ಸಾಣೆಹಳ್ಳಿ ಮಠದ ಹಾಗೂ ಸುತ್ತಮುತ್ತಲಿನ ತೆಂಗಿಗೆ ರೋಗಬಾಧೆ.! ಕೃಷಿ ಅಧಿಕಾರಿಗಳಿಂದ ಪರಶೀಲನೆ
ಸಾಣೇಹಳ್ಳಿ: ಸಾಣೇಹಳ್ಳಿಇಲ್ಲಿನ ಶ್ರೀಮಠಕ್ಕೆ ಸೇರಿದ ಮತ್ತು ಸುತ್ತಮುತ್ತಲಿನ ತೆಂಗಿನ ತೋಟಗಳಿಗೆ ಕಳೆದ ಒಂದು ತಿಂಗಳಿನಿಂದ ತೀವ್ರ ರೋಗಬಾಧೆ ಕಾಣಿಸಿಕೊಂಡಿದ್ದು, ಈ ಬಗೆಗೆ ಅನೇಕ ರೈತರು ಶ್ರೀ ಪಂಡಿತಾರಾಧ್ಯ ಶಿವಾಚರ್ಯ ಸ್ವಾಮೀಜಿಗಳ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಸ್ವತಃ ಕೃಷಿಕರಾದ ಪೂಜ್ಯರು ಶ್ರೀಮಠಕ್ಕೆ ಸೇರಿದ ತೋಟಗಳನ್ನು ಪರೀಕ್ಷಿಸಿದಾಗ ರೋಗ ಇರುವುದನ್ನು ಕಂಡುಕೊಂಡರು. ತಕ್ಷಣ ಕೃಷಿ ಮಂತ್ರಿಗಳಾದ ಬಿ ಸಿ ಪಾಟೀಲರನ್ನು ಸಂರ್ಕಿಸಿ ಸಮಸ್ಯೆಯನ್ನು ಹೇಳಿದಾಗ ಅವರು ತಮ್ಮ ಆಪ್ತ ಸಹಾಯಕ, ಕೃಷಿ ನರ್ದೇಶಕ ಎ ಸಿ ಮಂಜು ಅವರಿಗೆ ಕೂಡಲೇ ಈ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ದರ್ಗದ ಸಿರಿ ರೈತ ಉತ್ಪಾದಕರ ಸಂಸ್ಥೆಯ ಸಿಇಓ ಮತ್ತು ನರ್ದೇಶಕರು, ಚಿತ್ರದರ್ಗದ ಬಬ್ಬೂರು ಫಾರಂನ ಕೃಷಿ ವಿಜ್ಞಾನಿ ಡಾ|| ಓಂಕಾರಪ್ಪ ಮತ್ತು ಹೊಸದರ್ಗ ತಾಲ್ಲೂಕು ಕೃಷಿ ಅಧಿಕಾರಿ ಈಶ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅವರೊಂದಿಗೆ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು ಈ ಭಾಗದ ಪ್ರಮುಖ ಬೆಳೆ ತೆಂಗು. ಕಳೆದ ಮರ್ನಾಲ್ಕು ರ್ಷಗಳ ಹಿಂದೆ ತೀವ್ರ ಬರಗಾಲಕ್ಕೆ ತುತ್ತಾಗಿ ಅನೇಕ ಮರಗಳು ನೆಲಕ್ಕುರುಳಿದವು. ಅಳಿದುಳಿದ ಮರಗಳಿಗೂ ನುಸಿ ಪೀಡೆ ತಗಲು ಇಳುವರಿಯಲ್ಲಿ ತೀವ್ರ ಕುಂಠಿತವಾಗಿತ್ತು. ಈಗ ನಾಲ್ಕೆದು ರ್ಷಗಳಿಂದ ಮಳೆ ಚೆನ್ನಾಗಿ ಬಂದಿದ್ದು ತೆಂಗಿನ ತೋಟಗಳು ಮರಳಿ ಸಮೃದ್ಧವಾಗಿದ್ದವು. ಆದರೆ ಈಗ ಹೊಸ ರೋಗ ಕಾಣಿಸಿಕೊಂಡು ರೈತರಲ್ಲಿ ಆತಂಕ ಮೂಡುವಂತಾಗಿದೆ. ಈ ಬಗೆಗೆ ಸರಿಯಾದ ಅಧ್ಯಯನ ನಡೆಸಿ ಸೂಕ್ತ ಪರಿಹಾರ ಸೂಚಿಸಬೇಕು ಎಂದರು.
