ನಾಳೆಯಿಂದ ದಾವಣಗೆರೆಯಲ್ಲಿ ಬುಕ್ ಶಾಪ್ ಹಾಗೂ ಮೊಬೈಲ್ ಅಂಗಡಿ ಓಪನ್ – ಡಿಸಿ ಮಹಾಂತೇಶ್ ಬೀಳಗಿ
ದಾವಣಗೆರೆ: ಜಿಲ್ಲೆಯಲ್ಲಿ ಅನುಮತಿಸಲಾದ ಚಟುವಟಿಕೆಗಳಲ್ಲಿ ಪುಸ್ತಕ ಮತ್ತು ಸ್ಟೇಷನರಿ ಅಂಗಡಿಗಳು ಹಾಗೂ ಮೊಬೈಲ್ ಅಂಗಡಿಗಳು ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅನುಮತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶಿಸಿದ್ದಾರೆ.
ದಿನಸಿ, ಕಿರಾಣಿ ಅಂಗಡಿಗಳು, ಡೈರಿ, ಪಶು ಆಹಾರ ಅಂಗಡಿ, ಹಣ್ಣು-ತರಕಾರಿ, ಗ್ಲಾಸ್, ಪ್ಲೈವುಡ್, ಸಿಮೆಂಟ್, ಕಬ್ಬಿಣ, ಹಾರ್ಡ್ ವೇರ್, ಕನ್ನಡಕದ ಅಂಗಡಿ ಸೇರಿದಂತೆ ಮತ್ತಿತರ ವ್ಯಾಪಾರ ಚಟುವಟಿಕೆಗೆ ಜೂ.21 ರಿಂದ ಜು.5 ರವರೆಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ತೆರೆಯಲು ಸರ್ಕಾರ ಆದೇಶಿಸಿತ್ತು. ಅದರಂತೆ ಪುಸ್ತಕ ಮತ್ತು ಸ್ಟೇಷನರಿ ಅಂಗಡಿಗಳು ಹಾಗೂ ಮೊಬೈಲ್ ಅಂಗಡಿಗಳು ತೆರೆಯಲು ಅವಕಾಶ ನೀಡಿರುವುದಾಗಿ ಅವರು ಹೇಳಿದ್ದಾರೆ.
ಕರೋನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರ್ಕಾರದ ಆದೇಶದ ಅನ್ವಯ ಜು.5 ರವರೆಗೆ ಕೈಗಾರಿಕಾ ಚಟುವಟಿಕೆಗಳಿಗೆ ವಿಧಿಸಿರುವ ನಿಬಂಧನೆಯಾಗಿರುವ ರಾತ್ರಿ ಕರ್ಪ್ಯೂ ಮತ್ತು ವಾರಂತ್ಯದ ಕರ್ಪ್ಯೂ ಅವಧಿಯಲ್ಲಿಯು ಈ ಚಟುವಟಿಕೆಗೆ ಅನ್ವಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.