ಕಾಂಗ್ರೆಸ್ ನಿಂದ ದಾವಣಗೆರೆಯಲ್ಲಿ ಕುಕ್ಕರ್ ಹಂಚಿಕೆ

ಕಾಂಗ್ರೆಸ್ ನಿಂದ ದಾವಣಗೆರೆಯಲ್ಲಿ ಕುಕ್ಕರ್ ಹಂಚಿಕೆ

ದಾವಣಗೆರೆ: ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದವರು ಹಂಚಿದ ಸೀರೆ ಹಾಗೂ ಕುಕ್ಕರ ಸಹಿತ ಶನಿವಾರ ಸುದ್ದಿಗೋಷ್ಠಿ ನಡೆಸಿರುವ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಕಾಂಗ್ರೆಸ್ ಪಕ್ಷವನ್ನೂ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಚುನಾವಣಗೆ ಒಂದೂವರೆ ತಿಂಗಳು ಮೊದಲೇ ಕಾಂಗ್ರೆಸ್ ಪಕ್ಷ ಮತದಾರರಿಗೆ ಸೀರೆ, ಕುಕ್ಕರ್ ಹಂಚಿ ಆಮಿಷ ತೋರಿಸುತ್ತಿದೆ ಎಂದವರ ಆಪಾದಿಸುತ್ತಾ, ಜಿಲ್ಲಾಧಿಕಾರಿ ಹಾಗೂ ಎಸ್ಪಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ನಾಗರಕಟ್ಟೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಮನೆಯಲ್ಲಿಯೇ ಹಂಚಿದ್ದ ಕುಕ್ಕರ್ ಸ್ಫೋಟಗೊಂಡು ಕಣ್ಣಿಗೆ ಹಾನಿಯಾಗಿದೆ ಕೊನೆ ಪಕ್ಷ ಉತ್ತಮ ಗುಣಮಟ್ಟದ ಕುಕ್ಕರ್ ಗಳನ್ನಾದರೂ ಹಂಚಲಿ. 10-15 ಸಾವಿರ ರೂ ಮೌಲ್ಯದ ರೇಷ್ಮೆ ಸೀರೆಗಳನ್ನು ನೀಡಲಿ ಎಂದು ಜಾಧವ್ ಹೇಳಿದರು.
ನಗರವನ್ನು ಸಿಂಗಾಪುರ ಮಾಡಿದ್ದೇ ನಾವು ಎಂದು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ ಮುಖಂಡರು, ಆಮಿಷ ತೋರಿಸಿ ಗೆಲ್ಲುವ ಕನಸು ಕಾಣುತ್ತಿದ್ದಾರೆ ಎಂದು ಹೇಳಿದರು.
74 ವರ್ಷಗಳ ಹಿಂದೆ ಶಾಮನೂರು ಶಿವಶಂಕರಪ್ಪನವರ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ ? ಎಂದು ಪ್ರಶ್ನಿಸಿದ ಯಶವಂತರಾವ್ ಜಾಧವ್, ಅವರ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು ಇವರಿಗೆ ಶಾಸಕ, ಸಂಸದರ ಸ್ಥಾನಗಳು ಬೇಕೇ ಹೊರತು, ನಗರ ಅಭಿವೃದ್ಧಿ ಮಾಡಲಲ್ಲ. ಆದ್ದರಿಂದಲೇ ಎಲ್ಲಾ ಚುನಾವಣೆಗೆ ಅವರೇ ಸ್ಪರ್ಧಿಸುತ್ತಾರೆ ಎಂದರು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಮತದಾರರು ಎಚ್ಚೆತ್ತುಕೊಂಡಿದ್ದಾರೆ. ಕಾಂಗ್ರೆಸ್‌ನ ಕುತಂತ್ರ ರಾಜಕಾರಣ ಗೊತ್ತಾಗಿದೆ. ಸುಳ್ಳು ಆಶ್ವಾಸನೆಗಳನ್ನು ನಂಬಿ ಓಟು ಹಾಕುತ್ತಿದ್ದ ಕ್ಷೇತ್ರದಲ್ಲಿರುವ 75 ಸಾವಿರ ಅಲ್ಪಸಂಖ್ಯಾತ ಮತದಾರರೂ ಸಹ ಬಿಜೆಪಿ ಬಗ್ಗೆ ಒಲವು ತೋರಿಸುತ್ತಿದ್ದಾರೆ. ಸಾವಿರಾರು ಜನರು ಬಿಜೆಪಿ ಸೇರುತ್ತಿದ್ದಾರೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸ್ಪರ್ಧಿಸಲು ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ವರುಣ, ಬದಾಮಿ ನಂತರ ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಈಗ ಅಲ್ಲಿಯೂ ಸೋಲುತ್ತೇವೆಂಬ ಭಯದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಗತಿಯೇ ಹೀಗಾದರೆ, ಬೇರೆಯವರ ಗತಿಏನು ಎಂದು ಜಾಧವ್ ಪ್ರಶ್ನಿಸಿದರು.


ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರುಗಳಾದ ಲೋಕಿಕೆರೆ ನಾಗರಾಜ್, ಸೋಗಿ ಶಾಂತಕುಮಾರ್, ರಾಜನಹಳ್ಳಿ ಶಿವಕುಮಾರ್, ಗೋಪಾಲರಾವ್ ಮಾನೆ, ಶಿವನಗೌಡ ಟಿ.ಪಾಟೀಲ್, ಟಿಂಕರ್ ಮಂಜಣ್ಣ, ಹನುಮಂತಪ್ಪ, ಸುರೇಶ್ ಶಿಂಧೆ, ಪವನ್, ಪ್ರವೀಣ್ ಜಾಧವ್, ಪಿ.ಸಿ. ಶ್ರೀನಿವಾಸ್, ಎಲ್.ಡಿ. ಗೋಣೆಪ್ಪ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!