ಫೋಟೋಗ್ರಾಫರ್ ಯೂತ್ ವೆಲ್ಫೇರ್ ಅಸೋಸಿಯೇಶನ್ ನಿಂದ ಸ್ಟೂಡಿಯೋ ಪ್ರಾರಂಭಕ್ಕೆ ಅನುಮತಿಗಾಗಿ ಡಿಸಿಗೆ ಮನವಿ 

ದಾವಣಗೆರೆ; ಫೋಟೊ ಸ್ಟುಡಿಯೋ ಪ್ರಾರಂಭಕ್ಕೆ ಅನುಮತಿ ನೀಡಬೇಕೆಂದು ಫೋಟೋಗ್ರಾಫರ್ ಯೂತ್ ವೆಲ್ಫೇರ್ ಅಸೋಸಿಯೇಷನ್ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.  ಕೊರೋನಾದಿಂದಾಗಿ ಈಗ ಸುಮಾರು ಎರಡು ತಿಂಗಳಿಂದ ಕೆಲಸವಿಲ್ಲದೇ ಛಾಯಾಗ್ರಾಹಕರು
ದಿನ ದೂಡುವುದು  ಕಠಿಣವಾಗಿದೆ . ಸ್ಟುಡಿಯೋಗಳಲ್ಲಿ ನಮ್ಮ ಪ್ರಿಂಟರ್ ಕ್ಯಾಮರಾ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಲಿವೆ . ಸ್ಟುಡಿಯೋದಲ್ಲಿ ಆಗಲಿ ಹೊರಗಡೆ ಆಗಲಿ ನಾವುಗಳು ಎರಡು ಮೀಟರ್ ದೂರದಿಂದಲೇ ಫೋಟೋ ತೆಗೆಯುತ್ತೇವೆ, ನಾವುಗಳು ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ . ದಯಮಾಡಿ ಸ್ಟುಡಿಯೋ ಬಾಗಿಲು ತೆರೆಯಲು ಅನುಮತಿ ನೀಡಬೇಕೆಂದು ಮನವಿ ಮಾಡಿದರು. ಈ ವೇಳೆ   ಸಂಘದ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!