Chitta RainFall Heavy Clouds : ಚಿತ್ತಾ ಮಳೆಗೆ ಚಿತ್ತಾದ ದಾವಣಗೆರೆಯ ಜನತೆ.! ಭಾರಿ ಗುಡುಗು ಸಿಡಿಲಿನಿಂದ ಅರ್ಭಟಿಸುತ್ತಿರುವ ವರುಣ

ದಾವಣಗೆರೆ: ದಾವಣಗೆರೆಯಲ್ಲಿ ಸಂಜೆಯಿಂದ ಗುಡುಗು ಸಿಡಿಲು ಸಹಿತ ನಿರಂತರವಾಗಿ ವರುಣ ಆರ್ಭಟ ಮಾಡುತ್ತಿರುವ ಕಾರಣ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಳೆದ ಒಂದೂವರೆ ಗಂಟೆಗೂ ಅಧಿಕ‌ ಸಮಯದಿಂದ ಸತತವಾಗಿ ಸರಿಯುತ್ತಿರುವ ಭಾರೀ ಮಳೆಯಿಂದಾಗಿ ರಸ್ತೆಯ ಮೇಲೆ ನೀರು ಪ್ರವಾಹದಂತೆ ಹರಿಯುತ್ತಿದೆ.

ನಗರದಲ್ಲಿ ಗುಡುಗು ಸಹಿತ ಸುರಿಯುತ್ತಿರುವ ಭಾರೀ ಮಳೆ, ಗಾಳಿಗೆ ಜನರು ಕಂಗಾಲಾಗಿದ್ದರು, ಸಂಜೆಯ ಸಮಯವಾಗಿದ್ದರಿಂದ ಕೆಲಸ ಮುಗಿಸಿಕೊಂಡು ಕಚೇರಿಯಿಂದ ಹೊರಡುವವರಿಗೆ ಇದ್ದಕ್ಕಿದ್ದಂತೆ ಸುರಿಯುತ್ತಿರುವ ಮಳೆಯು ತಡೆಗೋಡೆ ಹಾಕಿತ್ತು.

ಆರ್ಭಟದಿಂದಲೇ ಮಳೆ ಆರಂಭವಾಗಿದ್ದ ಹಿನ್ನೆಲೆಯಲ್ಲಿ ಚರಂಡಿ, ಮೋರಿಗಳು ತುಂಬಿ ಹರಿದ ಕಾರಣ ಕೆಲ‌ ಮನೆಗಳಿಗೆ ನೀರು ನುಗ್ಗಿತ್ತು. ಮನೆಗೆ ನೀರು ನುಗ್ಗಿರುವುದನ್ನು ತೆಗೆಯಲು ಹರಸಾಹಸ ಪಡುತ್ತಿದ್ದರು.

ಸ್ಮಾರ್ಟ್ ಸಿಟಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿರುವ ಕಾರಣ ಅಲ್ಲಲ್ಲಿ ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ತೆಗೆದಿರುವ ಗುಂಡಿಗಳು ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತಿದ್ದರೆ, ಪಾದಚಾರಿಗಳು ತಗ್ಗು ಗುಂಡಿಗಳಲ್ಲಿ ಬಿದ್ದು ಸ್ಮಾರ್ಟ್ ಸಿಟಿ ಟೆಂಡರ್ ದಾರರಿಗೆ ಹಿಡಿಶಾಪ ಹಾಕುತ್ತಿದ್ದದ್ದು ಕಂಡುಬಂತು.

Leave a Reply

Your email address will not be published. Required fields are marked *

error: Content is protected !!