ಸಾಮಾನ್ಯ ಜ್ಞಾನ ಇಲ್ಲದ ಕಾಂಗ್ರೆಸ್ ನಾಯಕರು , ಮುಖಂಡರ ಬದಲಿಗೆ ಅವರೇ ಚುನಾವಣೆಗೆ ಸ್ಪರ್ಧಿಸಲಿ: ಎ.ವೈ.ಪ್ರಕಾಶ್

ದಾವಣಗೆರೆ: ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ತಮ್ಮ ಮುಖಂಡರಿಗೆ ಅಭ್ಯರ್ಥಿಯಾಗಲು ತೊಂದರೆ ಆದರೆ ತಾವೇ ಉತ್ತರ ಕ್ಷೇತ್ರದಿಂದ ಸ್ವರ್ಧಿಸಲು ಎರಡನೆಯ ಹಂತದ ಕಾಂಗ್ರೆಸ್ಸಿನ ಕೆಲವು ನಾಯಕರು ಕನಸು ಕಾಣುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಆಂತರಿಕವಾಗಿ ತಮ್ಮ ಹಿಂಬಾಲಕರ ನಡುವೆ ತಮ್ಮ ಮುಖಂಡರಿಗಿAತ ತಾವೇ ಮತಗಳಿಕೆಯಲ್ಲಿ ಸಾಧಕರು ಎಂದು ಕೆಲವು ನಾಯಕರು ಹೇಳಿಕೊಳ್ಳುತ್ತಿದ್ದು, ಅವರೇ ಮುಂಬರುವ ಚುನಾವಣೆಯಲ್ಲಿ ಸ್ವರ್ಧಿಸಲಿ ಎಂದು ಬಿಜೆಪಿ ಮುಖಂಡರು ಹಾಗೂ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ವೈ.ಪ್ರಕಾಶ್ ಕಾಂಗ್ರೆಸ್‌ನ ಮುಖಂಡರಿಗೆ ಸಲಹೆ ನೀಡಿದ್ದಾರೆ.
ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ತಮ್ಮ ಮುಖಂಡರಿಗೆ ತಮ್ಮ ವಾರ್ಡ್ ನಲ್ಲಿ ಮತ ಗಳಿಕೆಯಲ್ಲಿ ಸಾಧಸದವರು. ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ತಾವು ಮುನ್ನಡೆ ಸಾಧಿಸದವರು ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ತಾವು ಮುನ್ನಡೆ ಗಳಿಸುತ್ತಾರೆ. ತಮ್ಮ ಮುಖಂಡರಿಗಿAತ ತಾವೇ ಜನಪ್ರಿಯರು ಎಂದು ಅಲ್ಲಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಅಂತವರು ತಮ್ಮ ಮುಖಂಡರ ಬದಲಿಗೆ ತಾವೇ ಮುಂಬರುವ ಚುನಾವಣೆಯಲ್ಲಿ ವಿಧಾನಸಭೆಗೆ ಸ್ಪರ್ಧಿಸಲಿ ಎಂದು ಹೇಳಿದ್ದಾರೆ.
ಮುಖಂಡರನ್ನು ಗೆಲ್ಲಿಸಲಾಗದವರು ತಮ್ಮ ಮುಖಂಡರಿಗಿAತ ತಾವೆ ಮತಗಳಿಗೆಯಲ್ಲಿ ಸಾಧಕರು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಕಾಂಗ್ರೆಸ್ ನ ೨ನೇ ಹಂತದ ನಾಯಕರೆಂದು ಜಿಲ್ಲೆಯಲ್ಲಿ ಹೇಳಿಕೊಳ್ಳುವ ಕಾಂಗ್ರೆಸ್ ಮುಖಂಡರಿಗೆ ಸಲಹೆ ನೀಡಿದ್ದಾರೆ.
ಗುತ್ತಿಗೆದಾರ ಕೆಂಪಣ್ಣ ವಿರುದ್ಧ ಸಚಿವ ಮುನಿರತ್ನ ಕೂಡಿದ್ದ ಮಾನವನಷ್ಷದ ಮೊಕದ್ದಮೆಯಲ್ಲಿ ನ್ಯಾಯಾಲಯ ಕೆಂಪಣ್ಣ ಅವರನ್ನು ಬಂಧಿಸುವAತೆ ಆದೇಶಿಸಿದ್ಧರಿಂದ ಪೋಲಿಸರು ಬಂಧನ ಮಾಡಿರುತ್ತಾರೆ. ಬಂಧನ ವಿರೋಧಿಸಿ ಪ್ರರಿಭಟನೆ ನಡೆಸಿದ ಈ ಎರಡನೇ ಹಂತದ ಕಾಂಗ್ರೆಸ್ನ ಕಾರ್ಯಕರ್ತರಿಗೆ ಯಾವುದನ್ನು ವಿರೋಧಿಸಬೇಕು ಯಾವುದನ್ನು ವಿರೋಧಿಸಬಾರದು ಎಂಬಸಾಮಾನ್ಯ ಜ್ಞಾನವೂ ಇಲ್ಲ.
ಈ ಹಿಂದೆ ಸೋನಿಯಾ ಗಾಂಧಿಯವರನ್ನು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದಾಗ ಅದನ್ನು ಸಹ ವಿರೋಧ ಮಾಡಿದ್ದ ಕಾಂಗ್ರೆಸ್ಸಿಗರಿಗೆ ದೇಶದ ಕಾನೂನು, ನ್ಯಾಯಾಂಗ, ಕಾರ್ಯಾಂಗ ಇವುಗಳ ಬಗ್ಗೆ ಯಾವ ರೀತಿ ಗೌರವ ಕೊಡಬೇಕು ಎಂಬ ಸಾಮಾನ್ಯ ಜ್ಞಾನವು ಇಲ್ಲ ಎಂದು ದಾವಣಗೆರೆ ಜಿಲ್ಲೆಯ ಕಾಂಗ್ರೆಸ್‌ನ ಎರಡನೆಯ ಹಂತದ ಕಾರ್ಯಕರ್ತರ ನಡೆಯನ್ನು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!