Boots Slap: ಬೂಟ್ಸ್ ಏಟು ದಿನವನ್ನು, ಜನ್ಮದಿನವಾಗಿ ಆಚರಿಸಿದ ವಾಟಾಳ್ ನಾಗರಾಜ್
ರಾಮನಗರ: ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆಗೆ ಹೆಸರಾದವರು, ಅದೇ ರೀತಿಯಾಗಿ ಬೆಂಗಳೂರು ಗ್ರಾಮಂತರ ಜಿಲ್ಲೆ ರಾಮನಗರದಲ್ಲಿ ಈ ದಿನ ವಿಶೇಷವಾಗಿ ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿದರು.
‘ಬೂಟ್ಸ್ ಏಟು’ ಇದೊಂದು ಐತಿಹಾಸಿಕ ಇದೊಂದು ವಿಶೇಷ ಮತ್ತು ವಿನೂತನವಾಗಿ ತಮ್ಮ ಜನ್ಮ ದಿನಾಚರಣೆಯನ್ನು ಕಡಲೆ ಕಾಯಿ ಹಂಚ್ಚುವುದರ ಮೂಲಕ ಆಚರಿಸಿದರು.
ಈ ಕಾರ್ಯಕ್ರಮವು ರಾಮನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳು ನೆಡೆಯಿತು. 1962 ನೇ ಸಪ್ಟೆಂಬರ್ 7 ರಂದು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಅಲಂಕಾರ್ ಚಿತ್ರಮಂದಿರಕ್ಕೆ ನುಗ್ಗಿ
‘ಹಿಂದಿ ಚಿತ್ರಬೇಡಾ ಕನ್ನಡ ಚಿತ್ರ ಬೇಕು’ ಎನ್ನುವ ಹೋರಾಟದಲ್ಲಿ ಪೊಲೀಸರು ಬೂಟ್ಸ್ ಏಟು ಹೊಡೆದ ದಿನವನ್ನು ತಮ್ಮ ಜನ್ಮದಿನವನ್ನು ಆಚರಿಸುತ್ತಾರೆ.
ಈ ಸಂದರ್ಭದಲ್ಲಿ ಜೈ ಕರುನಾಡ ವೇದಿಕೆ ಸಂಸ್ಥಾಪಕರು ರಂಗನಾಥ್ ರಾಜ್ಯಾಧ್ಯಕ್ಷರು ಎಂ ಸತೀಶ್ ಕನ್ನಡಿಗ ಹಾಗೂ ರಾಜಾಧ್ಯಕ್ಷರು ಜಯಶ್ರೀ ಟಿ ಮಂಜುನಾಥ್ ಗೌಡ ದಾವಣಗೆರೆ ಜಿಲ್ಲಾ ಅಧ್ಯಕ್ಷರು ಕೃಷ್ಣಮೂರ್ತಿ ಮೈಸೂರು ಜಿಲ್ಲಾ ನಾಗರಾಜ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿದಾನಂದಪ್ಪ ರಾಯಚೂರು ಜಿಲ್ಲಾಧ್ಯಕ್ಷರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು