ಅಪರಾಧದಾವಣಗೆರೆ

Canara Bank: ಕೆನರಾ ಬ್ಯಾಂಕ್‌ಗೆ 4.15 ಲಕ್ಷ ರೂ. ದಂಡ ವಿಧಿಸಿದ ದಾವಣಗೆರೆ ಜಿಲ್ಲಾ ಗ್ರಾಹಕರ ಆಯೋಗ

Share
Share

ದಾವಣಗೆರೆ: (Canara Bank) ಗೃಹ ಸಾಲದ ಮೂಲ ದಾಖಲೆಗಳನ್ನು ಹಿಂತಿರುಗಿಸುವಲ್ಲಿ ನಿರ್ಲಕ್ಷ್ಯ ತೋರಿದ ಕೆನರಾ ಬ್ಯಾಂಕ್‌ಗೆ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಒಟ್ಟು 4,15,000 ರೂ.ಗಳ ಪರಿಹಾರ ಪಾವತಿಸುವಂತೆ ಮಹತ್ವದ ಆದೇಶ ನೀಡಿದೆ.

ನಗರದ ಶ್ರೀಮತಿ ಮಂಜುಳಾ ಕೆ.ಬಿ. ಅವರು ಕೆನರಾ ಬ್ಯಾಂಕ್‌ನಲ್ಲಿ ತಮ್ಮ ಮನೆಯ ಮೂಲ ದಾಖಲೆಗಳನ್ನು ಅಡಮಾನವಿಟ್ಟು 21,50,000 ರೂ.ಗಳ ಗೃಹ ಸಾಲ ಪಡೆದಿದ್ದರು. 2024 ರ ಸೆಪ್ಟೆಂಬರ್‌ 11 ರಂದು ಅವರು ಸಾಲದ ಸಂಪೂರ್ಣ ಮೊತ್ತವನ್ನು ಮರುಪಾವತಿಸಿ, ಸಾಲದ ಖಾತೆಯನ್ನು ರದ್ದುಗೊಳಿಸಿರುತ್ತಾರೆ.  ಸಾಲ ತೀರಿಸಿದ ನಂತರ ತಮ್ಮ ಮೂಲ  ದಾಖಲೆಗಳನ್ನು ಹಿಂಪಡೆಯಲು ಬ್ಯಾಂಕ್‌ಗೆ ಮನವಿ ಸಲ್ಲಿಸಿದಾಗ, ಬ್ಯಾಂಕ್ ಅಧಿಕಾರಿಗಳು ಸದರಿ ದಾಖಲೆಗಳು ಕಳೆದುಹೋಗಿವೆ ಎಂದು ತಿಳಿಸಿ ಕೇವಲ ದೃಢೀಕೃತ ಪ್ರತಿಗಳನ್ನು ನೀಡುವುದಾಗಿ ಹೇಳಿದ್ದರು.

ಬ್ಯಾಂಕ್‌ನ ಈ ಬೇಜವಾಬ್ದಾರಿತನದಿಂದ ನೊಂದ ಗ್ರಾಹಕರು, ಅಸಲು ದಾಖಲೆಗಳಿಲ್ಲದೆ ಭವಿಷ್ಯದಲ್ಲಿ ಆಸ್ತಿಯ ಮೌಲ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಜಿಲ್ಲಾ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷರಾದ ಕುಮಾರಿ ಹೆಚ್.ಎನ್ಮೀನಾ ಹಾಗೂ ಸದಸ್ಯರಾದ ಶ್ರೀ ತ್ಯಾಗರಾಜನ್ ಸಿ.ಎಸ್. ಅವರನ್ನೊಳಗೊಂಡ ಪೀಠವು ಬ್ಯಾಂಕ್‌ನ ಸೇವೆಯಲ್ಲಿ ಗಂಭೀರ ಲೋಪವಿರುವುದನ್ನು ಎತ್ತಿ ಹಿಡಿದಿದೆ. ಆಯೋಗವು ಏಪ್ರಿಲ್‌ 21 ರಂದು ಕಳೆದುಹೋದ ಅಸಲು ದಾಖಲೆಗಳ ಬದಲಾಗಿ ದೂರುದಾರರಿಗೆ 4,00,000 ರೂ.ಗಳನ್ನು ವಾರ್ಷಿಕ ಶೇ. 8 ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕು.

