬೆಳ್ತಂಗಡಿ : ಮಂಗಳೂರಿನಲ್ಲಿ ನಡೆದ ಬಸ್ಸು ಮತ್ತು ಬೈಕ್ ಅಪಘಾತದಲ್ಲಿ ಚಾರ್ಮಾಡಿಯ ಯುವಕ ಮೃತ್ಯು
ಬೆಳ್ತಂಗಡಿ : ಮಂಗಳೂರಿನಲ್ಲಿ ನಡೆದ ಬಸ್ಸು ಮತ್ತು ಬೈಕ್ ಅಪಘಾತದಲ್ಲಿ ಚಾರ್ಮಾಡಿಯ ಯುವಕ ಸಾವನ್ನಪ್ಪಿದ ಘಟನೆ ಮಾ.1 ರಂದು ರಾತ್ರಿ ಮಂಗಳೂರಿನ ಕಂಕನಾಡಿ ಸಮೀಪ ನಡೆದಿದೆ.
ಕಕ್ಕಿಂಜೆ ಸಮೀಪದ ಚಾರ್ಮಾಡಿ ಜಲಾಲಿಯಾ ನಗರದ ನಿವಾಸಿ ಸಿನಾನ್ (21 ವರ್ಷ) ಮೃತಪಟ್ಟ ದುರ್ದೈವಿ.
ಬಡಕುಟುಂಬದ ಸಿನಾನ್ ಪಾರ್ಟ್ ಟೈಮ್ ಪುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು. ತನ್ನ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಅವರು, ವಿದ್ಯಾಭ್ಯಾಸವನ್ನು ತನ್ನ ಖರ್ಚಿನಿಂದಲೇ ನಿಭಾಯಿಸುತ್ತಿದ್ದರು. ಇದೇ ರೀತಿ ನಿನ್ನೆ ರಾತ್ರಿ ವೇಳೆ ಫುಡ್ ಡೆಲಿವರಿ ಮಾಡುತ್ತಿದ್ದಾಗ ವಾಹನ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಖಾಸಗಿ ಬಸ್ಸೊಂದು ಬೈಕನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕಿನ ಹ್ಯಾಂಡ್ಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಬಸ್ಸಿನಡಿಗೆ ಬಿದ್ದು, ದಾರುಣವಾಗಿ ಮೃತಪಟ್ಟಿದ್ದಾರೆ. ಮಂಗಳೂರಿನ ಯೇನಪೋಯ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದರು.
ಮೃತರು ತಂದೆ,ತಾಯಿ, ತಮ್ಮ, ತಂಗಿಯನ್ನು ಅಗಲಿದ್ದಾರೆ.