ವಿಟ್ಲ: ಮನೆ ಶುದ್ಧಿಗಾಗಿ ಬಂದ ಚರ್ಚ್ ಪಾದ್ರಿ ವೃದ್ಧ ದಂಪತಿ ಮೇಲೆ ಹಲ್ಲೆ : ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ವಿಟ್ಲ: ಮನೆಲ ಚರ್ಚ್ ಪ್ರಧಾನ ಧರ್ಮಗುರುವೋರ್ವರು ತಮ್ಮದೇ ಚರ್ಚ್ ವ್ಯಾಪ್ತಿಯ ಹಿರಿಯ ಪ್ರಾಯಸ್ಥ ದಂಪತಿಗೆ ಕಾಲರ್ ಎಳೆದು ಎಳೆದಾಡಿ, ಹೊಡೆದ ಘಟನೆ ಫೆ.29 ರಂದು ನಡೆದಿದೆ.
ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ(79ವ.) ದಂಪತಿ ಮನೆಗೆ ಚರ್ಚ್ ಧರ್ಮಗುರು ಫಾ.ನೆಲ್ಸನ್ ಓಲಿವೆರಾರವರು ಮನೆ ಶುದ್ಧ ಭೇಟಿ ನಿಮಿತ್ತ ತೆರಳಿದ್ದರು. ಈ ಸಂದರ್ಭದಲ್ಲಿ ಧರ್ಮಗುರು ಫಾ.ನೆಲ್ಸನ್ ರವರು ಪ್ರಾಯಸ್ಥ ದಂಪತಿ ಚರ್ಚ್ ಗೆ ಯಾವುದೇ ದೇಣಿಗೆ, ವಂತಿಗೆ ನೀಡದೆ ಸಹಕರಿಸುತ್ತಿಲ್ಲ ಎಂದೆಲ್ಲ ಹೇಳಿ ಆ ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಮಾತ್ರವಲ್ಲ ಕಾಲರ್ ಹಿಡಿದು ಮಾರುದ್ಧ ದೂರ ಎಳೆದುಕೊಂಡು ಹೋಗಿ ಹೊಡೆಯುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ತನ್ನ ತಂದೆ-ತಾಯಿ ಸಮಾನವಾದ ದಂಪತಿಗೆ ಪಾದ್ರಿ ನೆಲ್ಸನ್ ರವರು ತೋರಿದ ಅತಿರೇಕದ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಮಾತ್ರವಲ್ಲ ಮನೆಲ ಚರ್ಚ್ ವ್ಯಾಪ್ತಿಯ ನಿವಾಸಿಗಳು ಕೂಡ ಪಾದ್ರಿಯ ವರ್ತನೆಗೆ ಬೇಸತ್ತುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣವು ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಠಾಣೆಗೆ ಪಾದ್ರಿಗಳ ದಂಡು ಬರತೊಡಗಿದೆ. ಮಕ್ಕಳಿಲ್ಲದಿರುವ ಪ್ರಾಯಸ್ಥ ಆ ದಂಪತಿಯ ಕೂಗನ್ನು ಯಾರು ಕೇಳುತ್ತಿಲ್ಲ, ಅವರ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರು. ಈ ಹಿಂದೆ ತಲಪಾಡಿ, ಸಂಪಿಗೆ ಚರ್ಚ್ ಗಳಲ್ಲೂ ಇದೇ ಪಾದ್ರಿ ಇದೇ ರೀತಿಯ ವರ್ತನೆ ತೋರಿರುತ್ತಾರೆ ಎಂಬುದು ಸ್ಥಳದಲ್ಲಿರುವರು ಮಾತನಾಡಿಕೊಳ್ಳುತ್ತಿದ್ದಾರೆ.
ದೇವರ ಸ್ಥಾನದಲ್ಲಿರುವ ಪಾದ್ರಿಗಳೇ ಈ ರೀತಿಯ ಅತಿರೇಖದ ವರ್ತನೆ ತೋರಿದರೆ ಇನ್ನು ಸಾಮಾನ್ಯ ಜನರ ಗತಿಯೇನು ಎಂಬಂತಾಗಿದೆ ಸ್ಥಿತಿ.