ದೂರುದಾರರಿಗೆ ಉಂಟಾದ ಮಾನಸಿಕ ಯಾತನೆ ಹಾಗೂ ದೂರಿನ ವೆಚ್ಚಕ್ಕಾಗಿ ಹೆಚ್ಚುವರಿ 15,000 ರೂ.ಗಳನ್ನು ನೀಡಬೇಕು. ಮತ್ತು ಆದೇಶ ಹೊರಬಂದ ಒಂದು ತಿಂಗಳ ಒಳಗಾಗಿ ಈ ಒಟ್ಟು ಮೊತ್ತವನ್ನು ದೂರುದಾರರಿಗೆ ಪಾವತಿಸಲು ಬ್ಯಾಂಕ್‌ಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್‌ ಹಾಗೂ ಸಹಾಯಕ ಆಡಳಿತಾಧಿಕಾರಿ ಪದ್ಮ ಪಿ.ಎಸ್‌ ರವರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ದಾವಣಗೆರೆ

Trust: ಹರಿಹರ ಪಂಚಮಸಾಲಿ ಪೀಠದಲ್ಲಿ ಕಿಚ್ಚು: ಲೆಕ್ಕ ಕೊಟ್ಟು ಮಠಕ್ಕೆ ಕಾಲಿಡಿ ಎಂದು ಟ್ರಸ್ಟಿಗಳಿಗೆ ಹೆಚ್ ಎಸ್ ಶಿವಶಂಕರ್ ಎಚ್ಚರಿಕೆ!

ದಾವಣಗೆರೆ:(Trust)" ಮಠದ ಆಸ್ತಿ ಮತ್ತು ಹಣಕ್ಕೆ ಲೆಕ್ಕ ಕೇಳುವ ಹಕ್ಕು ಸಮಾಜದ ಪ್ರತಿಯೊಬ್ಬರಿಗೂ ಇದೆ. ಲೆಕ್ಕ ಕೊಡದ ಟ್ರಸ್ಟಿಗಳಿಗೆ ಮಠದೊಳಗೆ ಪ್ರವೇಶವಿಲ್ಲ" ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಗುಡುಗಿದ್ದಾರೆ. ಹರಿಹರದ...

ದಾವಣಗೆರೆ

​Panchamasali: ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ ನಡುವೆಯೂ ವಚನಾನಂದ ಶ್ರೀಗಳಿಂದ ಶಕ್ತಿ ಪ್ರದರ್ಶನ

​ದಾವಣಗೆರೆ: (Panchamasali) ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯಿರುವ ಪಂಚಮಸಾಲಿ ಮಠದಲ್ಲಿ ಬಸವ ಜಯಂತಿ ಆಚರಣೆ ಜೋರಾಗಿ ನಡೆಯುತ್ತಿದ್ದು, ಮಠದ ಒಳಗಿನ ಸಂಘರ್ಷ ಈಗ ಬೀದಿಗೆ ಬಂದಿದೆ. ಟ್ರಸ್ಟ್‌ನ ಎಚ್ಚರಿಕೆ...

Related Articles
ದಾವಣಗೆರೆ

Students: ಇಂಗ್ಲೆಂಡ್ ಪ್ರವಾಸ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ದಾವಣಗೆರೆ:(Students) ಇಂಗ್ಲೆಂಡನ ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ನಾತಕ ಪದವಿಯ ಪ್ರತಿಭಾನ್ವಿತರು (ಸ್ಕೌಟ್-೦೨) ಅಂತರರಾಷ್ಟಿçಯ ಶೈಕ್ಷಣಿಕ...

ಅಪರಾಧದಾವಣಗೆರೆರಾಜ್ಯ / ಕರ್ನಾಟಕ

PSI: ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪಾನಮತ್ತ ಮಹಿಳೆ.!

ದಾವಣಗೆರೆ: (PSI) ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಪಾನಮತ್ತ ಮಹಿಳೆಯೊಬ್ಬಳು ಹಲ್ಲೆ ನಡೆಸಿ, ಅಸಭ್ಯವಾಗಿ...

ಅಪರಾಧದಾವಣಗೆರೆದೇಶರಾಜ್ಯ / ಕರ್ನಾಟಕ

Pocso: ವಚನಾನಂದ ಸ್ವಾಮಿ ಪೋಕ್ಸೊ ಪ್ರಕರಣ: ಹೈಕೋರ್ಟ್ ನಲ್ಲಿ ಪ್ರಕರಣ; ಜೂನ್ 30ಕ್ಕೆ ಆದೇಶ ಮುಂದೂಡಿಕೆ

​ದಾವಣಗೆರೆ: ದಾವಣಗೆರೆ ಸ್ಥಳೀಯ ಪೋಕ್ಸೊ (POCSO) ನ್ಯಾಯಾಲಯದಲ್ಲಿ ಇಂದು ನಿಗದಿಯಾಗಿದ್ದ  ವಚನಾನಂದ ಸ್ವಾಮಿ ಅವರ ಜಾಮೀನು ರದ್ದು...