Corona Vaccine Drama Video: “ಲಸಿಕೆ ಹಾಕಿಸಿಕೊಳ್ಳಲ್ಲ ಅಂದ್ರೆ ಹಾಕಿಸಿಕೊಳ್ಳಲ್ಲಷ್ಟೇ.!” ಈ ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ.!

ದಾವಣಗೆರೆ: ಲಸಿಕೆ ಹಾಕಿಸಿಕೊಳ್ಳಲ್ಲ ಅಂದ್ರೆ ಹಾಕಿಸಿಕೊಳ್ಳಲ್ಲಷ್ಟೇ.. ಈ ಗುಳಿಗಿ ಬಿಟ್ಟು ಬೇರೆ ತಗೋಳಲ್ಲ. ನೀವೇನೇ ಹೇಳಿದ್ರು ಇಂಜೆಕ್ಷನ್ ಮಾಡುಸ್ಕೊಳ್ಳಲ್ಲ ಎನ್ನುತ್ತಾ ವೈದ್ಯ, ಶೂಶ್ರೂಷಕರು ಮತ್ತು ತಹಶೀಲ್ದಾರ್ ಮಾತಿಗೆ ಕಿಂಚಿತ್ತೂ ಬೆಲೆಕೊಡದೇ ಹೈಡ್ರಾಮಾ ನಡೆಸಿರುವ ಮಹಿಳೆಯೋರ್ವಳ ವೀಡಿಯೋ ಒಂದು ಈಗ ಫುಲ್ ವೈರಲ್ ಆಗಿದೆ.
ಕೋವಿಡ್ ಮೂರನೇ ಅಲೆ ತಡೆಗಟ್ಟಲು ಶತಾಯ ಗತಾಯ ಹರಸಾಹಸ ಪಡುತ್ತಿರುವ ಆರೋಗ್ಯ ಇಲಾಖೆ ಲಸಿಕಾಕರಣವನ್ನು ಚುರುಕುಗೊಳಿಸಿದೆ. ಲಸಿಕೆ ಪಡೆಯಲು ಶುರುವಾತಿನಲ್ಲಿ ಜನರು ನಿರ್ಲಕ್ಷ್ಯ ತೋರಿದರಾದರೂ ಎರಡನೇ ಅಲೆಯಲ್ಲುಂಟಾದ ಸಾವು-ನೋವುಗಳನ್ನು ಅರಿತುಕೊಂಡು ಲಸಿಕೆ ಕೊರತೆ ಉಂಟಾಗುವ ಮಟ್ಟಕ್ಕೆ ತಾ ಮುಂದು ನೀ ಮುಂದು ಎಂದುಕೊಂಡು ಲಸಿಕೆ ಪಡೆದರು.ಆದರೆ, ಗ್ರಾಮೀಣ ಭಾಗದ ಜನರಲ್ಲಿ ಮಾತ್ರ ಲಸಿಕೆ ಬಗ್ಗೆ ಇನ್ನೂ ಪೂರ್ವ ಗ್ರಹ ಹೋದಂತೆ ಕಾಣುತ್ತಿಲ್ಲ. ಅಲ್ಲಿನ ಬಹುಪಾಲು ಜನರು ಲಸಿಕೆಗೆ ಹಿಂದೇಟು ಹಾಕುತ್ತಲೇ ಇದ್ದಾರೆ.
ಮನೆಮನೆಗೆ ತೆರಳಿ ಲಸಿಕೆ ಪಡೆಯುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಜಾಗೃತಿ ಮೂಡಿಸಲು ಯತ್ನಿಸಿದರೂ ಸಹ ಇದರಿಂದ ಉಪಯೋಗ ಆಗುತ್ತಿರುವುದಂತೂ ಕಡಿಮೆಯೇ ಅನ್ನಬಹುದು.
ಇದಕ್ಕೆ ತಾಲ್ಲೂಕಿನ ಅಣಜಿ ಗ್ರಾಮದಲ್ಲಿನ ಈಗಷ್ಟೆ ನಡೆದಿರುವ ಘಟನೆಯೊಂದು ಸಾಕ್ಷಿಯಾಗಿದೆ. ಅಕ್ಕಮ್ಮ ಎನ್ನುವ ಮಹಿಳೆಗೆ ಖುದ್ದು ತಹಶೀಲ್ದಾರ್ ಹೋಗಿಯೇ ಲಸಿಕೆ ಪಡೆಯಿರಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರೂ ಆಕೆ ಲಸಿಕೆ ಪಡೆಯಲು ಹೈಡ್ರಾಮ ನಡೆಸಿದ್ದಾಳೆ. ಲಸಿಕೆಗೆ ಹಿಂದೇಟು ಹಾಕಿದ್ದಾಳೆ.
