ಅಡುಗೆ ಮನೆಗೆ ಮಹಿಳೆ ಸೀಮಿತವಾಗಿದ್ದ  ಆ ದಿನಗಳು ಬದಲಾಗಿವೆ: ಜಡ್ಜ್ ಪ್ರವೀಣ್ ನಾಯಕ್

ದಾವಣಗೆರೆ:  ಮಹಿಳೆಯರೆಂದರೆ ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದ ಆ ದಿನಗಳು ಹೊರಟು ಹೋಗಿದ್ದು ಇದೀಗ ಹೊಸ ಸಮಾಜ ನಿರ್ಮಾಣವಾಗಿದೆ. ಇದೆಲ್ಲದ್ದಕ್ಕೂ ಶಿಕ್ಷಣ ಮತ್ತು ಕಾನೂನಿನ ಅರಿವೇ ಕಾರಣ ಎಂದು ಹಿರಿಯ ಸಿವಿಲ್ ನ್ಯಾಯಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ  ಹೇಳಿದರು.

ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಾವಣಗೆರೆ ಹಾಗೂ ಅಕ್ಷನ್ ಇನಿಷೇಟಿವ್ ಫಾರ್ ಡೆವೆಲಫ್ಮೆಂಟ್ (ಎ.ಐ.ಡಿ) ಸಂಸ್ಥೆ ಇವರ ವತಿಯಿಂದ 2ದಿನಗಳ ಕಾಲ ನಗರದ ವನಿತಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಯುವಕರಿಗೆ ಲಿಂಗ ಸಮಾನತೆ ಕುರಿತು ಸಾಮಥ್ರ್ಯ ನಿರ್ಮಾಣ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ದೈಹಿಕವಾಗಿ ಸಬಲರಾಗದೆ ಇದ್ದರೂ ಸಹ ಇನ್ನುಳಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಬಲರಾಗಿದ್ದಾರೆ ಅವರಲ್ಲಿನ ವಿಚಾರಶಕ್ತಿಗೆ ಬೆಳವಣಿಗೆ ಹೆಚ್ಚಾಗಿದ್ದ ಕಾರಣ, ಸಾಮಾಜಿಕ ಪಿಡುಗುಗಳಿಗೆ ಅಂಟಿಕೊಂಡಿರುವ ಕಾರಣ ಮಹಿಳೆಯರು ಕೆಲ ಕ್ಷೇತ್ರಗಳಲ್ಲಿ ಸಬಲರಾಗಲು ಸಾಧ್ಯ ವಾಗಿಲ್ಲ ಮಹಿಳೆಯರು ಬಲ ಬಲಿಷ್ಟರಾದರೆ ಮಾತ್ರ ಅವರ ಮೇಲಿನ ದೌರ್ಜನ್ಯ ತಡೆಗಟ್ಟಲು ಸಾಧ್ಯ ಇದಕ್ಕೆ ಶಿಕ್ಷಣ ಮತ್ತು ಕಾನೂನಿನ ಅರಿವು ಅತೀ ಮುಖ್ಯವಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅದರಲ್ಲೂ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ನಾವು ಬಂಧಿಖಾನೆಗಳಿಗೆ ಭೇಟಿ ನೀಡಿದಾಗ ಅಲ್ಲಿ ಶೇಕಡಾ ಎಂಬತ್ತು ರಷ್ಟು ಕೈದಿಗಳು ಪೋಸ್ಕೋ ಕಾಯ್ದೆಯಡಿ ಬಂಧಿತರಾಗಿ ಬಂದಿರುತ್ತಾರೆ ಇನ್ನುಳಿದ ಶೇಕಡಾ ಇಪ್ಪತ್ತು ರಷ್ಟು ಕೈದಿಗಳು ಬೇರೆಬೇರೆ ಕೇಸುಗಳಲ್ಲಿ ಬಂದವರಾಗಿರುತ್ತಾರೆ. ಮಹಿಳೆಯರನ್ನು ಅಥವಾ ಹೆಣ್ಣುಮಕ್ಕಳನ್ನು ಸಬಲರನ್ನಾಗಿ ಮಾಡಲು ಪೋಷಕರ ಪಾತ್ರ ಅತಿ ಮುಖ್ಯವಾಗಿದ್ದು ಅವರ ತಿಳುವಳಿಕೆಯೇ ಇದಕ್ಕೆಲ್ಲಾ ಕಾರಣ. ಸಾಮಾಜಿಕವಾಗಿ ಅವರನ್ನು ಬೆರೆಯಲು ಬಿಡದೆ ನಿರ್ಬಂಧಗಳನ್ನು ಹೇರಿ ಅವರನ್ನು ಬೆಳೆಸುತ್ತಾರೆ ಇದರಿಂದಾಗಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಇದಲ್ಲದೆ ಕಾನೂನಿನಲ್ಲಿ ಇತ್ತೀಚೆಗೆ ಮಹತ್ತರವಾದ ಬದಲಾವಣೆಗಳು ಆಗಿದ್ದು ಕಾನೂನಿನ ಅರಿವನ್ನು ಎಲ್ಲರೂ ಪಡೆಯಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್ ಕುಮಾರ್ ಮಾತನಾಡಿ ಮಹಿಳೆಯರಿಗೆ ಸಾಮಾಜಿಕ ರಾಜಕೀಯ ಮತ್ತು ಆರ್ಥಿಕವಾಗಿ ಸಮಾನತೆ ಬಂದಾಗ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯವಾಗುತ್ತದೆ ಇದಕ್ಕೆ ಸರ್ಕಾರ ಮತ್ತು ನ್ಯಾಯಾಂಗಗಳು ಜತೆಗೂಡಿ ಕೆಲಸ ಮಾಡಬೇಕಾಗಿದೆ ಅಲ್ಲದೆ ಪುರುಷ ಪುರುಷರ ನೋಡುವ ದೃಷ್ಟಿಕೋನವೂ ಬದಲಾಗಬೇಕಾಗಿದೆ.
21ಶತಮಾನ ಮುಗಿಸಿ ಇಪ್ಪತ್ತೆರಡನೆ ಶತಮಾನಕ್ಕೆ ಕಾಲಿಡುತ್ತಿರುವ ನಾವು ಇಂದಿಗೂ ಲಿಂಗ ಸಮಾನತೆಯನ್ನು ಎದುರಿಸುತ್ತಿದ್ದೇವೆ ಎಂದರೆ ಅದೊಂದು ಜ್ವಲಂತ ಸಮಸ್ಯೆ ಎಂದು ಮನಗಾಣಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಎಲ್ಲಾ ಹಂತದ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಅಸಮಾನತೆ ಮತ್ತು ಅಭದ್ರತೆ ಕಾಡುತ್ತಿದೆ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡುವಂತಹ ಪರಿಸ್ಥಿತಿ ಎದುರಾಗಿದೆ ವರ್ಷದಿಂದ ವರ್ಷಕ್ಕೆ ಮಹಿಳೆಯರ ಸಂಖ್ಯೆ ಕ್ಷೀಣವಾಗುತ್ತಿದ್ದು ಈ ಬಗ್ಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಚಿಂತನೆ ಮಾಡಬೇಕಾಗಿದೆ. ಲಿಂಗ ಸಮಾನತೆ ಸಮಾನತೆ ಬಂದಾಗ ಮಾತ್ರ ಸಶಕ್ತ ಸಮಾಜ ನಿರ್ಮಾಣ ಸಾಧ್ಯ ಎಂದರು.

