CITU ಮುಖಂಡ ಭಾನುವಳ್ಳಿ ಬಸವರಾಜ್ ನಿಧನ: ಭಾವಪೂರ್ಣ ನಮನಗಳು

ಹರಿಹರ: ಹರಿಹರದ ಹಿರಿಯ ಸಿಐಟಿಯು ಮುಖಂಡ ಹಾಗೂ ಕುಮಾರಪಟ್ನಂ ನಲ್ಲಿರುವ ಗ್ರಾಸೀಂ ಡಿವಿಜನ್ ಕಾರ್ಮಿಕ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಭಾನುವಳ್ಳಿ ಬಸವರಾಜ್ ಅವರು ಇಂದು ಮಧ್ಯಾನ್ಹ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗ್ರಾಸೀಂ‌ ಡಿವಿಜನ್ ಕಂಪನಿಯಲ್ಲಿ ಕಾರ್ಮಿಕರನಾಗಿದ್ದ ಅವರು ಬಳಿಕ ಕಾಮ್ರೇಡ್ ವಿಜೆಕೆ ನಾಯರ್ ನೇತೃತ್ವದ ಸಿಐಟಿಯು ಕಾರ್ಮಿಕ ಸಂಘದ ನಾಯಕರಾಗಿ ಬಳಿಕ ಐದು ಬಾರಿ ಚುನಾಯಿತ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಅತ್ಯುತ್ತಮ ವೇತನ ಒಪ್ಪಂದ ಕೆಲಸ ಮಾಡಿದ ಹೆಗ್ಗಳಿಕೆ ಅವರದ್ದು ಮಾತ್ರವಲ್ಲ ಬಿರ್ಲಾ ಆಡಳಿತ ಮಂಡಳಿ ಅನುಸರಿಸುತ್ತಿದ್ದ ಹಲವು ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ಕಾರ್ಮಿಕರ ದೃಢವಾದ ಹೋರಾಟಗಳನ್ನು ಸಿಐಟಿಯು ನೇತೃತ್ವದಲ್ಲಿ ಬಸವರಾಜ್ ಮುನ್ನಡೆಸಿದ್ದರು.

ನಿವೃತ್ತಿ ಬಳಿಕವೂ ಹರಿಹರ ಕುಮಾರಪಟ್ನಂ ಸುತ್ತಮುತ್ತ ಅತ್ಯಂತ‌ ಶೋಷಣೆಗೊಳಗಾಗಿದ್ದ ಗುತ್ತಿಗೆ ಕಾರ್ಮಿಕರನ್ನು ‌ಸಂಘಟಿಸಿ ಅವರ ಹಕ್ಕುಗಳಿಗಾಗಿ ಸದಾ ಹೋರಾಟ‌ ನಡೆಸುತ್ತಿದ್ದರು. ಇತ್ತೀಚೆಗಷ್ಟೇ ಅವರ ಊರಾದ ಭಾನುವಳ್ಳಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಭೆಯನ್ನು ಸಂಘಟಿಸಿ ಅವರಿಗೆ  ಸೌಲಭ್ಯಗಳನ್ನು ಪಡೆಯಲು ಬೇಕಾದ ಸಂಘಟನೆಯ ಮಹತ್ವವನ್ನು  ಕಾರ್ಮಿಕರಿಗೆ ಮನವರಿಕೆ‌ ಮಾಡಲು ಶ್ರಮಿಸಿದ್ದರು. ಜೀವನುದ್ದಕ್ಕೂ ಅವಿವಾಹಿತರಾಗೇ ಉಳಿದ ಕಾಮ್ರೇಡ್ ಬಸವರಾಜ್ ಕೊನೆಯವರೆಗೂ ಕಾರ್ಮಿಕ ವರ್ಗದ ಹಕ್ಕುಗಳಿಗಾಗಿಯೇ ತಮ್ಮ ಬದುಕನ್ನು ಮೀಸಲಿಟ್ಟಿದ್ದರು.

ಕಾಮ್ರೇಡ್ ಭಾನುವಳ್ಳಿ ಬಸವರಾಜ್ ಅವರ ನಿಧನ ದಾವಣಗೆರೆ ಹಾಗೂ ವಿಶೇಷವಾಗಿ ಹರಿಹರ ಸುತ್ತಮುತ್ತಲಿನ ಕಾರ್ಮಿಕರ ಚಳವಳಿಗೆ ವಿಶೇಷವಾಗಿ ಸಿಐಟಿಯು ಸಂಘಟನೆಗೆ ಉಂಟಾದ‌ ನಷ್ಟವಾಗಿದೆ.‌ ಭಾನುವಳ್ಳಿ ಬಸವರಾಜ್ ನಿಧನಕ್ಕೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಸಮಿತಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸುತ್ತದೆ‌ ಮತ್ತು ಅವರ ಕುಟುಂಬದ ‌ಎಲ್ಲ ಸದಸ್ಯರಿಗೂ ತನ್ನ ತೀವ್ರ ಸಾಂತ್ವಾನ ಸಲ್ಲಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!