ಕೃಷಿ ವಿಜ್ಞಾನಿ ಈ ಬಗೆಗೆ ಮಾತನಾಡಿ ಇದೊಂದು ಹೊಸ ರೋಗವಾಗಿದ್ದು ಸುರುಳಿ ಸುತ್ತುವ ಬಿಳಿನೊಣಗಳು ಇದಕ್ಕೆ ಮೂಲ ಕಾರಣವಾಗಿವೆ. ಈ ಹುಳುಗಳು ಗಾತ್ರದಲ್ಲಿ ಚಿಕ್ಕವಾಗಿದ್ದು ಬೆಳಗ್ಗೆ-ಸಂಜೆ ಬಹಳ ಚಟುವಟಿಕೆಯಿಂದ ಕೂಡಿರುತ್ತವೆ. ತೆಂಗಿನ ಗರಿಗಳ ಹಿಂಬದಿಯಲ್ಲಿ ಅಡಗಿ ಕುಳಿತು ರಸ ಹೀರುತ್ತವೆ. ನಂತರ ಜೇನುತುಪ್ಪದಂತಹ ದ್ರವವನ್ನು ಹೊರಚೆಲ್ಲುತ್ತವೆ. ಈ ದ್ರವ ತೆಂಗಿನ ಗರಿಗಳ ಮೇಲೆ ಬೀಳುತ್ತದೆ. ಆ ದ್ರವದ ಮೇಲೆ ಬೂಸ್ಟ್ ಬೆಳೆದು ಗರಿಗಳು ಕಪ್ಪಾಗುತ್ತದೆ. ಇದರಿಂದ ತೆಂಗಿನ ಮರಗಳ ದ್ವಿತಿಸಂಸ್ಲೇಷಣೆ ಕ್ರಿಯೆಗೆ ತೊಂದರೆಯಾಗಿ ಅವು ಶಕ್ತಿಹೀನವಾಗುತ್ತವೆ. ಇದರಿಂದ ಇಳುವರಿಯ ಮೇಲೆ ಗಾಢಪರಿಣಾಮ ಬೀರುತ್ತದೆ. ಇದೊಂದು ಹೊಸ ರೋಗವಾಗಿದ್ದು ಸಧ್ಯಕ್ಕೆ ನರ್ದಿಷ್ಟವಾದ ಯಾವುದೇ ಔಷಧೋಪಚಾರಗಳು ಇಲ್ಲ. ಆದರೂ ಪರಿಹಾರೋಪಯೋಗವಾಗಿ, ಕೀಟಗಳ ನಿಯಂತ್ರಣಕ್ಕಾಗಿ ಹಳದಿ ಅಂಟು ಬಲೆಗಳನ್ನು ಹಾಕಬಹುದು. ಶೇ. 5 ರಷ್ಟು ಬೇವಿನ ಎಣ್ಣೆಯನ್ನು ಸೋಪಿನ ದ್ರಾವಣದೊಂದಿಗೆ ಮಿಶ್ರಣ ಮಾಡಿ ಸಿಂಪಡಿಸಬಹುದು.
ಕಡಜದಂತಹ ಪರಾವಲಂಬಿ ಕೀಟಗಳನ್ನು ತಂದು ಬಿಟ್ಟರೆ ಅವು ಆ ಕೀಟಗಳನ್ನು ತಿನ್ನುವುದರಿಂದ ರೋಗ ತಹಬಂದಿಗೆ ಬರುವುದು. ಈ ಕ್ರಮಗಳನ್ನು ಸಾಮೂಹಿಕವಾಗಿ ಕೈಗೊಳ್ಳಬೇಕು. ಅಲ್ಲದೆ ತೆಂಗಿನ ಮರಗಳಿಗೆ ಬೇವಿನ ಹಿಂಡಿ, ಕೊಟ್ಟಿಗೆ ಗೊಬ್ಬರ, ಶಿಫಾರಸು ಮಾಡಿದ ರಸಗೊಬ್ಬರಗಳ ಮೂಲಕ ಸೂಕ್ತ ಪೋಷಕಾಂಶಗಳನ್ನು ನೀಡಿ ಅವು ಶಕ್ತಿಗುಂದಂತೆ ನೋಡಿಕೊಳ್ಳುವುದು ಬಹಳ ಅವಶ್ಯ. ನುಸಿಪೀಡೆಯಂತೆ ಇದೂ ಸಹ 2-3 ರ್ಷಗಳ ಕಾಲ ಇದ್ದು ನಂತರ ಪ್ರಕೃತಿದತ್ತವಾಗಿಯೇ ನಿಯಂತ್ರಣಕ್ಕೆ ಬರುವುದು ಎಂದು ತಿಳಿಸಿದರು.
ಈ ಬಗೆಗೆ ಹೆಚ್ಚಿನ ಮಾಹಿತಿಗಾಗಿ ಮೊ ಸಂಖ್ಯೆ: 7760369872 ಕ್ಕೆ ಸಂರ್ಕಿಸಬಹುದು.