Bus Accident: ಹೊನ್ನಾಳಿಯಲ್ಲಿ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ.! ಹಲವರಿಗೆ ಗಾಯ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು
![IMG-20211224-WA0040](https://garudavoice.com/wp-content/uploads/2021/12/IMG-20211224-WA0040.jpg)
ದಾವಣಗೆರೆ (ನ್ಯಾಮತಿ): ಖಾಸಗಿ ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಪೆಟ್ಟು ಬಿದ್ದು ಖಾಯವಾಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ನ್ಯಾಮತಿ ತಾಲೂಕಿನ ಸುರಹೊನ್ನೆ ಮತ್ತು ಸಾಲುಬಾಲು ಗ್ರಾಮಗಳ ಮಧ್ಯೆ ಇರುವ ಉಪ್ಪಿನಹಳ್ಳದ ಹತ್ತಿರದ ತಿರುವಿನಲ್ಲಿ ನಡೆದಿದೆ.
ಶುಕ್ರವಾರ ಬೆಳಿಗ್ಗೆ ೯ ಗಂಟೆಗೆ ನ್ಯಾಮತಿ ನಿಲ್ದಾಣದಿಂದ ಶಿವಮೊಗ್ಗ ಕಡೆಗೆ ಹೊರಟಿದ್ದ ಗುರುರಾಜ್ ಬಸ್ಸು ಬೆಳಿಗ್ಗೆ ೯.೧೫ ರ ಸಮಯದಲ್ಲಿ ಎರಡು ಬಸ್ಸಿನ ಚಾಲಕರ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆೆ ಯಿಂದ ಹಾಗೂ ಬಸ್ಸುಗಳ ಮುಂದೆ ಹೋಗುತ್ತಿದ್ದ ವಾಹನಗಳನ್ನು ಓವರ್ ಟೇಕ್ ಮಾಡುವ ಭರದಲ್ಲಿ ಶಿವಮೊಗ್ಗದಿಂದ ಹೊನ್ನಾಳಿಯ ಕಡೆಗೆ ಬರುತ್ತಿದ್ದ ವೆಂಕಟೇಶ್ವರ ಬಸ್ಸಿನ ಚಾಲಕ ಗುರುರಾಜ ಬಸ್ಸಿಗೆ ಮಧ್ಯಭಾಗಕ್ಕೆ ಡಿಕ್ಕಿ ಹೊಡೆದು ರಸ್ತೆಯ ಪಕ್ಕದಲ್ಲಿ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕೆ್ಕಿ ಯಾಗಿದ್ದ ರದ ಲೈಟ್ ಕಂಭ ಕಿತ್ತುಕೊಂಡು ಹೋಗಿರುತ್ತದೆ.
ಗುರುರಾಜ ಬಸ್ಸಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ನ್ಯಾಮತಿ ಪಟ್ಟಣದ ನಿವಾಸಿಗಳಾದ ಜಯಶೀಲಾ , ಸವಿತ.ಎಸ್. . ಆಶಾ , ಲತಾ , ಕವಿತಾ , ಆನಂದ , ವೀರಭದ್ರಪ್ಪ , ಮಂಜುನಾಥ , ಸುರಹೊನ್ನೆಯ ವಿಶ್ವನಾಥಾಚಾರ್ , ದಾನಿಹಳ್ಳಿಯ ರಾಜೇಂದ್ರಪ್ಪ ಇವರುಗಳು ಕಣ್ಣಿನ ಭಾಗಕ್ಕೆ ಹಾಗೂ ಮೈಕೈಗೆ ಬಲವಾದ ಪೆಟ್ಟು ಬಿದ್ದು ತೀವ್ರವಾಾಗಿ ಗಾಯಗೊಂಡು ನ್ಯಾಮತಿ ಪಟ್ಟಣದ ಸರಕಾರಿ ಸಮುದಾಯ ಅಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಸರಕಾರಿ ಸಮುದಾಯ ಅಸ್ಪತ್ರೆಯ ವೈದ್ಯಾಧಿಕಾರಿ ಡಾ.ರೇಣುಕಾನಂದ ಎಂ.ಮೆಣಸಿನಕಾಯಿ ತಿಳಿಸಿದರು.
ಈ ಬಗ್ಗೆ ಗುರುರಾಜ ಬಸ್ಸಿನಲ್ಲಿದ್ದು ಗಾಯಗೊಂಡಿರುವ ನ್ಯಾಮತಿಯ ಆನಂದವೆಂಕಟಸ್ವಾಮಿ ನ್ಯಾಮತಿ ಠಾಣೆಗೆ ದೂರು ನೀಡಿ ಅಪಘಾತಕ್ಕೆ ಕಾರಣವಾಗಿರುುವ ಎರಡು ಬಸ್ಸುಗಳ ಚಾಲಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ನ್ಯಾಮತಿ ತಾಲೂಕಿನ ಸುರಹೊನ್ನೆ ಮತ್ತು ಸಾಲುಬಾಲು ಗ್ರಾಮಗಳ ಮಧ್ಯೆ ಇರುವ ಉಪ್ಪಿನಹಳ್ಳದ ಹತ್ತಿರದ ತಿರುವಿನಲ್ಲಿ ಅಪಘಾತಗೊಂಡು ಅಸ್ಪತ್ರೆಗೆ ದಾಖಲಾಗಿರುವ ಜನರನ್ನು ನೋಡಲು ಅಸ್ಪತ್ರೆ ಅವರಣದಲ್ಲಿ ಸಾರ್ವಜನಿಕರು ಜಮಾಯಿಸಿದ್ದರು.