*ಕೊವಿಡ್ ಲಸಿಕೆ ನಿರಾಕರಿಸಿದ ಮಹಿಳೆಯ ಹೈಡ್ರಾಮಾ ವಿಡಿಯೋ.!*
ಮಹಿಳೆಗೆ ಸಾಮಾದಾನ ಮಾಡಲು ದಾವಣಗೆರೆ ತಹಸೀಲ್ದಾರ್ ಗಿರೀಶ್ ಬರಬೇಕಾಯಿತು. ಅವರ ಮುಂದೆ ನಾನು ಇಂಜಿಕ್ಷನ್ ಮಾಡಿಸಿಕೊಳ್ಳುವುದಿಲ್ಲ.ನಾನು ಬೆಂಗಳೂರುನ ರವಿ ಡಾಕ್ಟರ್ ಬಳಿ ತೋರುಸ್ಕೂತೀನಿ, ನಂಗೆ ಏನು ಆಗಿಲ್ಲ ತುಂಬಾ ಚನ್ನಾಗಿದೀನಿ ಎಂದು ಹಟ ಹಿಡಿದಿದರು.
ತಾಹಶೀಲ್ದಾರ್ ಗಿರೀಶ್, ಆರೋಗ್ಯ ಇಲಾಖೆ ಸಿಬ್ಬಂದಿ ,ಪೊಲೀಸರು ಮನವೊಲಿಸಿದರು ಹಠವನ್ನ ಬಿಡಲಿಲ್ಲ ಈ ಮಹಿಳೆ ಅಕ್ಕಮ್ಮ. ಲಸಿಕೆ ನಂತರ ಗುಳಿಗೆ ಕೊಡ್ತಿವಿ ಅಂದಿದ್ದಕ್ಕೆ, ನನಗೆ ಬಿಪಿ ಇದೆ, ಈ ಗುಳಿಗೆ ಬಿಟ್ಟು ಮತ್ಯಾವುದೇ ಗುಳಿಗೆ ತಗೋಳೋದಿಲ್ಲ ಎಂದರು,ನಾನು ಇಂಜಿಕ್ಷನ್ ಮಾಡುಸ್ಕೋಳೋದಿಲ್ಲ, ನನ್ ಮಕ್ಕಳಿಗೆ ಕೂಳು ಮಾಡಾಕೋರು ಯಾರು ಇಲ್ಲ ನನಗೆ ಏನಾದರೂ ಅದರೆ ನೀವೇ ಕಾರಣ ಆಗ್ತಿರಾ ಎಂದು ಪಟ್ಟು ಹಿಡಿದು ಬಿಟ್ಟರು.
ಕೊನೆಗೆ ನಿನಗೆ ಏನು ಆಗೋದಿಲ್ಲ ನಾನ್ ಇರ್ತಿನಿ ಎಂದು ಧೈರ್ಯ ಹೇಳಿ ಲಸಿಕೆ ಹಾಕಿಸಿದರು ದಾವಣಗೆರೆ ತಹಶೀಲ್ದರ್ ಗಿರೀಶ್.ಕೊನೆಗೂ ಅಕ್ಕಮ್ಮ ನನ್ನು ಮನವೊಲಿಸಿ ಲಸಿಕೆ ಹಾಕಿಸಿದ್ದಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಸಮಾಧಾನ ಪಟ್ಟುಕೊಂಡರು.
ದಾವಣಗೆರೆ ತಾಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು, ಗ್ರಾಮಗಳಲ್ಲಿ ಲಸಿಕೆ ಪಡೆಯದವರ ಬಳಿ ಖುದ್ದು ತಾವೇ ಹೋಗಿ ಮನವೊಲಿಸಿ ಲಸಿಕೆಯನ್ನು ಹಾಕಿಸುತ್ತಿದ್ದಾರೆ ತಹಶೀಲ್ದಾರ್.
ಗ್ರಾಮೀಣ ಭಾಗದ ಜನರು ಇನ್ನಾದರೂ ಎಚ್ಚೆತ್ತುಕೊಂಡು ಲಸಿಕೆ ಪಡೆಯುವ ಮೂಲಕ ಕರೋನಾ ಹೊಡೆದೋಡಿಸಲು ಕೈಜೋಡಿಸುವ ಅಗತ್ಯ ಈಗ ಜರೂರಿದೆ.