ತಂತ್ರಜ್ಞಾನ ಇಷ್ಟೆಲ್ಲ ಮುಂದುವರಿದಿದ್ದರೂ ಸಹ ಈಗಲೂ ನಿರೀಕ್ಷಿತ ಮಟ್ಟದಲ್ಲಿ ಲಿಂಗ ಸಮಾನತೆ ಬಂದಿಲ್ಲ ಇದಕ್ಕೆಲ್ಲಾ ನಮ್ಮಲ್ಲಿನ ಹಸಿವು ಬಡತನವೇ ಕಾರಣ. ಇದಕ್ಕೆ ರಾಜಕಾರಣಿಗಳು ಮತ್ತು ಪ್ರಜಾ ಪ್ರಭುತ್ವ ಕೂಡಾ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಲ್ಲಾ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿರುವ ಮಹಿಳೆಯರು ರಾಜಕೀಯ ಸಾಮಾಜಿಕ ಆರ್ಥಿಕವಾಗಿ ಸಬಲೀಕರಣ ಆಗುತ್ತಿಲ್ಲ ಈ 3ಕ್ಷೇತ್ರಗಳಲ್ಲಿ ಸಬಲಗೊಂಡಾಗ ಮಾತ್ರ ಸಮಾಜ ಉದ್ಧಾರ ಹಾಗೂ ಮಹಿಳಾ ಸಬಲೀಕರಣ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಂಗಳೂರಿನ ವಿಸ್ತಾರ್ ಸಂಸ್ಥೆಯ ಸಹಾಯಕ ನಿರ್ದೇಶಕಿ ವಿ.ಆಶಾ, ಎಐಡಿ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್.ಬಾಬಣ್ಣ ಇದ್ದರು.

Leave a Reply

Your email address will not be published. Required fields are marked *

error: Content is protected !!