ಚಾರ್ಲಿ ಫೌಂಡೇಶನ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ; ಸಯೀದ್ ಚಾರ್ಲಿ
ದಾವಣಗೆರೆ: ಚಾರ್ಲಿ ಎಜುಕೇಷನ್ ಅಂಡ್ ವೆಲ್ಫೇರ್ ಫೌಂಡೇಶನ್‌ನಿಂದ ಸ್ವಾಮಿ ವಿವೇಕಾನಂದ ಬ್ಲಡ್ ಸೆಂಟರ್ ಹಾಗೂ ಪಾರ್ವತ ಲೈಫ್ಸ್ ಕೇರ್ ಇವರ ಜಂಟಿ ಆಶ್ರಯದಲ್ಲಿ ಈಚೆಗೆ ನರಸರಾಜಪೇಟೆಯ ಸರಕಾರಿ ಉರ್ದು ಶಾಲೆಯಲ್ಲಿ ಸಾರ್ವಜನಿಕರಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು.
ಶಿಬಿರದಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಜನರು ಕಣ್ಣು ಮತ್ತು ಕಿವಿ ಪರೀಕ್ಷೆ, ಬಿ.ಪಿ, ಷುಗರ್ ಹಾಗೂ ರಕ್ತದಾನ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. ಇದೇ ವೇಳೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆಯನ್ನು ನೀಡಿದ ವೈದ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಹಾಗೂ ಚಾರ್ಲಿ ಫೌಂಡೇಷನ್ ಅಧ್ಯಕ್ಷ ಸಯೀದ್ ಚಾರ್ಲಿ, ಶೇಕ್ ಅಹ್ಮದ್, ಬಿ.ಪಿ.ಎಸ್, ಶಫೀಸ್, ರಷೀದ್ ಸಾಬ್, ಇಮ್ರಾನ್, ಶಾಲೆಯ ಶಿಕ್ಷಕರಾದ ರುದ್ರಮ್ಮ, ಫೌಂಡೇಷನ್‌ನ ಕಾರ್ಯದರ್ಶಿ ವಸೀಂ, ವಕ್ಫ್ ಬೋರ್ಡ್ ಮಾಜಿ ಛೇರ‍್ಮನ್ ಸಿರಾಜ್, ನರೇಂದ್ರ, ಅಜೀತ್, ಜಿಲಾನ್, ಯಾಸೀನ್ ಉಪಸ್ಥಿತರಿದ್ದರು.