ಜ. 20ಕ್ಕೆ ಬಾಡದ ಆನಂದರಾಜ್ ರಿಗೆ ವಿಶ್ವ ಭಾರತಿ ಪ್ರತಿಭಾ ಪುರಸ್ಕಾರ
ದಾವಣಗೆರೆ: ಹರಿಹರ ತಾಲೂಕಿನ ರಾಜನಹಳ್ಳಿ ವಿಶ್ವಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 32 ನೇ ವರ್ಷದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜ. 20ರ ಸಂಜೆ 4ರಿಂದ ರಾಜನಹಳ್ಳಿಯ ಶ್ರೀ ಬೀರಲಿಂಗೇಶ್ವರ ಆವರಣದಲ್ಲಿ ನಡೆಯಲಿದ್ದು, ಅಂದಿನ ಕಾರ್ಯಕ್ರಮದಲ್ಲಿ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದ್ ರಾಜ್ ಅವರಿಗೆ ವಿಶ್ವ ಭಾರತಿ ಪ್ರತಿಭಾ ಪುರಸ್ಕಾರ ನೆರವೇರಲಿದೆ.
ಹರಿಹರ ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕರಾದ ಬಿ. ಪಿ. ಹರೀಶ್, ಹೆಚ್. ಎಸ್. ಶಿವಶಂಕರ್ ಕಾರ್ಯಕ್ರಮದ ಉದ್ಘಾಟನೆನೆರವೇರಿಸಲಿದ್ದಾರೆ. ವಿಶ್ವಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಹೆಚ್. ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಇದೇ ವೇಳೆ ಸಾಕ್ಷಿ ಟಿವಿ ವರದಿಗಾರ ಬಿ. ಬಿ. ಮಲ್ಲೇಶ್, ಕಲಾವಿದ ರಂಗನಾಥ ಜಿಗಳಿ ಅವರಿಗೂ ವಿಶ್ವ ಭಾರತಿ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ಮುಖ್ಯ ಅತಿಥಿಗಳಾಗಿ ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಲಂಕೇಶ್, ಉಪಾಧ್ಯಕ್ಷೆ ಹೇಮಾವತಿ ಪರಶುರಾಮಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಎಂ. ನಾಗೇಂದ್ರಪ್ಪ, ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪೂಜಾರ್, ಕೆ. ಎಸ್. ದೇವೇಂದ್ರಪ್ಪ ಕುಣೇಬೆಳಕೆರೆ, ವರ್ತಕ ಸಿ. ಎನ್. ಹುಲಿಗೇಶ್, ಎಂ. ಹನುಮಂತಪ್ಪ, ಎ. ಆರ್. ರಾಮಕೃಷ್ಣ, ಕೃಷ್ಣಪ್ಪ, ವೈ. ಕೃಷ್ಣಮೂರ್ತಿ, ಮಲ್ಲಿನಾಥ್,
ಗಣೇಶ್ ಕೆ. ದುರ್ಗದ್, ಆವರಗೆರೆ ಚಂದ್ರು, ಪುರಂದರ ಲೋಕಿಕೆರೆ, ಪ್ರಕಾಶ್, ಶ್ರೀಧರ್ ಚನ್ನಕೇಶವಶೆಟ್ಟಿ, ಸುಭಾಶ್ ಚಂದ್ರಬೋಸ್, ಕೆ. ವಿ. ನಾಗರಾಜ್, ಗಣಪತಿ ಮಾಳಂಜಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರಿನ ಆರ್ಯ ಶಂಭು ಚೈತ್ರ ಆರ್ಯ ಕ್ರಿವ್ ಡ್ಯಾನ್ಸ್ ಅಕಾಡೆಮಿ ಹಾಗೂ ದಾವಣಗೆರೆಯ ಕಿಂಗ್ಸ್ ಡ್ಯಾನ್ಸ್ ಸ್ಟುಡಿಯೋದ ಶ್ರೀಕಾಂತ್ ನಾಯ್ಕ್ ಎಲ್. ನೃತ್ಯ ಸಂಯೋಜನೆ ಮಾಡಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರು ಹಾಗೂ ಸಂಸ್ಥೆಯ ಕಾರ್ಯದರ್ಶಿ ಹೆಚ್.ಮಂಜುನಾಥ್ ತಿಳಿಸಿದ್ದಾರೆ.